ಕೊರಟಗೆರೆ: ತಾಲೂಕಿನ ಬುಕ್ಕಪಟ್ಟಣದ ಗ್ರಾಮದಲ್ಲಿ ದೊಡ್ಡಮ್ಮ ಶ್ರೀಕಾವಲ್ಲಮ್ಮ ದೇವಿ ಜಾತ್ರಾ ಮಹೋತ್ಸವ ಕಳೆದ ಏ.28 ರಿಂದ ನಡೆಯುತ್ತಿದ್ದು ದೇವಿಗೆ ವಿಶೇಷ ಪೂಜೆಯೊಂದಿಗೆ ವಿವಿಧ ಸೇವಾಕಾರ್ಯಕ್ರಮಗಳು ನಡೆಯುತ್ತಿದೆ.
ಜಾತ್ರೆ ಪ್ರಾರಂಭ ಜಲದಿ ಮಹೋ ತ್ಸವದಿಂದ ಪ್ರಾರಂಭವಾಗಿ ಪ್ರತಿನಿತ್ಯ ಪ್ರಾಕಾರೋತ್ಸವ ನಡೆದ ಮಾರನೇ ದಿನ ರಾತ್ರಿ ದೊಡ್ಡಮ್ಮ ದೇವಿ ರಥೋತ್ಸವ ನಡೆಯುತ್ತದೆ. ಹೆರೆಜೇನಹಳ್ಳಿ ಪಟ್ಟದ ನಾರಾಯಣಪ್ಪ ಅವರಿಂದ ಈ ವರ್ಷದಲ್ಲಿ ತಾಲೂಕಿನಲ್ಲಿ ಮಳೆ-ಬೆಳೆಗಳ ಬಗ್ಗೆ ಅಮ್ಮನವರ ಪಟ್ಟ, ಸುತ್ತ-ಮುತ್ತಲ ಗ್ರಾಮ ಸ್ಥರಿಂದ ದವನೋತ್ಸವ ಮತ್ತು ಉತ್ಸವ ಮೆರವಣಿಗೆ, ಮಗ್ಗಿನವಾಹನ ಉತ್ಸವ, ಬಿಲ್ವಪತ್ರೆ ವಾಹನ ಮತ್ತು ಉತ್ಸವ ನಡೆ ಯುತ್ತಿದೆ ಎಂದು ದೇವಾಲಯದ ಪ್ರಧಾನ ಅರ್ಚಕ ದೊಡ್ಡಕಾಮಯ್ಯ ರಾಮಚಂದ್ರ, ಸಿದ್ದೇಶ್ ತಿಳಿಸಿದ್ದಾರೆ.
Advertisement
ಮುಜರಾಯಿ ಇಲಾಖೆಗೆ ಸೇರಿದ 400 ವರ್ಷಗಳ ಹಿಂದೆ ವಿಜಯನಗರ ಸಾಮ್ರಾಜ್ಯದ ಹಕ್ಕ-ಬುಕ್ಕರು ಈ ದೇವಾ ಲಯಕ್ಕೆ ಆಗಮಿಸಿ ಪೂಜೆ ಸಲ್ಲಿಸುತ್ತಿದ್ದರು ಎಂಬ ಕುರುಹುಗಳುಳ್ಳ, ಈ ದೇವಾಲಯ ಪ್ರತಿ ವರ್ಷ ಚೈತ್ರ ಶುದ್ಧ ಹುಣ್ಣಿಮೆಯ ಸೋಮವಾರ ದಿಂದ 8 ದಿನಗಳವರೆಗೆ ದೊಡ್ಡಮ್ಮ ದೇವಿ ಜಾತ್ರೆ ನಡೆಯುತ್ತದೆ. ಜಾತ್ರೆಯ 15 ದಿನಗಳ ಮೊದಲು ಕಂಕಣ ಕಟ್ಟುವ ಪದ್ಧತಿ ರೂಢಿಯಲ್ಲಿದೆ. ಕಂಕಣ ಕಟ್ಟಿದ ನಂತರ ದೇವಿ ಭಕ್ತರು ಸುತ್ತ-ಮುತ್ತ 40 ಗ್ರಾಮಗಳಲ್ಲಿ ಪ್ರಾಣಿವಧೆ ಮಾಡು ವುದಿಲ್ಲ.