Advertisement

ಈ 3 ಹುಲಿ ಮರಿಗಳಿಗೆ ನಾಯಿಯೇ “ತಾಯಿ’!-ವಿಡಿಯೋ ವೈರಲ್

08:40 AM May 17, 2022 | Team Udayavani |

ಯಾವುದೇ ಪ್ರಾಣಿಯಾದರೂ ಹುಲಿಯನ್ನು ಕಂಡೊಡನೆ ಭಯದಿಂದ ಓಡುತ್ತದೆ. ಆದರೆ ಚೀನದಲ್ಲಿರುವ ಈ ನಾಯಿ ಮೂರು ಹುಲಿ ಮರಿಗಳನ್ನು ತನ್ನ ಮಕ್ಕಳಂತೆ ಸಾಕುತ್ತಿದೆ!

Advertisement

ಮೃಗಾಲಯದಲ್ಲಿರುವ ಹುಲಿಯೊಂದು 3 ಮರಿಗಳಿಗೆ ಜನ್ಮವಿತ್ತು ಅವುಗಳನ್ನು ತಿರಸ್ಕರಿಸಿತ್ತು. ನಂತರ ಅವುಗಳನ್ನು ಹೆಣ್ಣು ನಾಯಿಯೊಂದರ ಬಳಿ ತಂದು ಬಿಡಲಾಗಿದೆ.

ಆ ನಾಯಿ ಹುಲಿ ಮರಿಗಳಿಗೆ ಹಾಲುಣಿಸಿ, ಪೋಷಿಸುತ್ತಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದು ನೆಟ್ಟಿಗರ ಮೆಚ್ಚುಗೆಗೆ ಪಾತ್ರವಾಗಿದೆ.

ಇದನ್ನೂ ಓದಿ:200ಕ್ಕೂ ಹೆಚ್ಚು ಗ್ರಾಮಗಳು ಜಲಾವೃತ; ಅಸ್ಸಾಂನಲ್ಲಿ ತೀವ್ರಗೊಂಡ ಮಳೆ-ಪ್ರವಾಹ

ಸಾಮಾನ್ಯವಾಗಿ ಹುಲಿಗಳು ತಾವು ಜನ್ಮಕೊಟ್ಟ ಮರಿಗಳು ಇಷ್ಟವಾಗದಿದ್ದರೆ ಅವುಗಳನ್ನು ತಿರಸ್ಕರಿಸುತ್ತವೆ.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next