Advertisement
ಸೌಂದರ್ಯ ಸ್ಪರ್ಧೆಗಳು, ಫ್ಯಾಷನ್ ಶೋಗಳ ಕುರಿತು ಸಾಮಾನ್ಯವಾಗಿ ಎಲ್ಲರಿಗೂ ತಿಳಿದೇ ಇರುತ್ತದೆ. ರೂಪದರ್ಶಿಗಳು ಅಂದ ಚೆಂದದ ದಿರಿಸುಗಳನ್ನು ಉಟ್ಟುಕೊಂಡು ರ್‍ಯಾಂಪ್ ಮೇಲೆ ಹೆಜ್ಜೆ ಹಾಕುತ್ತಾರೆ. ನಿರ್ಣಾಯಕರು ದಿರಿಸು ನಡಿಗೆಯ ಶೈಲಿ, ಹಾವಭಾವ ಮುಂತಾದವನ್ನು ಗಮನಿಸಿ ವಿಜಯಿಗಳನ್ನು ನಿರ್ಣಯಿಸುತ್ತಾರೆ. ಇಷ್ಟಕ್ಕೂ ಸೌಂದರ್ಯ ಎನ್ನುವುದು ಮನುಷ್ಯರಿಗೆ ಮಾತ್ರವೇ ಸೀಮಿತವಾದರೆ ಹೇಗೆ? ಪ್ರಾಣಿಗಳು ಸುಂದರವಾಗಿಲ್ಲವೇ. ಪ್ರಕೃತಿಯಲ್ಲಿ ಎಲ್ಲವೂ ಸುಂದರವೇ, ಎಲ್ಲಾ ಜೀವಿಗಳೂ ಸರಿಸಮಾನರೇ. ಇರಲಿ, ಇಷ್ಟೆಲ್ಲಾ ಪೀಠಿಕೆ ಏಕೆಂದರೆ, ಶ್ವಾನಪ್ರಿಯರಿಗೆ ಇಷ್ಟವಾಗುವ ಶೋ ಒಂದು ನಗರದಲ್ಲಿ ನಡೆಯುತ್ತಿದೆ. ಭಾರತದಲ್ಲೇ ಅತ್ಯುತ್ತಮ ಶ್ವಾನ ಪ್ರದರ್ಶನ ಎಂಬ ಖ್ಯಾತಿ ಇದರದ್ದು. ಸಿಲಿಕಾನ್ ಸಿಟಿ ಕೆನೆಲ್ ಕ್ಲಬ್ ದಶಕಗಳಿಂದ ಈ ಶ್ವಾನ ಪ್ರದರ್ಶನವನ್ನು ಆಯೋಜಿಸುತ್ತಾ ಬರುತ್ತಿದೆ.
ಹೆಬ್ಟಾಳದ ಪಶುವೈದ್ಯ ಕಾಲೇಜು ಕ್ಯಾಂಪಸ್‌ನಲ್ಲಿ ಶ್ವಾನ ಪ್ರದರ್ಶನ ನಡೆಯುತ್ತಿದೆ. ಅಂದು ಬೆಳಗ್ಗೆ 9ರಿಂದ ಸಂಜೆ 5 ರವರೆಗೆ ಶ್ವಾನಪ್ರಿಯರು ಸ್ಪರ್ಧೆ ವೀಕ್ಷಿಸಬಹುದಾಗಿದೆ. ಈ ಬಾರಿಯ ಶ್ವಾನಪ್ರದರ್ಶನದಲ್ಲಿ ಸುಮಾರು 50 ತಳಿಯ 450ರಿಂದ 500 ಶ್ವಾನಗಳು ಇದೇ ಮೊದಲ ಬಾರಿಗೆ ಪ್ರದರ್ಶನಗೊಳ್ಳುತ್ತಿರುವುದು ವಿಶೇಷ. ಅಲ್ಲದೆ ಜಗತ್ತಿನ ಶ್ವಾನ ತಳಿಗಳಲ್ಲೇ ವಿಶೇಷವಾದುದೆಂದು ಪರಿಗಣಿಸಲ್ಪಡುವ ತಳಿಯಾದ ಅಕಿತಾ, ಮಾಲ್ಟಿàಸ್, ಸ್ಕಾ$°ಜರ್, ಸೈಬೀರಿಯನ್ ಹಸ್ಕಿ, ಬೆಲ್ಜಿಯನ್ ಶೆಪರ್ಡ್ ನಾಯಿ, ಅಫಘಾನ್ ಹೌಂಡ್ ಶ್ವಾನಗಳನ್ನು ಇಲ್ಲಿ ಕಾಣಬಹುದು. ಇವಿಷ್ಟೇ ಅಲ್ಲದೆ ಲ್ಯಾಬ್ರಡಾರ್ ರಿಟ್ರೆçವರ್, ಗೋಲ್ಡನ್ ರಿಟ್ರೆçವರ್, ಬಾಕ್ಸರ್, ಗ್ರೇಟ್ ಡೇನ್, ಕಾಕರ್ ಸ್ಪೆçನಿಯೆಲ್ ಮತ್ತಿತರ ತಳಿಯ ಶ್ವಾನಗಳು ಪಾಲ್ಗೊಂಡು ತಮ್ಮ ಸೌಂದರ್ಯ, ಬುದ್ದಿಮತ್ತೆಯನ್ನು ಪ್ರದರ್ಶಿಸಲಿವೆ. ಇವುಗಳ ನಡುವೆ ಮಿಂಚಲಿರುವುದು ನಮ್ಮದೇ ಮುಧೋಳ ಶ್ವಾನಗಳು ಎಂದು ಪ್ರತ್ಯೇಕವಾಗಿ ಹೇಳಬೇಕಿಲ್ಲ ಅಲ್ಲವೆ? ವಿದೇಶಿ ತೀರ್ಪುಗಾರರು
ಪ್ರದರ್ಶನದ ತೀರ್ಪುಗಾರರಾಗಿ ರೊಮೇನಿಯಾ ದೇಶದ ಪೆಟ್ರಾ ಮುನಿràನ್, ರಷ್ಯಾದ ಡಾ.ಯುಜೆನಿ ಎಸ್‌ಕುಪ್ಲೆçಸ್ಕಸ್ ಹಾಗೂ ಹಂಗೇರಿಯ ಅಟೈಲ್ಯಾ ಸೆಜೆಲ್ಡಿ ಭಾಗವಹಿಸುತ್ತಿದ್ದಾರೆ. ಶ್ವಾನ ಪ್ರದರ್ಶನ ಮತ್ತು ಸ್ಪರ್ಧೆಯಲ್ಲಿ ದೇಶದ ವಿವಿಧ ಭಾಗದ ಫಾರ್ಮಾ ಕಂಪನಿಗಳು, ಶ್ವಾನಕ್ಕೆ ಸಂಬಂಧಿಸಿದ ವಸ್ತುಗಳ ಉತ್ಪಾದಕರು, ಆಹಾರೋತ್ಪಾದಕರು, ಪಾಲ್ಗೊಳ್ಳುತ್ತಿದ್ದಾರೆ. ಶ್ವಾನ ಹಾಗೂ ಇತರೆ ಸಾಕುಪ್ರಾಣಿಗಳ ಜೀವನ ಗುಣಮಟ್ಟ ವೃದ್ಧಿಸುವ ಉತ್ಪನ್ನಗಳನ್ನೂ ಇಲ್ಲಿ ನೋಡಬಹುದು.
Related Articles
ಬ್ರಿಟಿಷರು ಭಾರತವನ್ನು ಆಳುತ್ತಿದ್ದ ಕಾಲದಲ್ಲಿ ತಮ್ಮ ದೇಶದಿಂದ ನಾಯಿಗಳನ್ನು ತಂದು ಸಾಕಿಕೊಂಡಿದ್ದರಂತೆ. ನಮ್ಮ ಸ್ಥಳೀಯ ತಳಿಗಳು ಕಡೆಗಣನೆಗೆ ಒಳಗಾಗಿದ್ದ ಕಾಲ ಅದು. ಅಲ್ಲದೆ ಉತ್ತಮ ತಳಿ ಎಂದರೆ ಅದು ವಿದೇಶದ್ದೇ ಆಗಿರಬೇಕೆಂಬ ಭಾವನೆ ಜನಸಾಮಾನ್ಯರಲ್ಲಿ ಬೇರೂರಿಬಿಟ್ಟಿತ್ತು. ಹೀಗಾಗಿ ಭಾರತೀಯ ತಳಿಯ ನಾಯಿಗಳು ಉತ್ತಮ ಗುಣಗಳನ್ನು ಹೊಂದಿದ್ದರ ಹೊರತಾಗಿಯೂ ಅದಕ್ಕೆ ಕಿಮ್ಮತ್ತಿನ ಬೆಲೆಯೂ ಸಿಕ್ಕಿರಲಿಲ್ಲ. ಇವೆಲ್ಲಾ ಕಾರಣಗಳಿಂದಾಗಿ 1932ರಲ್ಲಿ ಮೈಸೂರಿನ ಮಹಾರಾಜರು ಸ್ಥಳೀಯ ತಳಿಗಳಿಗೆ ಪ್ರಾಮುಖ್ಯತೆ ದೊರಕಿಸಿಕೊಡುವ ಸಲುವಾಗಿ ಶುರು ಮಾಡಿದ್ದೇ ಕೆನಲ್ ಕ್ಲಬ್. ಆವಾಗ ಅದನ್ನು “ಮೈಸೂರು ಕೆನೆಲ್ ಕ್ಲಬ್’ ಎಂದೇ ಕರೆಯಲಾಗುತ್ತಿತ್ತು. ಅದೇ ಈಗ “ಸಿಲಿಕಾನ್ ಸಿಟಿ ಕೆನೆಲ್ ಕ್ಲಬ್’ ಆಗಿ ಮಾರ್ಪಾಡಾಗಿದೆ.
Advertisement
ಮುಧೋಳವನ್ನು ಮುನ್ನಲೆಗೆ ತಂದಿದ್ದುಭಾರತೀಯ ಸೇನೆಗೆ ನಿಯುಕ್ತಿಯಾದ ಮೊತ್ತ ಮೊದಲ ನಾಯಿಯ ತಳಿ ಯಾವುದು ಹೇಳಿ ನೋಡೋಣ. ಅಪ್ಪಟ ಕರ್ನಾಟಕದ ತಳಿ ಮುಧೋಳ. ಇದಕ್ಕೆ ಮುನ್ನ ವಿದೇಶಿ ತಳಿಗಳಾದ ಲ್ಯಾಬ್ರಡಾರ್, ಜರ್ಮನ್ ಶೆಫರ್ಡ್ ನಾಯಿಗಳನ್ನು ಭಾರತೀಯ ಸೇನೆಯಲ್ಲಿ ಬಳಸಿಕೊಳ್ಳುತ್ತಿತ್ತು. ನಮ್ಮವರಿಗೆ ನಮ್ಮದೇ ವಸ್ತುಗಳ ಮೇಲೆ ಅವಗಣನೆ ಎಂಬುದರ ಕುರಿತು ಎರಡು ಮಾತಿಲ್ಲ. ನಾಯಿಗಳ ವಿಷಯದಲ್ಲೂ ಅದೇ ಅಭಿಪ್ರಾಯವೇ ಇತ್ತು. ಹೀಗಾಗಿಯೇ ಮುಧೋಳ ತಳಿ ನಾಯಿಯ ಖ್ಯಾತಿ ಜಗತ್ತಿಗೇ ಹರಡಲು ತುಂಬಾ ಸಮಯ ಹಿಡಿದಿದ್ದು. ಇಷ್ಟಕ್ಕೂ ತೆರೆಮರೆಯಲ್ಲಿದ್ದ ಮುಧೋಳ ತಳಿಯನ್ನು ಖ್ಯಾತಿಗೊಳಿಸಿದ್ದು ಇದೇ ಸಿಲಿಕಾನ್ ಸಿಟಿ ಕೆನೆಲ್ ಕ್ಲಬ್. ತನ್ನ ಪ್ರದರ್ಶನಗಳಲ್ಲಿ ಮುಧೋಳ ತಳಿಯ ನಾಯಿಗಳನ್ನು ಬಳಸಿಕೊಂಡು ಅದರ ಪ್ರಾಮುಖ್ಯತೆ ವಿದೇಶಗಳಿಗೂ ಪಸರಿಸುವಂತಾಯಿತು. ಅಷ್ಟೇ ಅಲ್ಲ ಕ್ಲಬ್‌ನ ಸದಸ್ಯರು ಮುಧೋಳ ಶ್ವಾನದ ಪ್ರಾಮುಖ್ಯತೆಯನ್ನು ಕುರಿತು ಅದನ್ನು ಸಂರಕ್ಷಿಸಬೇಕಾದ ಅಗತ್ಯತೆ ಕುರಿತು ಸರಕಾರಕ್ಕೂ ಪತ್ರ ಬರೆದಿದ್ದರು. ಇದರ ಫಲವಾಗಿ ಧಾರವಾಡದ ಮುಧೋಳದಲ್ಲಿ, ಮುಧೋಳ ಶ್ವಾನ ತಳಿಯ ಸಂಶೋಧನೆ ಮತ್ತು ಅಧ್ಯಯನ ಕೇಂದ್ರ ತೆರೆಯಲಾಯಿತು. ಯಾವಾಗ?: ನ.17-18, ಬೆ.9- ಸಂ.5
ಎಲ್ಲಿ?: ಪಶುವೈದ್ಯಕೀಯ ಕಾಲೇಜು ಕ್ಯಾಂಪಸ್, ಹೆಬ್ಟಾಳ