Advertisement

ಶ್ವಾನಪ್ರೇಮಿ ಸಿಎಂ; ಬೀದಿನಾಯಿಗಳಿಗೂ ಬಜೆಟ್ ನಲ್ಲಿ ಆದ್ಯತೆ ನೀಡಿದ ಬೊಮ್ಮಾಯಿ

06:20 PM Feb 17, 2023 | Team Udayavani |

ಬೆಂಗಳೂರು : ಶ್ವಾನಪ್ರೇಮಿಯಾಗಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಬೀದಿನಾಯಿಗಳ ಆರೈಕೆಗಾಗಿ ಮತ್ತು ಸಾರ್ವಜನಿಕರಿಗೆ ಅವುಗಳನ್ನು ದತ್ತು ಪಡೆಯಲು ಆನ್‌ಲೈನ್ ಸಾಫ್ಟ್‌ವೇರ್ ಅನ್ನು ಅಭಿವೃದ್ಧಿಪಡಿಸಲಾಗುವುದು ಎಂದು ಶುಕ್ರವಾರ ಮಂಡಿಸಿದ ಬಜೆಟ್ ನಲ್ಲಿ ಹೇಳಿದ್ದಾರೆ.

Advertisement

ವಿಧಾನಸಭೆಯಲ್ಲಿ ತಮ್ಮ ಸರ್ಕಾರದ ಕೊನೆಯ ಬಜೆಟ್ ಮಂಡಿಸಿದ ಅವರು, ಇದರೊಂದಿಗೆ ಶ್ವಾನಪ್ರೇಮಿಗಳು ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳುವ ಮೂಲಕ ನಾಯಿಗಳನ್ನು ದತ್ತು ಪಡೆಯಲು ಅವಕಾಶ ಕಲ್ಪಿಸಲಾಗುವುದು ಎಂದಿದ್ದಾರೆ.

ರಾಷ್ಟ್ರೀಯ ಅನಿಮಲ್ ಜೆನೆಟಿಕ್ ರಿಸೋರ್ಸಸ್ ಬ್ಯೂರೋ (ಎನ್‌ಬಿಎಜಿಆರ್) ಮುಧೋಳ ಹೌಂಡ್ ಡಾಗ್ ಬ್ರೀಡ್ ಅನ್ನು ಭಾರತೀಯ ಸ್ಥಳೀಯ ತಳಿ ಎಂದು ಗುರುತಿಸಿರುವ ಮುಖ್ಯಮಂತ್ರಿಗಳು, ಈ ತಳಿಯನ್ನು ಅಭಿವೃದ್ಧಿಪಡಿಸಲು ಐದು ಕೋಟಿ ರೂಪಾಯಿ ಅನುದಾನ ನೀಡಲಾಗುವುದು ಎಂದು ಹೇಳಿದರು.

ಪ್ರಾಣಿಗಳ ಮೇಲಿನ ದೌರ್ಜನ್ಯ ತಡೆಗೆ ಹಾಗೂ ಪ್ರಾಣಿಗಳ ಕಲ್ಯಾಣಕ್ಕಾಗಿ ಪ್ರಾಣಿ ಕಲ್ಯಾಣ ಮಂಡಳಿಗೆ ಐದು ಕೋಟಿ ಅನುದಾನ ನೀಡಲಾಗುವುದು ಎಂದರು. ನಿರ್ಜನ ಪ್ರಾಣಿಗಳ ಚಿಕಿತ್ಸೆಗಾಗಿ ಬೆಂಗಳೂರಿನಲ್ಲಿ ಸಂಚಾರಿ ಪಶು ಚಿಕಿತ್ಸಾಲಯಗಳನ್ನು ಮಂಡಳಿ ಆರಂಭಿಸಲಿದೆ. 2021 ರಲ್ಲಿ, ಸಾಕುಪ್ರಾಣಿಗಳ ಅಂತಿಮ ವಿಧಿವಿಧಾನಗಳನ್ನು ನೆರವೇರಿಸಲು ಮುಂದಾದ ಬೊಮ್ಮಾಯಿ ಅವರ ಕುಟುಂಬ ಸದಸ್ಯರು ತಮ್ಮ ನಾಯಿ ‘ಸನ್ನಿ’ಗೆ ಅಂತಿಮ ವಿದಾಯ ಹೇಳುವ ವಿಡಿಯೋಗಳು ಮತ್ತು ಚಿತ್ರಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದವು.

ಪ್ರಾಣಿ ಸಂಘರ್ಷ ತಡೆಗೆ ಕಾರ್ಯಪಡೆ ; ಪರಿಹಾರ ಮೊತ್ತ ದ್ವಿಗುಣ

Advertisement

ಮಾನವ ಪ್ರಾಣಿ ಸಂಘರ್ಷದಿಂದ ಸಂಭವಿಸುವ ಮಾನವ ಪ್ರಾಣ ಹಾನಿಗೆ 7.50 ಲಕ್ಷ ರೂ. ವಿದ್ದ ಪರಿಹಾರ ಮೊತ್ತ 15 ಲಕ್ಷ ರೂ.ಗೆ ಏರಿಕೆ. ಬೆಳೆಹಾನಿ ಪರಿಹಾರವೂ ದ್ವಿಗುಣ

ಮಾನವ-ಪ್ರಾಣಿ ಸಂಘರ್ಷ ನಿಯಂತ್ರಣಕ್ಕೆ ಕ್ರಮ, ಸೆರೆಹಿಡಿಯಲಾದ ಪ್ರಾಣಿಗಳಿಗೆ ಬಂಡೀಪುರ ರಾಷ್ಟ್ರೀಯ ಉದ್ಯಾನವನದಲ್ಲಿ ಸೂಕ್ತ ವ್ಯವಸ್ಥೆ

ಕಾಡಾನೆ ಹಾವಳಿ ತಡೆಗಟ್ಟಲು ಚಿಕ್ಕಮಗಳೂರು, ಹಾಸನ, ಮೈಸೂರು ಮತ್ತು ಕೊಡಗು ಜಿಲ್ಲೆಗಳಲ್ಲಿ ಕಾಡಾನೆ ಕಾರ್ಯಪಡೆ ರಚನೆ

ಮೈಸೂರು ಮತ್ತು ಮಂಡ್ಯ ಜಿಲ್ಲೆಯಲ್ಲಿ ಚಿರತೆ ದಾಳಿ ತಡೆಯಲು ಕಾರ್ಯಪಡೆ ರಚನೆ. ಪರಿಣಾಮಕಾರಿ ಅನುಷ್ಠಾನಕ್ಕೆ 199 ಸಿಬಂದಿಗಳ ನೇಮಕ

ಮಾನವ ಆನೆ ಸಂಘರ್ಷ ತಡೆಯಲು 72 ಕಿ.ಮೀ ರೈಲ್ವೆ ಬ್ಯಾರಿಕೇಡ್, 36 ಕಿ.ಮೀ, ಆನೆ ನಿರೋಧಕ ಕಂದಕ, 186 ಕಿ.ಮೀ. ಸೌರಶಕ್ತಿ ಬೇಲಿ ನಿರ್ಮಾಣ, 150 ಕೋಟಿ ರೂ ಅನುದಾನ

ಪ್ರಥಮ ಬಾರಿಗೆ 100 ಕೋಟಿ ರೂ. ಹಸಿರು ಆಯವ್ಯಯ

Advertisement

Udayavani is now on Telegram. Click here to join our channel and stay updated with the latest news.

Next