ಸಾಗರ: ತಮ್ಮ ವೃತ್ತಿಗೆ ಮತ್ತು ತಾವು ಓದಿದ ವಿದ್ಯೆಗೆ ಬೆಲೆ ಸಿಗುವುದಿಲ್ಲ ಎಂದುಬಹುತೇಕ ವೈದ್ಯರು ಗ್ರಾಮೀಣ ಭಾಗದಲ್ಲಿ ಕೆಲಸ ಮಾಡಲು ಮುಂದೆ ಬರುತ್ತಿಲ್ಲಎಂದು ಶಾಸಕ ಎಚ್. ಹಾಲಪ್ಪ ಹರತಾಳು ತಿಳಿಸಿದರು.
ಇಲ್ಲಿನ ನಗರಸಭೆ ರಂಗಮಂದಿರದಲ್ಲಿ ಗುರುವಾರ ಬಿಜೆಪಿ ವತಿಯಿಂದ ವೈದ್ಯರ ದಿನಾಚರಣೆ ಅಂಗವಾಗಿ ಸರ್ಕಾರಿಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ 50ಕ್ಕೂ ಹೆಚ್ಚು ವೈದ್ಯರನ್ನು ಸನ್ಮಾನಿಸಿ ಅವರು ಮಾತನಾಡಿದರು.
ಗ್ರಾಮೀಣ ಭಾಗದಲ್ಲಿ ಸಣ್ಣಪುಟ್ಟ ಜನಪ್ರತಿನಿಧಿಗಳು ವೈದ್ಯರ ಮೇಲೆ ಹರಿಹಾಯುವ ಮೂಲಕ ಪುಕ್ಕಟೆ ಪ್ರಚಾರ ಗಿಟ್ಟಿಸಿಕೊಳ್ಳುವಪ್ರಯತ್ನ ನಡೆಸುತ್ತಿದ್ದಾರೆ. ವೈದ್ಯರನ್ನು ಗೌರವಾದರಗಳಿಂದ ನೋಡಬೇಕು ಎನ್ನುವ ಮನಸ್ಥಿತಿ ಇನ್ನೂ ಜಾಗೃತಿಯಾಗದೆಇರುವುದು ಬೇಸರದ ಸಂಗತಿ. ವೈದ್ಯರಿಗೆಬೈಯ್ದು, ಹಲ್ಲೆ ಮಾಡಿ ದೊಡ್ಡ ಲೀಡರ್ ಆಗುವುದು ಅತ್ಯಂತ ನಾಚಿಕೆಗೇಡಿನ ಕೆಲಸ. ತಹಶೀಲ್ದಾರ್, ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಹೀಗೆ ಬಹುತೇಕ ಅ ಧಿಕಾರಿಗಳುವೈದ್ಯರನ್ನು ಗದರಿಸುತ್ತಾರೆ. ಇಂತಹವಾತಾವರಣದಲ್ಲಿಯೂ ಸರ್ಕಾರಿ ವೈದ್ಯರುನಿಷ್ಟೆಯಿಂದ ಕೆಲಸ ಮಾಡಿ ರೋಗಿಗಳಪ್ರಾಣ ಉಳಿಸುವ ಪ್ರಾಮಾಣಿಕ ಪ್ರಯತ್ನನಡೆಸುತ್ತಿರುವುದು ಅಭಿನಂದಾರ್ಹ ಸಂಗತಿ ಎಂದರು.
ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ. ಮೇಘರಾಜ್ ಮಾತನಾಡಿ, ಕೊರೊನಾ ಸಂದರ್ಭದಲ್ಲಿ ಸಾಗರ ಉಪವಿಭಾಗೀಯ ಆಸ್ಪತ್ರೆಯಲ್ಲಿ ಡಾ| ಹರೀಶ್, ಡಾ| ಶಾಂತಲಾ, ಡಾ| ಕಾವ್ಯಸೇರಿದಂತೆ ಎಲ್ಲರೂ ತಂಡವಾಗಿ ಕೆಲಸಮಾಡಿ ನೂರಾರು ಜನರನ್ನು ಬದುಕಿಸಿದ್ದಾರೆ.ಸವಾಲಿನ ನಡುವೆಯೂ ಅತ್ಯಂತನಿಷ್ಟೆಯಿಂದ ಸೇವೆ ಸಲ್ಲಿಸುವುದು ವೈದ್ಯರಿಗೆ ದೇವರು ನೀಡಿದ ವರವಾಗಿದೆ ಎಂದರು.ಕೆಎಸ್‌ಐಡಿಎಸ್ ಉಪಾಧ್ಯಕ್ಷ ಎಸ್. ದತ್ತಾತ್ರಿ ಮಾತನಾಡಿದರು.
ನಗರಸಭೆ ಅಧ್ಯಕ್ಷೆ ಮಧುರಾ ಶಿವಾನಂದ್, ಉಪಾಧ್ಯಕ್ಷ ವಿ. ಮಹೇಶ್, ಸ್ಥಾಯಿ ಸಮಿತಿ ಅಧ್ಯಕ್ಷಡಿ. ತುಕಾರಾಮ್, ಬಿಜೆಪಿ ನಗರ ಅಧ್ಯಕ್ಷ ಗಣೇಶಪ್ರಸಾದ್, ಡಾ| ಪ್ರಕಾಶ್ ಬೋಸ್ಲೆ, ಡಾ| ದೀಪಕ್ ಇನ್ನಿತರರು ಇದ್ದರು.