Advertisement

ದೊಡ್ಡಣಗುಡ್ಡೆ ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರ

11:04 AM Sep 27, 2022 | Team Udayavani |

ಉಡುಪಿ: ದೊಡ್ಡಣ ಗುಡ್ಡೆಯ ಶ್ರೀ ಚಕ್ರಪೀಠ ಸುರಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ಕಾರಣಿಕ ಕ್ಷೇತ್ರದಲ್ಲಿ ಕದಿರು ಕಟ್ಟುವಿಕೆಯೊಂದಿಗೆ ನವರಾತ್ರಿ ಸಡಗರ ಅರಂಭಗೊಂಡಿತು.

Advertisement

ಧರ್ಮದರ್ಶಿ ಶ್ರೀ ರಮಾನಂದ ಗುರೂಜಿ ಮಾರ್ಗದರ್ಶನದಲ್ಲಿ ಕೃಷ್ಣಮೂರ್ತಿ ತಂತ್ರಿ ನೇತೃತ್ವದಲ್ಲಿ ಪ್ರಾತಃಕಾಲ ನವಕ ಕಲಶ ಪ್ರಧಾನ ಹೋಮ ಕಲಾಶಾಭಿಷೇಕ, ಅಂಬರ ಅಭಿಮಾನಿ ಶಾಂತಿ ನೆರವೇರಿತು. ಕ್ಷೇತ್ರದ ವಿಶಿಷ್ಟ ಸಾನ್ನಿಧ್ಯವಾದ ಶ್ರೀ ಕುಬೇರ ಚಿತ್ರಲೇಖ ಸಹಿತ ಮಹಾಲಕ್ಷ್ಮೀ ಸನ್ನಿಧಾನದಲ್ಲಿ ಶ್ರೀ ಕುಬೇರ ಲಕ್ಷ್ಮೀ ಸಹಸ್ರನಾಮ ಯಾಗ ಕ್ಷೇತ್ರದ ವತಿಯಿಂದ ನೆರವೇರಿತು. ಪ್ರಥಮ ದಿನದ ಚಂಡಿಕಾ ಯಾಗದ ಸೇವೆಯನ್ನು ಎನ್‌ಆರ್‌ಐ ಉದ್ಯಮಿ ರಾಜಾರಾಮ್‌ ಶೆಟ್ಟಿ ಮತ್ತು ಮಕ್ಕಳು ನಡೆಸಿಕೊಟ್ಟರು. ಕ್ಷೇತ್ರದ ನಾಟ್ಯರಾಣಿ ಗಂಧರ್ವ ಕನ್ಯೆಯ ಪ್ರೀತ್ಯರ್ಥ ಸೃಷ್ಟಿ ಕಲಾ ಕುಟೀರದ ಶ್ರೇಷ್ಠ, ಅನನ್ಯಾ, ಅನಘಶ್ರೀ ಅವರಿಂದ ನೃತ್ಯ ಸೇವೆ ಸಮರ್ಪಿಸಲ್ಪಟ್ಟಿತು.

ಶ್ರೀ ದುರ್ಗಾ ಆದಿಶಕ್ತಿ ಭಜನ ಮಂಡಳಿ ಸದಸ್ಯರಿಂದ ಭಜನೆ ಸಂಕೀರ್ತನೆ, ಪ್ರಜ್ಞ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳಿಂದ ಮನೋ ರಂಜನೆ ಕಾರ್ಯಕ್ರಮ ನಡೆಯಿತು. ಉಮೇಶ್‌ ಮತ್ತು ಚಿತ್ರಾಕ್ಷಿ ಉಮೇಶ್‌ ದಂಪತಿ ದುರ್ಗಾ ನಮಸ್ಕಾರ ಪೂಜೆ, ಶ್ರದ್ಧಾ ಮಾಳ್ವಾಕರ್‌ ಮುಂಬಯಿ ಅವರಿಂದ ರಂಗ ಪೂಜೆ ಸಮರ್ಪಿಸಲ್ಪ ಟ್ಟಿತು.ರಾತ್ರಿಯ ಕಲೊ³àಕ್ತ ಪೂಜೆಯ ಅನಂತರ ನೆರವೇರಿದ ನೃತ್ಯಸೇವೆ ಯಲ್ಲಿ ಸಮೃದ್ಧಿ, ಧನ್ಯಶ್ರೀ, ಪಲ್ಲವಿ ಪಾಲ್ಗೊಂಡಿದ್ದರು ಎಂದು ಕ್ಷೇತ್ರ ಉಸ್ತುವಾರಿ ಕುಸುಮಾ ನಾಗರಾಜ ತಿಳಿಸಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next