Advertisement

ಡೊಂಬಿವಲಿ ಬಂಟರ ಸಂಘ ಪ್ರಾದೇಶಿಕ ಸಮಿತಿ: ಆರ್ಥಿಕ ಸಹಾಯ ವಿತರಣೆ

04:30 PM Jun 20, 2018 | |

ಡೊಂಬಿವಲಿ: ಪಾಲಕರು ಮಕ್ಕಳಿಗೆ ಗುಣಮಟ್ಟದ ಶಿಕ್ಷಣವನ್ನು ನೀಡಲು ಮುಂದಾಗಬೇಕು. ಮಕ್ಕಳಿಗೆ ಕೇವಲ ಶಿಕ್ಷಣವನ್ನು ನೀಡಿದರೆ ಸಾಲದು. ಅವರಿಗೆ ಶಿಕ್ಷಣದ ಜೊತೆಗೆ ನಾಡಿನ ಸಂಸ್ಕೃತಿ-ಸಂಸ್ಕಾರಗಳ ಅರಿವು ಮೂಡಿಸುವಲ್ಲೂ ಮುಂದಾ ಗಬೇಕು. ಬಂಟರ ಸಂಘದ ದಾನಿಗಳು ಇಂದು ಸಮಾಜದ ಆರ್ಥಿಕವಾಗಿ ಹಿಂದುಳಿದ ಮಕ್ಕಳ ಬಾಳಿಗೆ ಆಶಾಕಿರಣವಾಗುತ್ತಿರುವುದು ಅಭಿನಂದನೀಯ. ಡೊಂಬಿವಲಿ ಯಲ್ಲಿ ಇಂದ್ರಾಳಿ ದಿವಾಕರ ಶೆಟ್ಟಿ ಅವರ ಸಮಾಜ ಸೇವೆ ಮೆಚ್ಚು ವಂತದ್ದಾಗಿದೆ. ಸಮಾಜ ಬಾಂಧವರ ಕಷ್ಟ-ಕಾರ್ಪಣ್ಯಗಳಿಗೆ ಸಂಘವು ಸದಾ ಸ್ಪಂದಿಸುತ್ತಿದ್ದು, ಪ್ರತೀ ವರ್ಷ 6 ಕೋ. ರೂ. ಗಳನ್ನು ಹಂಚುತ್ತಿದೆ. ಮುಂದಿನ ದಿನಗಳಲ್ಲಿ ಸಮಾಜದ 500 ವಿದ್ಯಾರ್ಥಿಗಳನ್ನು ಶೈಕ್ಷಣಿಕವಾಗಿ ದತ್ತು ಸ್ವೀಕರಿಸುವ ಯೋಜನೆಯನ್ನು ಹಾಕಿಕೊಳ್ಳಲಾಗಿದೆ ಎಂದು ಬಂಟರ ಸಂಘ ಮುಂಬಯಿ ಅಧ್ಯಕ್ಷ ಪದ್ಮನಾಭ ಎಸ್‌. ಪಯ್ಯಡೆ ನುಡಿದರು.

Advertisement

ಡೊಂಬಿವಲಿ ಪೂರ್ವದ ಹೊಟೇಲ್‌ ಸುಯೋಗ್‌ ಸಭಾಗೃಹ ದಲ್ಲಿ ಬಂಟರ ಸಂಘ ಮುಂಬಯಿ ಶಿಕ್ಷಣ ಮತ್ತು ಸಮಾಜ ಕಲ್ಯಾಣ ಸಮಿತಿಯ ವತಿಯಿಂದ ಡೊಂಬಿವಲಿ ಪ್ರಾದೇಶಿಕ ಸಮಿತಿಯ ವಾರ್ಷಿಕ ಆರ್ಥಿಕ ನೆರವು ವಿತರಣೆ ಸಮಾರಂಭ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು,  ಮಕ್ಕಳನ್ನು ಸಮಾಜಮುಖೀಯಾಗಿ ಬೆಳೆಸಬೇಕು. ಸಂಘದ ಪ್ರತಿಯೊಂದು ಕಾರ್ಯಕ್ರಮಗಳಲ್ಲಿ ಮಕ್ಕಳು ಪಾಲ್ಗೊಳ್ಳುವಂತೆ ನೋಡಿಕೊಳ್ಳುವ ಜವಾಬ್ದಾರಿ ಪಾಲಕರ ಮೇಲಿದೆ. ಸಂಘದ ಋಣವನ್ನು ಮರೆಯದೆ ಅದನ್ನು ಮುಂದಿನ ದಿನಗಳಲ್ಲಿ ತೀರಿಸು ವಲ್ಲೂ ಮಕ್ಕಳು ಮುಂದಾಗಬೇಕು ಎಂದು ನುಡಿದು ಶುಭಹಾರೈಸಿದರು.

ಬಂಟರ ಸಂಘ ಶಿಕ್ಷಣ ಮತ್ತು ಸಮಾಜ ಕಲ್ಯಾಣ ಸಮಿತಿಯ ಕಾರ್ಯಾಧ್ಯಕ್ಷ ಉಳೂ¤ರು ಮೋಹನ್‌ದಾಸ್‌ ಶೆಟ್ಟಿ ಇವರು ಮಾತನಾಡಿ, ನನಗೆ ನೀಡಿದ ಜವಾಬ್ದಾರಿಯನ್ನು ಸಮರ್ಪಕವಾಗಿ ನಿಭಾಯಿಸುತ್ತಿದ್ದೇನೆ. ಸಮಾಜ ಬಾಂಧವರು ಶಿಕ್ಷಣದಿಂದ ವಂಚಿತರಾಗಬಾರದು ಎಂಬ ಉದ್ದೇಶದಿಂದ ಈ ಯೋಜನೆಯನ್ನು ಪ್ರಾರಂಭಿಸಲಾಗಿದೆ. ಅದರೊಂದಿಗೆ ಮುಂದಿನ ದಿನಗಳಲ್ಲಿ 500 ವಿದ್ಯಾರ್ಥಿಗಳನ್ನು ಶೈಕ್ಷಣಿಕವಾಗಿ ದತ್ತು ಪಡೆಯುವ ಯೋಜನೆ ನಮ್ಮದಾಗಿದೆ ಎಂದರು. ಶಿಕ್ಷಣ ಮತ್ತು ಸಮಾಜ ಕಲ್ಯಾಣ ಸಮಿತಿಯ ಉಪಕಾರ್ಯಾಧ್ಯಕ್ಷ ಸುಬ್ಬಯ್ಯ  ಶೆಟ್ಟಿ   ಅವರು ಮಾತನಾಡಿ, ಮಿತಿಯು ನೂತನ ಕ್ರಾಂತಿಯನ್ನು ಮಾಡಲು ಹೊರಟಿದೆ. ಅದಕ್ಕೆ ಎಲ್ಲಾ ದಾನಿಗಳ ಸಹಕಾರ 

ಅವಶ್ಯಕವಾಗಿದೆ. ಇದರ ಲಾಭವನ್ನು ಸಮಾಜದ ಪ್ರತಿಯೊಬ್ಬರು ಪಡೆಯ ಬೇಕು ಎಂದರು.

ಸಂಘದ ಗೌರವ ಕಾರ್ಯದರ್ಶಿ ಪ್ರವೀಣ್‌ ಬಿ. ಶೆಟ್ಟಿ ಇವರು ಮಾತನಾಡಿ, ಒಂಭತ್ತು ದಶಕಗಳ ಇತಿಹಾಸವನ್ನು ಹೊಂದಿರುವ ಸಂಘವು ಕಳೆದ 20 ವರ್ಷಗಳಿಂದ ಸಮಾಜ ಬಾಂಧವರ ಮನೆ ಬಾಗಿಲಿಗೆ ಬಂದು ಸಹಕರಿಸುತ್ತಿದೆ. ನಮ್ಮ ಸದಸ್ಯತನವನ್ನು 1 ಲಕ್ಷಕ್ಕೆ ಏರಿಸುವ ಯೋಜನೆಯನ್ನು ಹಾಕಿಕೊಳ್ಳೋಣ ಎಂದು ನುಡಿದರು.

Advertisement

ಪಶ್ಚಿಮ ವಿಭಾಗ ಪ್ರಾದೇಶಿಕ ಸಮಿತಿಗಳ ಸಮನ್ವಯಕ ಡಾ| ಪ್ರಭಾಕರ ಶೆಟ್ಟಿ ಇವರು ಮಾತ ನಾಡಿ, ಬಂಟರ ಸಂಘ ಮತ್ತು ಪ್ರಾದೇ ಶಿಕ ಸಮಿತಿಗಳು ಇಂದು ಸದೃಢ ಗೊಳ್ಳುತ್ತಿದ್ದು, ವಿಧವಾ ವೇತನದ ತಾರತಮ್ಯವನ್ನು ದೂರ ಮಾಡಿದ ಕೀರ್ತಿ ಸಂಘಕ್ಕೆ ಸಲ್ಲುತ್ತದೆ. ಸಂಘದ ಶಿಕ್ಷಣ ಸಂಸ್ಥೆಗಳ ಲಾಭವನ್ನು ಸಮಾಜ ಬಾಂಧವರು ಪಡೆಯಬೇಕು ಎಂದರು.

ಡೊಂಬಿವಲಿ ಪ್ರಾದೇಶಿಕ ಸಮಿತಿ  ಕಾರ್ಯಾಧ್ಯಕ್ಷ ಕಲ್ಲಡ್ಕ ಕರುಣಾಕರ ಶೆಟ್ಟಿ ಸ್ವಾಗತಿಸಿದರು. ಇದೇ ಸಂದರ್ಭದಲ್ಲಿ ಅಧ್ಯಕ್ಷ ಪದ್ಮನಾಭ ಎಸ್‌. ಪಯ್ಯಡೆ, ಶಿಕ್ಷಣ ಮತ್ತು ಸಮಾಜ ಕಲ್ಯಾಣ ಸಮಿತಿಯ ಕಾರ್ಯಾಧ್ಯಕ್ಷ ಉಳೂ¤ರು ಮೋಹನ್‌ದಾಸ್‌ ಶೆಟ್ಟಿ, ಪ್ರಾದೇಶಿಕ ಸಮಿತಿಯ ಶಿಕ್ಷಣ ಮತ್ತು ಸಮಾಜ ಕಲ್ಯಾಣ ಸಮಿತಿಯ ಕಾರ್ಯಾಧ್ಯಕ್ಷ ಪ್ರಭಾಕರ ಶೆಟ್ಟಿ, ಬಿಸುಪರ್ಬದ ಸಂದರ್ಭದಲ್ಲಿ ನೃತ್ಯ ಸ್ಪರ್ಧೆಯಲ್ಲಿ ಮೊದಲ ಬಹುಮಾನ ಪಡೆದ ಪ್ರಾದೇಶಿಕ ಸಮಿತಿಯ ತಂಡದ ಸದಸ್ಯರನ್ನು ಮತ್ತು ನಿರ್ದೇಶಕರನ್ನು ಸತ್ಕರಿಸಲಾಯಿತು.

ಸುನಂದಾ ಶೆಟ್ಟಿ ಪ್ರಾರ್ಥನೆಗೈದರು. ಗಣ್ಯರು ದೀಪಪ್ರಜ್ವಲಿಸಿ ಸಮಾ ರಂಭಕ್ಕೆ ಚಾಲನೆ ನೀಡಿದರು. ವೇದಿಕೆ ಯಲ್ಲಿ ಬಂಟರ ಸಂಘ ಮತ್ತು ಡೊಂಬಿವಲಿ ಪ್ರಾದೇಶಿಕ ಸಮಿತಿಯ ಪದಾಧಿಕಾರಿಗಳಾದ ರಾಜೀವ ಭಂಡಾರಿ, ಡಾ| ಪ್ರಭಾಕರ ಶೆಟ್ಟಿ, ಸುಕುಮಾರ್‌ ಎನ್‌. ಶೆಟ್ಟಿ, ತಿಮ್ಮಪ್ಪ ಶೆಟ್ಟಿ, ಪ್ರಭಾಕರ ಶೆಟ್ಟಿ, ವಿಜಯ ಶೆಟ್ಟಿ, ಉಮೇಶ್‌ ಶೆಟ್ಟಿ, ಕೃಷಿ¡ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು. ಸುಕುಮಾರ್‌ ಎನ್‌. ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು.

60 ಲಕ್ಷದಿಂದ ಪ್ರಾರಂಭಗೊಂಡ ಈ ಯೋಜನೆಯು ಇಂದು ಕೋಟ್ಯಂತರ ರೂ. ಗಳಿಗೆ ತಲುಪಿದೆ. ಕಳೆದ 14 ವರ್ಷಗಳಿಂದ ಡೊಂಬಿವಲಿಗೆ 3.5 ಕೋ. ರೂ.   ಸಂಘದಿಂದ ಬಂದಿದೆ ಎನ್ನಲು ಸಂತೋಷವಾಗುತ್ತಿದೆ. ಮಕ್ಕಳಿಗೆ ನೀಡುವ ಆರ್ಥಿಕ ಸಹಾಯವನ್ನು ಒಳ್ಳೆಯ ರೀತಿಯಲ್ಲಿ ವಿನಿಯೋಗಿಸಿಕೊಳ್ಳಬೇಕು. ಡೊಂಬಿವಲಿ ಕರ್ನಾಟಕ ಸಂಘ ಸಂಚಾಲಿತ ಶಾಲಾ-ಕಾಲೇಜುಗಳ ಲಾಭವನ್ನು ಸಮಾಜದವರು ಪಡೆದುಕೊಳ್ಳಬೇಕು. ಶಿಕ್ಷಣವೇ ಇಂದು ಎಲ್ಲ ಸಮಸ್ಯೆಗಳಿಗೆ ಪರಿಹಾರವನ್ನು ಒದಗಿಸುವ  ಮಂತ್ರವಾಗಿದೆ. ಈ ಉದ್ದೇಶದಿಂದಲೇ ಸಂಘವು ಸಮಾಜವನ್ನು ಸುಶಿಕ್ಷಿತಗೊಳಿಸಲು ಹೊರಟಿದ್ದು, ದಾನಿಗಳ ಸಹಕಾರ ಸದಾಯಿರಲಿ. 
– ಇಂದ್ರಾಳಿ ದಿವಾಕರ ಶೆಟ್ಟಿ 
(ಸಮನ್ವಯರು : ಮಧ್ಯ ಪ್ರಾ.ಸಮಿತಿ ಬಂಟರ ಸಂಘ ಮುಂಬಯಿ).

ಸಾವಿರಾರು ವಿದ್ಯಾರ್ಥಿಗಳು ಆರ್ಥಿಕ ಸಹಾಯವನ್ನು ಪಡೆಯುತ್ತಿದ್ದು, ಅದರೊಂದಿಗೆ ವಿಧವಾ ವೇತನ, ವಿಕಲ ಚೇತನರಿಗೆ ಸಹಾಯ ನೀಡಲಾಗುತ್ತಿದೆ. ಸಮಾಜ ಬಾಂಧವರ ಕಣ್ಣೀರು ಒರೆಸುವ ಇಂತಹ ಕಾರ್ಯಕ್ಕೆ ಎಲ್ಲರೂ ಕೈಜೋಡಿಸಬೇಕು. ಡೊಂಬಿವಲಿ ಪ್ರದೇಶದ 613 ವಿದ್ಯಾರ್ಥಿಗಳಿಗೆ ಸುಮಾರು 25 ಲಕ್ಷ ರೂ. ಗಳನ್ನು ಸಂಘವು ನೀಡಿದೆ. ಅದರೊಂದಿಗೆ ಪ್ರಾದೇಶಿಕ ಸಮಿತಿಯ ಮುಂದಿನ ದಿನಗಳಲ್ಲಿ ದತ್ತು ಸ್ವೀಕಾರ ಮಾಡಲಿದೆ. ಇದರ ಲಾಭವನ್ನು ಸಮಾಜದವರು ಪಡೆಯಬೇಕು .
–  ಖಾಂದೇಶ್‌ ಭಾಸ್ಕರ್‌ ಶೆಟಿ 
(ಕಾರ್ಯದರ್ಶಿ :  ಶಿಕ್ಷಣ, ಸಮಾಜ ಕಲ್ಯಾಣ ಸಮಿತಿ ಬಂಟರ ಸಂಘ).

Advertisement

Udayavani is now on Telegram. Click here to join our channel and stay updated with the latest news.

Next