ವಾಷಿಂಗ್ಟನ್: 2024ರ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಒಂದು ವೇಳೆ ರಿಪಬ್ಲಿಕನ್ ಪಕ್ಷದ ಬೆಂಬಲ ದೊರೆಯದಿದ್ದರೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುವ ಇಂಗಿತವನ್ನು ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವ್ಯಕ್ತಪಡಿಸಿದ್ದಾರೆ.
ಪ್ರಸ್ತುತ ಫ್ಲೋರಿಡಾ ಗವರ್ನರ್ ಆಗಿರುವ ರಾನ್ ಡಿಸಾಂಟಿಸ್(44) ಕೂಡ ರಿಪಬ್ಲಿಕನ್ ಪಕ್ಷದ ಪ್ರಬಲ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಜತೆಗೆ ರಿಪಬ್ಲಿಕನ್ ಪಕ್ಷದ ಹಲವು ಮುಖಂಡರು ಅವರಿಗೆ ಬೆಂಬಲ ಸೂಚಿದ್ದಾರೆ. ಆದರೆ ಅಮೆರಿಕ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್(76) ಅವರಿಗೆ ಈಗಲೂ ಅನೇಕ ರಿಪಬ್ಲಿಕನ್ ಮುಖಂಡರು ಹಾಗೂ ಅಪಾರ ಮಂದಿಯ ಬೆಂಬಲವಿದೆ.
ಈ ಕುರಿತು ಪ್ರತಿಕ್ರಿಯಿಸಿದ ಟ್ರಂಪ್, “ರಾನ್ ಡಿಸಾಂಟಿಸ್ ರಾಜಕೀಯ ಮಾಡುತ್ತಿದ್ದಾರೆ. ಇದೊಂದು ಸುಳ್ಳು ಸುದ್ದಿ. ಒಂದು ವೇಳೆ ನೀವು ಅಧ್ಯಕ್ಷೀಯ ಚುನಾವಣೆ ಸ್ಪರ್ಧೆ ಬಗ್ಗೆ ರಾನ್ ಅವರನ್ನು ಪ್ರಶ್ನಿಸಿದರೆ ಅವರು, “ತಾನು ಗವರ್ನರ್ ಹುದ್ದೆ ಬಗ್ಗೆ ಗಮನಹರಿಸಿದ್ದು, ಭವಿಷ್ಯದ ಬಗ್ಗೆ ಇನ್ನೂ ನಿರ್ಧಾರ ತಾಳಿಲ್ಲ’ ಎಂದು ಹೇಳುತ್ತಾರೆ. ಆದರೆ ಇದು ಸರಿಯಾದ ಉತ್ತರವಲ್ಲ,’ ಎಂದು ಹೇಳಿದ್ದಾರೆ.