ನಾಯಿಯನ್ನು ಬಹುವಾಗಿ ಪ್ರೀತಿಸುವವರಿದ್ದಾರೆ. ಕೆಲವರಿಗೆ ಬೀದಿನಾಯಿಯೂ ಮುದ್ದು ಅನ್ನಿಸುವುದುಂಟು. ಇನ್ನು, ನೂರಾರು ಮುದ್ದು ಮುದ್ದು ನಾಯಿಗಳು ಒಂದೆಡೆ ಸೇರಿದರೆ, ಹೇಗಿರಬಹುದು? ಬೆಂಗಳೂರು ಕ್ಯಾನೈನ್ ಕ್ಲಬ್ ಅಂಥದ್ದೊಂದು ಶ್ವಾನ ಪ್ರದರ್ಶನವನ್ನು ಆಯೋಜಿಸಿದೆ.
ರಾಜಕುಮಾರಿ ವಿಶಾಲಾಕ್ಷಿ ದೇವಿ ಸ್ಮರಣಾರ್ಥ ನಡೆಯುತ್ತಿರುವ 50ನೇ “ಶ್ವಾನ ಪ್ರದರ್ಶನ’ದಲ್ಲಿ, ಅಫಘನ್ ಹೌಂಡ್ಸ್, ಟಿಬೆಟಿಯನ್ ಟೆರಿಯರ್, ಮಾಲ್ಟಿಸ್ ಮುಂತಾದ 45ಕ್ಕೂ ಹೆಚ್ಚು ತಳಿಗಳ ಸುಮಾರು 500 ನಾಯಿಗಳು ಭಾಗವಹಿಸಲಿವೆ. ಶ್ವಾನ ಪ್ರದರ್ಶನದ ತೀರ್ಪುಗಾರರಾಗಿ ಎಂ.ಎಸ್. ಕಾರ್ಮೆನ್ ನವರೊ ಗಿಸಾಡೊ (ಸ್ಪೇನ್) ಮತ್ತು ಮುನೀರ್ ಬಿನ್ ಜಂಗ್ ಭಾಗವಹಿಸಲಿದ್ದಾರೆ. ನಿರ್ದಿಷ್ಟ ಮಾನದಂಡಗಳನ್ನು ಅನುಸರಿಸಿ, ಸ್ಪರ್ಧೆಯ ವಿಜೇತ ಶ್ವಾನವನ್ನು ಗುರುತಿಸಲಿದ್ದಾರೆ.
ಯಾವಾಗ?: ಜ. 25- 26, ಬೆಳಗ್ಗೆ 9-6
ಎಲ್ಲಿ?: ಜಯಮಹಲ್ ಪ್ಯಾಲೇಸ್ ಹೋಟೆಲ್