ಈ ಘಟನೆ ಗೋವಾದ ಐಎನ್‌ಎಸ್ ಹನ್ಸಾ ವಿಮಾನ ನಿಲ್ದಾಣದಲ್ಲಿ ರವಿವಾರ ಬೆಳಗ್ಗೆ ನಡೆದಿದೆ. ದೆಹಲಿಗೆ ಹೊರಟಿದ್ದ ಏರ್ ಏಷ್ಯಾ ವಿಮಾನ 8.25ಕ್ಕೆ ಟೇಕಾಫ್ ಆಗಬೇಕಿತ್ತು. ಇನ್ನೇನು ರನ್‌ವೇನಲ್ಲಿ ಬಂದು ನಿಲ್ಲುತ್ತಿರುವಾಗ ನಾಯಿ ಅಡ್ಡ ಬಂದಿದೆ. ಇದು ವಿಮಾನ ಹಾರಾಟ ನಿಯಂತ್ರಣ ಕೊಠಡಿಯವರಿಗೆ ಗೊತ್ತಾಗಿದ್ದು ಬಳಿಕ ವಿಮಾನ ಹಾರಾಟ ನಿಲ್ಲಿಸಿ, ನಾಯಿ ಹಿಡಿಯಲಾಗಿದೆ. ನಾಯಿ ಹೊರಗೆ ತೆಗೆದುಕೊಂಡು ಹೋದ ಬಳಿಕ ವಿಮಾನ ಹಾರಿದೆ. ಅಷ್ಟೊತ್ತಿಗೆ ಗಂಟೆ 9.15 ಆಗಿದೆ.
Advertisement
ಗೋವಾ ವಿಮಾನ ನಿಲ್ದಾಣ ನೌಕಾಪಡೆ ನಿಯಂತ್ರಣದಲ್ಲಿದ್ದು, ಇಲ್ಲಿ ನಾಯಿ ಕಾಟ ಜೋರಾಗಿದೆಯಂತೆ. ಆಗಸ್ಟ್ ತಿಂಗಳಲ್ಲೇ ಇಲ್ಲಿ ಸುಮಾರು 60 ನಾಯಿಗಳನ್ನು ಹಿಡಿಯಲಾಗಿದ್ದು, ಅದನ್ನು ಗೋವಾ ಪಶುಸಂಗೋಪನೆ ಇಲಾಖೆಗೆ ಹಸ್ತಾಂತರ ಮಾಡಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.