Advertisement
ಆಸ್ಪತ್ರೆಗಳಲ್ಲಿ ಮಕ್ಕಳು ಸೇರಿದಂತೆ ಸಾವಿರಾರು ಪ್ಯಾಲೆಸ್ತೀನಿಯರು ಚಿಕಿತ್ಸೆ ಪಡೆಯುತ್ತಿದ್ದು, ಲಕ್ಷಕ್ಕೂ ಅಧಿಕ ಮಂದಿ ಆಶ್ರಯ ಪಡೆದಿದ್ದಾರೆ. ಸೋಮವಾರ ಗಾಜಾದ ಉತ್ತರ-ದಕ್ಷಿಣ ಹೆದ್ದಾರಿಯನ್ನು ಇಸ್ರೇಲ್ ಪಡೆ ಮುಚ್ಚಿದ್ದು, ದಾಳಿಯ ಆತಂಕ ಹೆಚ್ಚಾಗಿದೆ. ಅಲ್ಲದೆ, ಗಾಜಾದಲ್ಲಿ ಸದ್ಯ 10 ಆಸ್ಪತ್ರೆಗಳು ಮಾತ್ರವೇ ಕಾರ್ಯನಿರ್ವಹಿಸುತ್ತಿದ್ದು, ಈ ಎಲ್ಲ ಆಸ್ಪತ್ರೆಗಳಿಗೂ “ಕೂಡಲೇ ಸ್ಥಳಾಂತರಗೊಳ್ಳಿ’ ಎಂಬ ಎಚrರಿಕೆ ಸಂದೇಶ ರವಾನೆಯಾಗಿದೆ. ಇದೊಂದು ಕಳವಳಕಾರಿ ಸಂಗತಿ ಎಂದೂ ವಿಶ್ವಸಂಸ್ಥೆ ಸಿಬ್ಬಂದಿ ಹೇಳಿಕೊಂಡಿದ್ದಾರೆ. ಪ್ರಮುಖ ಆಸ್ಪತ್ರೆಗಳನ್ನೇ ಉಗ್ರರು ತಮ್ಮ ನಿಯಂತ್ರಣಾ ಕೇಂದ್ರಗಳಾಗಿ ಬಳಸುತ್ತಿದ್ದಾರೆ ಎಂದು ಇತ್ತೀಚೆಗೆ ಇಸ್ರೇಲ್ ವಿಡಿಯೋ ಸಾಕ್ಷ್ಯ ಬಿಡುಗಡೆ ಮಾಡಿತ್ತು.
Related Articles
ಇಸ್ರೇಲ್‌ನಿಂದ ರಷ್ಯಾದ ಡಾಗೆಸ್ತಾನ್ ವಿಮಾನ ನಿಲ್ದಾಣಕ್ಕೆ ಭಾನುವಾರ ವಿಮಾನವೊಂದು ಬಂದಿಳಿಯಿತು. ಈ ವೇಳೆ, ಪ್ಯಾಲೆಸ್ತೀನ್ ಬೆಂಬಲಿಸಿ ನೂರಾರು ಮುಸ್ಲಿಮರು ವಿಮಾನ ನಿಲ್ದಾಣದಲ್ಲಿ ಜಮಾಯಿಸಿದ್ದರು. ಮಖಚಲಾ ಮುಸ್ಲಿಂ ಬಾಹುಳ್ಯದ ಪ್ರದೇಶ. ಪ್ರತಿಭಟನಾಕಾರರು ಭದ್ರತೆಯನ್ನು ಭೇದಿಸಿ, ವಿಮಾನ ನಿಲ್ದಾಣದೊಳಗೆ ನುಗ್ಗಿದರು. ಇಸ್ರೇಲ್ ವಿರುದ್ಧ ಘೋಷಣೆಗಳನ್ನು ಕೂಗಿದರು. ಕೆಲವರು ಕೈನಲ್ಲಿ ಬಂದೂಕು ಮತ್ತು ದೊಣ್ಣೆಗಳನ್ನು ಹಿಡಿದು, ಭದ್ರತಾ ಸಿಬ್ಬಂದಿ ಅಳವಡಿಸಿದ್ದ ಬ್ಯಾರಿಕೇಡ್‌ಗಳನ್ನು ತಳ್ಳಿ, ಒಳ ಪ್ರವೇಶಿಸಿದರು. “ನಾವು ಯಹೂದಿಯರಿಗಾಗಿ ಬಂದಿದ್ದೇವೆ. ಅವರನ್ನು ಕೊಲ್ಲುತ್ತೇವೆ. ಅಲ್ಲಾಹು ಅಕºರ್’ ಎಂದು ಘೋಷಣೆಗಳನ್ನು ಕೂಗಿದರು.
Advertisement
ಯಹೂದಿಯರಿಗಾಗಿ ಹುಡುಕಾಟ ನಡೆಸಿದರು. ಈ ವೇಳೆ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಯಿತು. ಘರ್ಷಣೆಯಲ್ಲಿ 9 ಪೊಲೀಸರು ಸೇರಿದಂತೆ ಕನಿಷ್ಠ 20 ಮಂದಿ ಗಾಯಗೊಂಡರು. ಈ ಪೈಕಿ ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ. 60 ಮಂದಿ ಪ್ರತಿಭಟನಾಕಾರರನ್ನು ಪೊಲೀಸರು ಬಂಧಿಸಿದ್ದಾರೆ. ಸದ್ಯ ಪರಿಸ್ಥಿತಿ ಹತೋಟಿಯಲ್ಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಜರ್ಮನ್ ಯುವತಿ ಶವ ಪತ್ತೆ !ಇಸ್ರೇಲ್ ಮೇಲಿನ ದಾಳಿ ಸಂದರ್ಭದಲ್ಲಿ ಹಮಾಸ್ ಉಗ್ರರು ಅಪಹರಿಸಿ, ವಿಕೃತವಾಗಿ ಮೆರವಣಿಗೆ ನಡೆಸಿದ್ದ ಜರ್ಮನ್ ಮೂಲದ ಟ್ಯಾಟೂಯಿಸ್ಟ್ ಶಾನಿಲೌಕ್ ಅವರ ಮೃತದೇಹ ಪತ್ತೆಯಾಗಿದೆ. ಶಾನಿ ಅವರ ದೇಹದ ಗುರುತು ಪತ್ತೆಹಚ್ಚಿದ ಬಳಿಕ ಈ ಕುರಿತು ಇಸ್ರೇಲ್ ಸರ್ಕಾರ ಟ್ವೀಟ್ ಮಾಡಿದ್ದು,” ಶಾಂತಿಗಾಗಿ ನಡೆಯುತ್ತಿದ್ದ ಸಂಗೀತ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಶಾನಿ ಅವರನ್ನು ಹಮಾಸ್ ಉಗ್ರರು ಅಪಹರಿಸಿ, ಚಿತ್ರಹಿಂಸೆ ನೀಡಿ, ಗಾಜಾದ ತುಂಬಾ ಮೆರವಣಿಗೆ ನಡೆಸಿದರು. ಶಾನಿ ಅನುಭವಿಸಿದ ಚಿತ್ರಹಿಂಸೆಗಳು ನಮ್ಮ ಹೃದಯಗಳನ್ನು ವಿದ್ರಾವಕಗೊಳಿಸಿವೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ’ ಎಂದಿದೆ.