Advertisement

ಟ್ರಂಪ್‌ ಟ್ವಿಟರ್‌ ಖಾತೆ ಮೇಲಿನ ನಿಷೇಧ ತೆರವು

12:35 AM Nov 21, 2022 | Team Udayavani |

ವಾಷಿಂಗ್ಟನ್‌: ಅಮೆರಿಕ ಮಾಜಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರ ಟ್ವಿಟರ್‌ ಖಾತೆ ಮೇಲೆ ವಿಧಿಸಿದ್ದ ನಿರ್ಬಂಧ­ವನ್ನು ಟ್ವಿಟರ್‌ ಹಿಂಪಡೆದಿದೆ.

Advertisement

ಟ್ವಿಟರ್‌ ಸಮೀಕ್ಷೆಯಲ್ಲಿ ಕಡಿಮೆ ಅಂತರದಲ್ಲಿ ಟ್ರಂಪ್‌ ಪರ ಮತಗಳು ಬಂದಿರುವ ಹಿನ್ನೆಲೆಯಲ್ಲಿ ಈ ಕ್ರಮಕ್ಕೆ ಟ್ವಿಟರ್‌ ಮುಂದಾಗಿದೆ.

“ಅಮೆರಿಕ ಮಾಜಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರ ಟ್ವಿಟರ್‌ ಖಾತೆಯನ್ನು ಮರು ಸ್ಥಾಪಿಸಬೇಕೆ?. ಈ ಪ್ರಶ್ನೆಗೆ ಹೌದು ಅಥವಾ ಇಲ್ಲ ಎಂದು ಪ್ರತಿಕ್ರಿಯಿಸಿ’ ಎಂದು ಎಲಾನ್‌ ಮಸ್ಕ್ ಶನಿವಾರ ಸಮೀಕ್ಷೆ ಆರಂಭಿಸಿದ್ದರು. ಈ ಸಮೀಕ್ಷೆಯಲ್ಲಿ 15 ಮಿಲಿಯನ್‌ ಜನರು ಪಾಲ್ಗೊಂಡಿ ದ್ದರು. ಈ ಪೈಕಿ ಹೌದು ಎಂದು ಶೇ. 51.8 ರಷ್ಟು ಜನರು ಹಾಗೂ ಇಲ್ಲ ಎಂದು ಶೇ. 48.2ರಷ್ಟು ಜನರು ಮತ ಹಾಕಿದ್ದರು.

ಮತ್ತಷ್ಟು ಉದ್ಯೋಗಿಗಳ ವಜಾ: ಟ್ವಿಟರ್‌ನ ಮಾರ್ಕೆಟಿಂಗ್‌ ವಿಭಾಗದಿಂದ ಉದ್ಯೋಗಿಗಳನ್ನು ಕೆಲಸದಿಂದ ತೆಗೆದು ಹಾಕಲು ಮಾಲೀಕ ಎಲಾನ್‌ ಮಸ್ಕ್ ಮುಂದಾಗಿದ್ದಾರೆ. ಈ ಬಗ್ಗೆ ಸೋಮವಾರ ಅಧಿಕೃತ ಪ್ರಕಟಣೆ ಹೊರಬೀಳುವ ಸಾಧ್ಯತೆ ಇದೆ. ಇದೇ ವೇಳೆ, ಟ್ವಿಟರ್‌, ಮೆಟಾ ಅನಂತರ ಇದೀಗ ಜೊಮೆಟೊ ತನ್ನ 3,800 ಉದ್ಯೋಗಿಗಳ ಪೈಕಿ 3,800 ಶೇ.3 ಮಂದಿಯನ್ನು ತೆಗೆದು ಹಾಕಲು ಮುಂದಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next