Advertisement

Scissor: ಮಹಿಳೆಯ ಹೊಟ್ಟೆಯಲ್ಲೇ ಕತ್ತರಿ ಬಿಟ್ಟ ವೈದ್ಯ, ವಿಚಾರ ಗೊತ್ತಾಗಿದ್ದು 2 ವರ್ಷದ ಬಳಿಕ

04:34 PM Nov 30, 2024 | Team Udayavani |

ಭೋಪಾಲ್: ಗ್ವಾಲಿಯರ್ ನ ಸರ್ಕಾರಿ ಆಸ್ಪತ್ರೆಯಲ್ಲಿನ ವೈದ್ಯರೊಬ್ಬರ ಎಡವಟ್ಟಿನಿಂದ ಕ್ಯಾನ್ಸರ್ ಶಸ್ತ್ರಚಿಕಿತ್ಸೆಗೆ ತೆರಳಿದ್ದ ಮಹಿಳೆಯ ಹೊಟ್ಟೆಯಲ್ಲೇ ಕತ್ತರಿ ಬಿಟ್ಟಿರುವ ಪ್ರಸಂಗ ನಡೆದಿದ್ದು ಇದಾಗಿ ಬರೋಬ್ಬರಿ ಎರಡು ವರ್ಷಗಳ ಬಳಿಕ ಮಹಿಳೆಯ ಹೊಟ್ಟೆಯಲ್ಲಿ ಕತ್ತರಿ ಬಿಟ್ಟಿರುವ ಆಘಾತಕಾರಿ ವಿಚಾರ ಬೆಳಕಿಗೆ ಬಂದಿದೆ.

Advertisement

ಕ್ಯಾನ್ಸರ್ ನಿಂದ ಬಳಲುತ್ತಿದ್ದ ಕಮಲಾ ಎಂಬ ಮಹಿಳೆ ಎರಡು ವರ್ಷಗಳ ಹಿಂದೆ ಗ್ವಾಲಿಯರ್ ನ ಸರ್ಕಾರಿ ಆಸ್ಪತ್ರೆಯಲ್ಲಿ ಆಪರೇಷನ್ ಗೆ ಒಳಗಾಗಿದ್ದರು ಈ ವೇಳೆ ಮಹಿಳೆಗೆ ಶಸ್ತ್ರಚಿಕಿತ್ಸೆ ನಡೆಸಿದ ವೈದ್ಯರು ಮರೆತು ಮಹಿಳೆಯ ದೇಹದೊಳಗೆ ಕತ್ತರಿಯೊಂದನ್ನು ಬಿಟ್ಟಿದ್ದಾರೆ. ಆದರೆ ಈ ವಿಚಾರ ವೈದ್ಯರಿಗಾಗಲಿ ಅವರ ಸಹಾಯಕರಿಗಾಗಲಿ ಗೊತ್ತಾಗಿರಲಿಲ್ಲ ಇದಾಗಿ ಎರಡು ವರ್ಷಗಳ ಬಳಿಕ ಮಹಿಳೆಗೆ ಹೊಟ್ಟೆನೋವು ಕಾಣಿಸಿಕೊಂಡಿದೆ ಯಾವುದೇ ಮದ್ದು ತೆಗೆದುಕೊಂಡರು ಹೊಟ್ಟೆನೋವು ಕಡಿಮೆಯಾಗಲಿಲ್ಲ ಬಳಿಕ ಮಹಿಳೆ ಭಿಂಡ್ ನಲ್ಲಿರುವ ಜಿಲ್ಲಾ ಆಸ್ಪತ್ರೆಗೆ ತೆರಳಿದ್ದಾರೆ ಈ ವೇಳೆ ಆಸ್ಪತ್ರೆಯ ವೈದ್ಯ ಸತೀಶ್ ಶರ್ಮಾ ಅವರು ಮಹಿಳೆಯ ಹೊಟ್ಟೆಯ ಸಿಟಿ ಸ್ಕ್ಯಾನ್ ಮಾಡಿದ್ದಾರೆ, ಸಿಟಿ ಸ್ಕ್ಯಾನ್ ವರದಿ ನೋಡಿ ವೈದ್ಯರು, ಮಹಿಳೆಯ ಕುಟುಂಬದವರು ಬೆಚ್ಚಿ ಬಿದ್ದಿದ್ದಾರೆ ಕಾರಣ ಮಹಿಳೆಯ ಹೊಟ್ಟೆಯೊಳಗೆ ಕತ್ತರಿ ಇರುವುದು.

ಇದರ ಬಗ್ಗೆ ಮಹಿಳೆಯ ಕುಟುಂಬದವರ ಬಳಿ ವೈದ್ಯರು ವಿಚಾರಣೆ ಮಾಡಿದ ವೇಳೆ ಎರಡು ವರ್ಷಗಳ ಹಿಂದೆ ಕಮಲಾ ಅವರಿಗೆ ಗ್ವಾಲಿಯರ್ ನ ಸರ್ಕಾರಿ ಆಸ್ಪತ್ರೆಯಲ್ಲಿ ಕ್ಯಾನ್ಸರ್ ಚಿಕಿತ್ಸೆ ನೀಡಿದ ವೇಳೆ ವೈದ್ಯರು ಕತ್ತರಿಯನ್ನು ಹೊಟ್ಟೆಯಲ್ಲೇ ಬಿಟ್ಟಿರುವುದು ಬೆಳಕಿಗೆ ಬಂದಿದೆ.

ಸದ್ಯ ಮಹಿಳೆಯ ಹೊಟ್ಟೆಯಲ್ಲಿದ್ದ ಕತ್ತರಿಯನ್ನು ವೈದ್ಯರು ಶಸ್ತ್ರಚಿಕಿತ್ಸೆ ನಡೆಸಿ ಹೊರತೆಗೆದಿದ್ದು ಮಹಿಳೆ ಆರೋಗ್ಯವಾಗಿದ್ದಾರೆ, ಇನ್ನು ಶಸ್ತ್ರ ಚಿಕಿತ್ಸೆ ವೇಳೆ ನಿರ್ಲಕ್ಷ ವಹಿಸಿದ ವೈದ್ಯರ ವಿರುದ್ಧ ದೂರು ನೀಡುವುದಾಗಿ ಮಹಿಳೆ ಹಾಗೂ ಕುಟುಂಬ ಸದಸ್ಯರು ಮುಂದಾಗಿದ್ದಾರೆ.

ಇದನ್ನೂ ಓದಿ: Tamilnadu: ಫೆಂಗಲ್‌ ಚಂಡಮಾರುತದ ಅಬ್ಬರ-ಚೆನ್ನೈ ವಿಮಾನ ನಿಲ್ದಾಣ ಬಂದ್‌, ರೆಡ್‌ ಅಲರ್ಟ್

Advertisement
Advertisement

Udayavani is now on Telegram. Click here to join our channel and stay updated with the latest news.

Next