Advertisement

ಸೆಕ್ಸ್‌ಗಾಗಿ ಪೀಡಿಸುತ್ತಿದ್ದ ಆಶ್ರಯದಾತೆಯನ್ನು ಕೊಲೆಗೈದ ಬಾಲಕ!

01:56 PM Sep 22, 2017 | |

ಹೊಸದಿಲ್ಲಿ: ರಾಷ್ಟ್ರ ರಾಜಧಾನಿಯಲ್ಲಿ ನಡೆದ ಬೆಚ್ಚಿ ಬೀಳಿಸುವ ಘಟನೆಯೊಂದರಲ್ಲಿ 16 ವರ್ಷದ ಬಾಲಕನೊಬ್ಬ ಆಶ್ರಯ ನೀಡಿದ್ದ ಮನೆ ಒಡತಿಯನ್ನೇ ಇರಿದು ಕೊಂದು ಪೊಲೀಸರಿಗೆ ಶರಣಾಗಿದ್ದಾನೆ. ಮಹಿಳೆ ನಿರಂತರವಾಗಿ ಸೆಕ್ಸ್‌ಗೆ ಪೀಡಿಸುತ್ತಿದ್ದುದೆ ಹತ್ಯೆಗೈಯಲು ಕಾರಣ ಎಂದು ಬಾಲಕ ಹೇಳಿಕೊಂಡಿದ್ದಾನೆ. 

Advertisement

ಲಜ್‌ಪತ್‌ನಗರದ ಸಂಗಮ್‌ ಅಪಾರ್ಟ್‌ಮೆಂಟ್‌ನಲ್ಲಿ  ಗುರುವಾರ ಈ ಘಟನೆ ನಡೆದಿದ್ದು, ಸಹೀಬಾಬಾದ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹತ್ಯೆಯ ಬಳಿಕ ರಕ್ತ ಸಿಕ್ತ ಕೈಗಳ ಸಮೇತ ಬಾಲಕ ಠಾಣೆಗೆ ಆಗಮಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ. 

ನಿರಂತರ ಸೆಕ್ಸ್‌ ಬೇಡಿಕೆಯಿಂದ ದಿಕ್ಕು ತೋಚದಂತಾಗಿದ್ದ ಬಾಲಕ ಒಡತಿಯನ್ನು ಕೊಲೆ ಮಾಡಲು ಸಿದ್ಧವಾಗಿ, ಆಕೆ ಟಿವಿ ನೋಡುತ್ತಿದ್ದ ವೇಳೆ ಸಮಯ ಸಾಧಿಸಿ ಬರ್ಬರವಾಗಿ ಕತ್ತು ಸೀಳಿ  ಕೊಲೆಗೈದಿದ್ದಾನೆ. ಬಳಿಕ ಜೋರಾಗಿ ಅಳುತ್ತಾ ಠಾಣೆಗೆ ಓಡಿ ಬಂದು ಶರಣಾಗಿದ್ದಾನೆ. 

ಕೂಡಲೇ ಪೊಲೀಸರು ಬಾಲಕನ ಸಮೇತ ನಿವಾಸಕ್ಕೆ ದೌಡಾಯಿಸಿದ್ದು ,ರಕ್ತದ ಮಡುವಿನಲ್ಲಿ  ಬಿದ್ದಿದ್ದ ಶವವನ್ನು ಕಂಡಿದ್ದಾರೆ.ಈ ವೇಳೆ ಪಕ್ಕದಲ್ಲೇ 2 ವರ್ಷದ ಹೆಣ್ಣು ಮಗು ನಿದ್ರೆಯಲ್ಲಿತ್ತು. 

ಘಟನೆ ನಡೆಯುವ ವೇಳೆ ಮಹಿಳೆಯ ಪತಿ ಕೆಲಸಕ್ಕೆ ತೆರಳಿದ್ದ ಎಂದು ತಿಳಿದು ಬಂದಿದೆ. 

Advertisement

ಆರೋಪಿ ಬಾಲಕ ನಿರುದ್ಯೋಗಿಯಾಗಿ ಕೆಲಸವಿಲ್ಲದೆ ಅಲೆಯುತ್ತಿದ್ದಾಗ ಆತನನ್ನು ಕರೆತಂದು ಮನೆಯಲ್ಲಿ ಆಶ್ರಯ ನೀಡಿ ಮನೆಗೆಲಸದಲ್ಲಿ ಸಹಾಯ ಪಡೆಯುತ್ತಿದ್ದರು ಎಂದು ತಿಳಿದು ಬಂದಿದೆ. 

Advertisement

Udayavani is now on Telegram. Click here to join our channel and stay updated with the latest news.

Next