Advertisement

ವೈರಸ್ ತಡೆಗಟ್ಟಲು ಟ್ರಂಪ್ ಸರ್ಕಾರ ಸಂಪೂರ್ಣ ವಿಫಲ: ಜೋ ಬಿಡೆನ್ ಆರೋಪ

08:30 AM May 10, 2020 | Mithun PG |

ವಾಷಿಂಗ್ಟನ್:ಕೋವಿಡ್ 19  ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಟ ನಡೆಸುವಲ್ಲಿ ಮತ್ತು ಅಗತ್ಯ ಮುನ್ನೆಚ್ಚರಿಕೆ ವಹಿಸುವಲ್ಲಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸಂಪೂರ್ಣವಾಗಿ ವಿಫಲರಾಗಿದ್ದು, ಇವರ ಸಂಪೂರ್ಣ ಆರ್ಥಿಕ ಕಾರ್ಯತಂತ್ರವು ಶ್ರೀಮಂತ ವರ್ಗಗಳಿಗೆ  ಸಹಾಯ ಮಾಡುವುದರ ಮೇಲೆ ಕೇಂದ್ರೀಕರಿಸಿದೆ ಎಂದು ಡೆಮಾಕ್ರಟಿಕ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ  ಮತ್ತು ಅಮೆರಿಕದ ಮಾಜಿ ಉಪಾಧ್ಯಕ್ಷ ಜೋ ಬಿಡನ್ ಆರೋಪಿಸಿದ್ದಾರೆ.

Advertisement

ಏಪ್ರಿಲ್‌ನಲ್ಲಿ ದೇಶದಲ್ಲಿ 2.05 ಕೋಟಿ ಜನರು ಉದ್ಯೋಗ ಕಳೆದುಕೊಂಡಿದ್ದಾರೆ. ಮಹಾ ಆರ್ಥಿಕ ಕುಸಿತದ ನಂತರದ ಗರಿಷ್ಠ  ನಿರುದ್ಯೋಗ ದರವು ಈಗ ಶೇಕಡಾ 14.7 ರಷ್ಟಿದೆ . ದಶಕಗಳಲ್ಲೇ ಅಮೆರಿಕಾ ಇಂತಹ ದುರಾಡಳಿತವನ್ನು ಕಂಡಿಲ್ಲ. ವೈರಸ್ ಬಾರದಂತೆ ಮುನ್ನೆಚ್ಚರಿಕೆ ಕೈಗೊಳ್ಳುವಲ್ಲಿ ಟ್ರಂಪ್ ಸಂಪೂರ್ಣ ವಿಫಲರಾಗಿದ್ದಾರೆಂದು ಕಿಡಿಕಾರಿದ್ದಾರೆ.

ಇತ್ತೀಚಿನ ಅತ್ಯಂತ ಕೆಟ್ಟ ಆರ್ಥಿಕ ಪರಿಸ್ಥಿತಿಯ ವಿರುದ್ಧ ನಮ್ಮ ರಾಷ್ಟ್ರವನ್ನು ರಕ್ಷಿಸಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವಲ್ಲಿ ಟ್ರಂಪ್ ಸರಕಾರ ವಿಳಂಬ ಮಾಡುತ್ತಿದೆ. ಕಳೆದ ಮೂರು ವರ್ಷಗಳಲ್ಲಿ ಈ ಸರ್ಕಾರ ಆರ್ಥಿಕ ಬಲದ ಪ್ರಮುಖ ಸ್ಥಂಭಗಳನ್ನು ಉರುಳಿಸಿದೆ . ಟ್ರಂಪ್ ಸರ್ಕಾರದ ನೀತಿಯಿಂದಾಗಿ ಸಣ್ಣ ಉದ್ಯಮಗಳು ನೆಲಕಚ್ಚಿವೆ ಎಂದರು.

ಅಮೆರಿಕಾದಲ್ಲಿ ಕೋವಿಡ್ 19 ಮರಣಮೃದಂಗವನ್ನೇ ಬಾರಿಸಿದ್ದು ಇಲ್ಲಿಯವರೆಗೂ 78,615 ಜನರು ಬಲಿಯಾಗಿದ್ದಾರೆ. ಸೋಂಕಿತರ ಪ್ರಮಾಣ ಕೂಡ ಏರುಗತಿಯಲ್ಲಿ ಸಾಗಿದ್ದು 13,21,785 ಮಂದಿ ವೈರಾಣುವಿನಿಂದ ಬಳಲುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next