ಕುಷ್ಟಗಿ: ಕಾಂಗ್ರೇಸ್ಸಿಗರಿಗೆ ಹಿಂದೂ ಎಂದರೆ ಅಸಹ್ಯ, ಅಲರ್ಜಿಕ ಪದವಾಗಿದ್ದು ಅವರ ಮನಸ್ಥಿತಿ ಬಹಿರಂಗವಾಗುತ್ತಿದೆ ಎಂದು ಕೊಪ್ಪಳ ಜಿಲ್ಲಾ ಬಿಜೆಪಿ ಅಧ್ಯಕ್ಷ, ಮಾಜಿ ಶಾಸಕ ದೊಡ್ಡನಗೌಡ ಪಾಟೀಲ ವಿಷಾಧ ವ್ಯಕ್ತಪಡಿಸಿದರು.
ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಅವರ ‘ಹಿಂದೂ ಎಂಬ ಪದಕ್ಕೆ ಆಶ್ಲೀಲ ಅರ್ಥವಿದೆ ಎನ್ನುವ ಹೇಳಿಕೆಗೆ ಖಾರವಾಗಿ ಪ್ರತಿಕ್ರಿಯಿಸಿದ ಅವರು, ಕಾಂಗ್ರೇಸ್ ನಾಯಕರಿಗೆ ಹಿಂದೂ ಎನ್ನುವ ಪದ ಕಿವಿಗೆ ಬಿದ್ದರೆ ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ಹೇಳಿಕೆ ನೀಡುತ್ತಿರುವುದು ಹೊಸದೇನು ಅಲ್ಲ.
ವಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗೆ ಕೇಸರಿ ಎಂದರೆ ಆಗಿ ಬರೊಲ್ಲ. ಅವರು ಕೇಸರಿ ರುಮಾಲು ಸುತ್ತಿ ಡೊಳ್ಳು ಬಡಿದು ಸಿಎಂ ಆದ ಬಳಿಕ ಕೇಸರಿ ರುಮಾಲು ಅವರಿಗೆ ಸೇರುತ್ತಿಲ್ಲ.
ಸತೀಶ್ ಜಾರಕಿಹೊಳಿ ಅವರಿಗೆ ಹಿಂದೂ ಎನ್ನುವುದು ಆಶ್ಲೀಲ ಪದವಾಗಿದ್ದು ಹಿಂದೂಗಳ ಬಗ್ಗೆ ಇನ್ನೂ ಬೇರೆ ಬೇರೆ ಅರ್ಥದಲ್ಲಿ ಮಾತನಾಡುವವರಿದ್ದು ಇದೀಗ ಶುರುವಾದಂತೆ ಆಗಿದೆ.
Related Articles
ಕಾಂಗ್ರೇಸ್ಸಿಗರು ದಿನ ಒಬ್ಬೊಬ್ಬರು, ಒಂದೊಂದು ಥರ ಹೇಳುವುದು ರೋಗವಾಗಿದೆ. ಕಾಂಗ್ರೇಸ್ಸಿಗರು ಹಿಂದೂಗಳ ಬಗ್ಗೆ ಮೂಲಭೂತವಾದಿಗಳಾಗಿ ಪರಿವರ್ತನೆಯಾಗಿದ್ದಾರೆ. ಪಾಪ ಜಾರಕಿಹೊಳಿ ಅವರಿಗೆ ಹಿಂದೂ ಪದ ಕೇಳಲಿಕ್ಕೂ ಅಸಹ್ಯವಾಗಿದ್ದು ಇವರಿಗೆ ಹಿಂದೂಗಳ ಓಟು ಮಾತ್ರ ಬೇಕಾಗಿದ್ದು ಹಿಂದೂಗಳು ಇಂತಹ ಕಾಂಗ್ರೆಸ್ಸಿಗರ ಬಗ್ಗೆ ಮೊದಲು ತಿಳಿದುಕೊಳ್ಳಬೇಕು ಎಂದರು.
ಇದನ್ನೂ ಓದಿ : ಪ್ರಿಯಾಂಕ್ ನಾಪತ್ತೆ ಪೋಸ್ಟರ್ ಆರೋಪ: ಅರವಿಂದ ಚವ್ಹಾಣ ಬಂಧನಕ್ಕೆ ಒತ್ತಾಯಿಸಿ ರಸ್ತೆ ತಡೆ