Advertisement

ವೈದ್ಯರ ಕೈಬರಹದ ಬಗ್ಗೆ ಆನಂದ್‌ ಮಹೀಂದ್ರಾ ಟ್ವೀಟ್‌

10:27 PM Sep 04, 2022 | Team Udayavani |

ವೈದ್ಯರ ಕೈಬರಹವು ಹೇಗೆ ಹಾವಿನ ರೂಪ ತಳೆಯುತ್ತದೆ ಎನ್ನುವುದನ್ನು ವಿವರಿಸುವಂತಹ ವಿಡಿಯೋವೊಂದನ್ನು ಉದ್ಯಮಿ ಆನಂದ್‌ ಮಹೀಂದ್ರಾ ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ.

Advertisement

10ನೇ ತರಗತಿಗೆ ಸ್ಪಷ್ಟವಾಗಿರುವ ಕೈಬರಹವು 11ನೇ ತರಗತಿ ಎನ್ನುವಾಗ ಸ್ವಲ್ಪ ವಕ್ರವಾಗುತ್ತದೆ. 12ನೇ ತರಗತಿಗೆ ಕಷ್ಟಪಟ್ಟು ಅರ್ಥ ಮಾಡಿಕೊಳ್ಳುವ ಹಂತ ತಲುಪುತ್ತದೆ. ಎಂಬಿಬಿಎಸ್‌ ವೇಳೆ ಅರ್ಥವಾಗದ ಕೈಬರಹವು ಸರ್ಜನ್‌ ವೈದ್ಯರಾಗುವ ಸಮಯಕ್ಕೆ ನೆಟ್ಟಗಿನ ಗೆರೆಯಾಗಿಬಿಡುತ್ತದೆ.

ಈ ವಿಡಿಯೋ ಹಂಚಿಕೊಂಡಿರುವ ಆನಂದ್‌, “ವಿಡಿಯೋ ಉಲ್ಲಾಸದಾಯಕವಾಗಿದೆ ಹಾಗೆಯೇ ಸತ್ಯ ಕೂಡ’ ಎಂದು ಬರೆದುಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next