ಶ್ರೀನಗರ: ಉತ್ತರ ಭಾರತದಾದ್ಯಂತ ಪ್ರಬಲ ಭೂಕಂಪನದ ಅನುಭವವಾಗುತ್ತಿದ್ದಂತೆ, ಜಮ್ಮು ಮತ್ತು ಕಾಶ್ಮೀರದ ಅನಂತನಾಗ್ ಜಿಲ್ಲೆಯ ಆಸ್ಪತ್ರೆಯ ವೈದ್ಯರು ಧೃತಿಗೆಡದೆ ಧೈರ್ಯ ಉಳಿಸಿಕೊಂಡು ಹೆರಿಗೆ ಮಾಡಿಸಿದ್ದಾರೆ. ವೈದ್ಯೋ ನಾರಾಯಣೋ ಹರಿ ಎನ್ನುವ ಮಾತಿಗೆ ನಿಜಾರ್ಥದಲ್ಲಿ ಮಹತ್ವ ಸಾರಿದ್ದಾರೆ.
ಮಂಗಳವಾರ ಕಣಿವೆಯಲ್ಲಿ ಪ್ರಬಲವಾದ ಭೂಕಂಪ ಅನುಭವವಾಗಿದ್ದು, ಸಿಸೇರಿಯನ್ ಮೂಲಕ ಮಗುವಿನ ಹೆರಿಗೆ ಮಾಡಿದ್ದಾರೆ. ಅನಂತನಾಗ್ ಜಿಲ್ಲೆಯ ಮುಖ್ಯ ವೈದ್ಯಕೀಯ ಅಧಿಕಾರಿ ಟ್ವಿಟ್ಟರ್‌ನಲ್ಲಿ ವಿಡಿಯೋವನ್ನು ಹಂಚಿಕೊಂಡಿದ್ದಾರೆ ಮತ್ತು ”ಅನಂತ್‌ನಾಗ್‌ನ ಎಸ್‌ಡಿಹೆಚ್ (ಉಪ ಜಿಲ್ಲಾ ಆಸ್ಪತ್ರೆ) ಬಿಜ್‌ಬೆಹರಾದಲ್ಲಿ ತುರ್ತು ಎಲ್‌ಎಸ್‌ಸಿಎಸ್ (ಕಡಿಮೆ-ವಿಭಾಗದ ಸಿಸೇರಿಯನ್ ವಿಭಾಗ) ನಡೆಯುತ್ತಿದೆ, ಈ ಸಮಯದಲ್ಲಿ ಭೂಕಂಪದ ಪ್ರಬಲ ಕಂಪನವನ್ನು ಅನುಭವಿಸಲಾಯಿತು ಎಂದು ವಿಡಿಯೋ ಹಂಚಿಕೊಳ್ಳಲಾಗಿದೆ.
ಇದನ್ನೂ ಓದಿ : ಪಾಕಿಸ್ಥಾನಲ್ಲಿ ಪ್ರಬಲ ಭೂಕಂಪ; ಇಬ್ಬರ ಮೃತ್ಯು, ಭಾರತದ ಹಲವೆಡೆ ಕಂಪನ
“ಎಲ್‌ಎಸ್‌ಸಿಎಸ್ ಅನ್ನು ಸುಗಮವಾಗಿ ನಡೆಸಿದ ಎಸ್‌ಡಿಹೆಚ್ ಬಿಜ್‌ಬೆಹರಾ ಸಿಬಂದಿಗೆ ಅಭಿನಂದನೆಗಳು ಮತ್ತು ಎಲ್ಲವೂ ಸರಿಯಾಗಿದೆ ಎಂದು ದೇವರಿಗೆ ಧನ್ಯವಾದಗಳು” ಎಂದು ಟ್ವೀಟ್‌ನಲ್ಲಿ ಬರೆಯಲಾಗಿದೆ.
Related Articles
ನಡುಗುತ್ತಿರುವಾಗ ವೈದ್ಯರು ತಮ್ಮ ಕೆಲಸವನ್ನು ಹೇಗೆ ನಿರ್ವಹಿಸಿದರು ಮತ್ತು ಮಗುವಿನ ಜನ್ಮಕ್ಕೆ ಸಹಕರಿಸಿದರು ಎಂಬುದನ್ನು ತೋರಿಸುವ ವಿಡಿಯೋಗೆ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.