Advertisement

ಮನೆಗೆ ತೆರಳಿ ಲಸಿಕೆ

10:47 AM Nov 27, 2021 | Team Udayavani |

ಅಫಜಲಪುರ: ಕೋವಿಡ್‌ ಲಸಿಕೆ ಕುರಿತು ಅನೇಕರಲ್ಲಿ ತಪ್ಪು ತಿಳಿವಳಿಕೆಯಿದ್ದು, ಸರ್ಕಾರ ಉಚಿತವಾಗಿ ಲಸಿಕೆ ನೀಡುತ್ತಿದ್ದರೂ ಕೆಲವರು ತಪ್ಪಿಸಿಕೊಳ್ಳುತ್ತಿದ್ದಾರೆ. ಹೀಗಾಗಿ ಅಂತವ ರನ್ನು ಹುಡುಕಲು ಮನೆಮನೆಗೆ ತೆರಳಿ ಲಸಿಕೆ ಹಾಕುತ್ತಿದ್ದೇವೆ ಎಂದು ಬಡದಾಳ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ| ರತ್ನಶೀಲಾ ಹೇಳಿದರು.

Advertisement

ತಾಲೂಕಿನ ಬಡದಾಳ ಹೊಸ ಬಡಾವಣೆಯಲ್ಲಿ ಸಾರ್ವಜನಿಕರಿಗೆ ಲಸಿಕೆ ಹಾಕಿ ಮಾತನಾಡಿದ ಅವರು, ಕೆಲವರು ಮೊದಲ ಡೋಸ್‌ ಹಾಕಿಸಿಕೊಂಡು, ಎರಡನೇ ಡೋಸ್‌ ಹಾಕಿಸಿಕೊಂಡಿಲ್ಲ. ಅಂತವರನ್ನು ಸಹ ಹುಡುಕುತ್ತಿದ್ದೇವೆ ಎಂದರು.

ಪಿಡಿಒ ಶೋಭಾ ದಿಕ್ಸಂಗಿ ಮಾತನಾಡಿ, ನಾವು ಕೂಡ ಕೋವಿಡ್‌ ಲಸಿಕಾ ಅಭಿಯಾನಕ್ಕೆ ಕೈಜೋಡಿಸಿದ್ದೇವೆ. ಆರೋಗ್ಯ ಇಲಾಖೆಯವರೊಂದಿಗೆ ಗ್ರಾ.ಪಂ ಸಿಬ್ಬಂದಿ ಜತೆಗೂಡಿ ಲಸಿಕೆ ಹಾಕಿಸಲು ಮುಂದಾಗಿದ್ದೇವೆ. ಪ್ರತಿ ಮನೆ-ಮನೆಗೆ ತೆರಳಿ ಲಸಿಕೆ ಹಾಕಿಸಲಾಗುತ್ತಿದೆ ಎಂದರು.

ಆರೋಗ್ಯ ಇಲಾಖೆ ಸಿಬ್ಬಂದಿಗಳಾದ ಸಂತೋಷ ಮಹಾಜನಶೆಟ್ಟಿ, ರೂಪಾ ಹಿರೇಮಠ, ಆಶಾ ಕಾರ್ಯಕರ್ತೆಯರಾದ ಸುನಂದಾ ಗುಡೆದಮನಿ, ಆಶಾಬಾಯಿ ದೊಡ್ಮನಿ, ರಾಜೇಶ್ವರಿ ಖ್ಯಾಡಗಿ, ಸರುಬಾಯಿ ನಿಲಂಗಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next