Advertisement

‘ಡಾಲರ್ಸ್‌ ಪೇಟೆ’ಫ‌ಸ್ಟ್‌ ಲುಕ್‌ ಬಂತು

05:22 PM Jan 10, 2023 | Team Udayavani |

“ಡಾಲರ್ಸ್‌ ಪೇಟೆ’ ಎಂಬ ಸಿನಿಮಾದ ಫ‌ಸ್ಟ್‌ ಲುಕ್‌ ಬಿಡುಗಡೆಯಾಗಿದೆ. ಮೋಹನ್‌ ಎನ್‌ ಮುನಿನಾರಾಯಣಪ್ಪ ಈ ಚಿತ್ರದ ನಿರ್ದೇಶಕರು. ಅನೇಕ ಚಿತ್ರಗಳಿಗೆ ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡಿರುವ ಮೋಹನ್‌ ಎನ್‌ ಮುನಿ ನಾರಾಯಣಪ್ಪ ಈ ಚಿತ್ರದ ಮೂಲಕ ಸ್ವತಂತ್ರ ನಿರ್ದೇಶಕನಾಗಿ ಹೊಸ ಹೆಜ್ಜೆ ಇಟ್ಟಿದ್ದು, ಹೈಪರ್‌ ಲಿಂಕ್‌ ಥ್ರಿಲ್ಲರ್‌ ಕಥಾಹಂದರ ಒಳಗೊಂಡ ಈ ಚಿತ್ರದ ಫ‌ಸ್ಟ್‌ಲುಕ್‌ ಪೋಸ್ಟರ್‌ಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಮುಂದಿನ ದಿನಗಳಲ್ಲಿ ಕ್ಯಾರೆಕ್ಟರ್‌ ಫೋಸ್ಟರ್‌ ರಿವೀಲ್‌ ಮಾಡಲು ಪ್ಲ್ಯಾನ್‌ ಮಾಡಿಕೊಂಡಿದೆ.

Advertisement

ಹೈಪರ್‌ ಲಿಂಕ್‌ ಥ್ರಿಲ್ಲರ್‌ ಕಥಾಹಂದರ ಒಳಗೊಂಡ ಈ ಚಿತ್ರದಲ್ಲಿ ಸೌಮ್ಯ ಜಗನ್‌ ಮೂರ್ತಿ, ಆಕರ್ಷ್‌ ಕಮಲ, ವೆಂಕಟ್‌ ರಾಜು, ಮುಖ್ಯ ತಾರಾಬಳಗದಲ್ಲಿದ್ದು, ಪೃಥ್ವಿ ಅಂಬರ್‌ ಗೆಸ್ಟ್ ಅಪಿಯರೆನ್ಸ್‌ ಚಿತ್ರದಲ್ಲಿದೆ. ಉಳಿದಂತೆ ಕುಶಾಲ್.ಎಸ್‌, ದತ್ತು, ರಾಘವೇಂದ್ರ, ಹೊನ್ನವಳ್ಳಿ, ಡ್ರಾಮಾ ಜೂನಿಯರ್ಸ್‌ ಮಹೇಂದ್ರ ಒಳಗೊಂಡ ಹಲವು ಕಲಾವಿದರು ಚಿತ್ರದ ತಾರಾಬಳಗದಲ್ಲಿದ್ದಾರೆ.

ಚಿತ್ರ ಕ್ಕೆ ಸೂರಜ್‌ ಜೋಯಿಸ್‌ ಸಂಗೀತ ನಿರ್ದೇಶನ, ಆನಂದ್‌ ಸುಂದರೇಶ್‌ ಛಾಯಾ ಗ್ರ ಹಣ, ಮಹೇಶ್‌ ತೊಗಟ್ಟ ಸಂಕಲನ, ಅರ್ಜುನ್‌ ರಾಜ್‌ ಮತ್ತು ನರಸಿಂಹ ಸಾಹಸ ನಿರ್ದೇಶನ ಹಾಗೂ ದೀಕ್ಷಿತ್‌ ಕುಮಾರ್‌ ನೃತ್ಯ ನಿರ್ದೇಶನ ಚಿತ್ರಕ್ಕಿದೆ. ಪೂಜಾ.ಟಿ.ವೈ “ಡಾಲರ್ಸ್‌ ಪೇಟೆ’ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next