Advertisement

ಕಾರವಾರ: ನೈಲಾನ್ ಬಲೆ ನುಂಗಿ ಸಾವನ್ನಪ್ಪಿದ ಡಾಲ್ಫಿನ್

02:38 PM Jun 27, 2022 | Team Udayavani |

ಕಾರವಾರ: ದೇವಭಾಗ್ ಕಡಲ ತೀರದಲ್ಲಿ ಡಾಲ್ಫಿನ್ ಶವ ಸೋಮವಾರ ಬೆಳಿಗ್ಗೆ ಪತ್ತೆ ಯಾಗಿದೆ . ಫಿಶ್ ನೆಟ್ ನೈಲಾನ್ ಬಲೆ ನುಂಗಿದ ಪರಿಣಾಮ ಡಾಲ್ಪಿನ್ ಮೃತಪಟ್ಟಿದೆ‌ .ಮರಣೋತ್ತರ ಪರೀಕ್ಷೆಯಲ್ಲಿ ಇದು ದೃಢಪಟ್ಟಿದೆ. ಡಾಲ್ಫಿನ್ ಗಂಡಾಗಿದ್ದು 7.5 ಫೀಟ್ ಉದ್ದವಿದೆ‌ . ಇಂಡೋ ಪೆಸಿಫಿಕ್ ಹಮ್ ಬ್ಯಾಕ್ ಜಾತಿಗೆ ಸೇರಿದ್ದಾಗಿದೆ.

Advertisement

ಕಾರವಾರ ವಿಭಾಗ ದ ಉಪ ಅರಣ್ಯ ಸಂರಕ್ಷಣಾಧಿಕಾರಿ ಪ್ರಶಾಂತ್ ಕೆ. ಸ್ಥಳಕ್ಕೆ ಭೇಟಿ ನೀಡಿದರು. ಸ್ಥಳದಲ್ಲಿ ಕೋಸ್ಟಲ್ ಮಾರೈನ್ ನ ಆರ್ ಎಫ್ ಒ ಪ್ರಮೋದ್ ಬಿ. , ಪ್ರಕಾಶ್ ಯರಗಟ್ಟಿ ,ಚಂದ್ರಶೇಖರ್ , ಸಂಶೋಧನ ಅಭ್ಯರ್ಥಿ ಗಳಾದ ಶಾನ್ ನವ್ಹಾಜ್, ಅಲೆಕ್ಸ್ , ರೀಫ್ ವಾಚ್ ಸಂಸ್ಥೆ ಯ, ತೇಜಸ್ವಿನಿ, ಮೇಘನಾ ಹಾಗೂ ಸ್ಥಳೀಯರು ಉಪಸ್ಥಿತರಿದ್ದು, ಡಾಲ್ಪಿನ್ ವೀಕ್ಷಿಸಿದರು. ಬಲೆಯನ್ನು ಸಮುದ್ರದಲ್ಲಿ ಬಿಸಾಡಿದ ಕಾರಣ ಡಾಲ್ಫಿನ್ ಆಹಾರ ಎಂದು ತಿಳಿದು ನುಂಗಿದೆ ಎಂಬ ಸಂಶಯ ವ್ಯಕ್ತವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next