ಪಣಜಿ: ಗೋವಾದ ಹರ್ಮಲ್ ಕಡಲತೀರದಲ್ಲಿ ಡಾಲ್ಫಿನ್ ಮೃತಪಟ್ಟಿರುವುದು ಬೆಳಕಿಗೆ ಬಂದಿದೆ. ಪಣಜಿ ವೈಲ್ಡ್ ಅನಿಮಲ್ ಟೆಂಪರರಿ ಶೆಲ್ಟರ್ ಸೆಂಟರ್ ಸಿಬ್ಬಂದಿ ಹಾಗೂ ದ್ರಷ್ಟಿ ಲೈಫ್ ಸೇವರ್ ಸಂಸ್ಥೆಯ ಸಿಬ್ಬಂದಿ ಮೀನಿನ ಅಂತ್ಯಸಂಸ್ಕಾರ ನೆರವೇರಿಸಿದರು. 12 ಅಡಿ ಉದ್ದದ ಡಾಲ್ಫಿನ್ ಮೃತಪಡಲು ಕಾರಣವೇನು ಎಂಬುದು ಇದುವರೆಗೂ ಸ್ಪಷ್ಟವಾಗಿಲ್ಲ.
ವನ್ಯಜೀವಿ ತಾತ್ಕಾಲಿಕ ಆಶ್ರಯ ಕೇಂದ್ರದ ಸಿಬ್ಬಂದಿ ದ್ಯಾನೇಶ್ವರ್ ಟಕ್ಕರ್ ಮತ್ತು ಮೆಲ್ವಿನ್ ಡಿಸಿಲ್ವಾ ಅವರು ಡಾಲ್ಫಿನ್ ಕನಿಷ್ಠ ನಾಲ್ಕು ದಿನಗಳ ಹಿಂದೆ ಸಾವನ್ನಪ್ಪಿದ್ದಾರೆ ಎಂದು ಅಂದಾಜಿಸಿದ್ದಾರೆ. ಈ ಡಾಲ್ಫಿನ್‍ಗಳ ಜೀವಿತಾವಧಿ 10 ರಿಂದ 12 ವರ್ಷಗಳು ಎಂದೇ ಹೇಳಲಾಗಿದೆ.
ಈ ಸಂದರ್ಭದಲ್ಲಿ ಕರಣ್ ತಾಂಡೇಲ್ ಮತ್ತು ಇತರ ಸಹೋದ್ಯೋಗಿಗಳು ದೃಷ್ಟಿ ಸಿಬ್ಬಂದಿಗೆ ಡಾಲ್ಫಿನ್ ಅಂತ್ಯ ಸಂಸ್ಕಾರಕ್ಕೆ ಸಹಾಯ ಮಾಡಿದರು.
ಈ ವೇಳೆ ಹರ್ಮಲ್ ಪಂಚಾಯತ್ ಅಧ್ಯಕ್ಷ ಬರ್ನಾಡ್ ಫೆರ್ನಾಂಡಿಸ್ ಸಹಕರಿಸಿದರು. ಡಾಲ್ಫಿನ್ ನೋಡಲು ಪ್ರವಾಸಿಗರ ದಂಡೇ ಹರಿದು ಬಂದಿತ್ತು.
Related Articles
ಇದನ್ನೂ ಓದಿ: ಕಾಲೇಜಿನ ಬಾತ್‍ರೂಮ್ ನಲ್ಲೇ ನೇಣಿಗೆ ಶರಣಾದ ವಿದ್ಯಾರ್ಥಿನಿ… ಡೆತ್ ನೋಟ್ ಪತ್ತೆ