Advertisement

ಕಾರ ಹುಣ್ಣಿಮೆ‌ ವಿಶೇಷ ಹರಕೆ: ದೊಡ್ಡನಗೌಡ ಪಾಟೀಲ ಮುಂದಿನ‌ ಶಾಸಕರಾಗಲಿ‌

09:01 PM Jun 14, 2022 | Team Udayavani |

ಕುಷ್ಟಗಿ: ದೇವರಿಗೆ ಹರಕೆ ಹೊರುವುದು ಸಾಮಾನ್ಯ ಇಲ್ಲೊಬ್ಬ ರೈತ, ”ದೊಡ್ಡನಗೌಡ ಪಾಟೀಲ ಮುಂದಿನ‌ ಶಾಸಕರಾಗಲಿ‌” ಎಂದು ಕಾರ ಹುಣ್ಣಿಮೆ‌ ಕರಿ‌‌ ಸಂದರ್ಭದ ವಿಶೇಷ ಹರಕೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

Advertisement

ತಾಲೂಕಿನ ಗುಡ್ಡದ ಹನುಮಸಾಗರ ಗ್ರಾಮ ಸಮೀಪದ ಗೊಲ್ಲರಹಳ್ಳಿಯಲ್ಲಿ ಕಾರ ಹುಣ್ಣಿಮೆ ಸಂದರ್ಭದ ಸಾಂಪ್ರದಾಯಿಕ ಎತ್ತುಗಳ‌ ಕರಿ ಹರಿಯುವ ಸ್ಪರ್ಧೆ ಯಲ್ಲಿ ರೈತರೊಬ್ಬರು ತಮ್ಮ ಎತ್ತಿನ ಮೇಲೆ D.H.Patil next M L A ಎಂದು ಬರೆಯಿಸಿ ಗಮನ ಸೆಳೆದರು.

ಕಾರ ಹುಣ್ಣಿಮೆ ಎತ್ತುಗಳ‌ ಕರಿ ಹರಿಯುವ ಸಂದರ್ಭದಲ್ಲಿ ರೈತ ಲಕ್ಷ್ಮಣ ಸಂಕನಾಳ ಅವರು, ಮಾಜಿ ಬಿಜೆಪಿ ಶಾಸಕ ಮುಂದಿನ ಶಾಸಕರಾಗಲಿ ಎಂದು ಹರಕೆ ಹೊತ್ತು ಈ ರೀತಿ ಮಾಡಿರುವುದಾಗಿ ತಿಳಿಸಿದ್ದಾನೆ. ದೊಡ್ಡನಗೌಡ ಪಾಟೀಲ ಅವರು ಶಾಸಕರಾಗುವ ವಿಶ್ವಾಸವಿದೆ ಎಂದಿದ್ದಾರೆ.

ಇನ್ನೊಂದೆಡೆ ಶಾಸಕ ಅಮರೇಗೌಡ ಪಾಟೀಲ ಬಯ್ಯಾಪೂರ ಶಾಸಕರಾಗಿ ಪುನರಾಯ್ಕೆ ಆಗಲಿ ಎಂದು ಅಭಿಮಾನಿ ರೈತನೊಬ್ಬ ತನ್ನ ಎತ್ತಿನ ಮೇಲೆ ಬರೆಸಿರುವುದು ಕಾರ ಹುಣ್ಣಿಮೆ ಸಂಭ್ರಮದಲ್ಲಿ ರಾಜಕೀಯ ತಳಕು ಹಾಕಿಕೊಂಡು ಗಮನ ಸೆಳೆದಿದೆ.

Advertisement

ಯಲಬುರ್ಗಾ ತಾಲೂಕಿನ ಬುಡಕುಂಟಿಯ ರೈತ ಮುತ್ತಣ್ಣ ಎಂಬುವರು, ಕುಷ್ಟಗಿ ಶಾಸಕ ಅಮರೇಗೌಡ ಪಾಟೀಲ ಬಯ್ಯಾಪೂರ ಮುಂದಿನ ಶಾಸಕರಾಗಲಿ ಎಂದು ತನ್ನ ಎತ್ತಿಗೆ ಬರೆಯಿಸಿ ಅಭಿಮಾನ ಮೆರೆದಿದ್ದಾನೆ. ವಿಧಾನಸಭಾ ಕ್ಷೇತ್ರದ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಈ ಬೆಳವಣಿಗೆಗಳು ಚರ್ಚೆಗೆ ಗ್ರಾಸವಾಗಿದೆ.

ಕುಷ್ಟಗಿ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ನಾಯಕ ಅಮರೇಗೌಡ ಪಾಟೀಲ್ ಬಯ್ಯಾಪುರ ಅವರ ಎದುರು ದೊಡ್ಡನಗೌಡ ಪಾಟೀಲ ಅವರು ಕಳೆದ  ಚುನಾವಣೆಯಲ್ಲಿ ಸೋಲು ಅನುಭವಿಸಿದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next