Advertisement

ವೈದ್ಯರ ಅವಿರತ ನಿಸ್ವಾರ್ಥ ಸೇವೆ ಅನನ್ಯವಾದದು

03:09 PM Jul 03, 2022 | Team Udayavani |

ಮಾಗಡಿ: ದೇಶದ ಅಭ್ಯುದ್ಯಯಕ್ಕೆ ಮತ್ತು ಆರೋಗ್ಯವಂತ ಸಮಾಜ ನಿರ್ಮಾಣದಲ್ಲಿ ಶಿಕ್ಷಕರು ಮತ್ತು ವೈದ್ಯರು ಅತ್ಯಂತ ಮಹತ್ವದ ಪಾತ್ರ ವಹಿಸುತ್ತಾರೆ. ಇವರನ್ನು ಗೌರವಿಸುವುದು ಸಮಾಜದ ಕರ್ತವ್ಯ ಎಂದು ಮಾಗಡಿ ರೋಟರಿ ಸಂಸ್ಥೆ ಅಧ್ಯಕ್ಷ ಕೆ.ಎಚ್‌.ಶಂಕರ್‌ ಅಭಿಪ್ರಾಯಪಟ್ಟರು.

Advertisement

ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರ ದಿನದ ಪ್ರಯುಕ್ತ ವೈದ್ಯರನ್ನು ಸನ್ಮಾನಿಸಿ ಮಾತನಾಡಿದ ಅವರು, ವೈದ್ಯೋ ಹರಿ ನಾರಾಯಣ ಎಂಬಂತೆ ವೈದ್ಯರು ರೋಗಿಗಳ ಪಾಲಿಗೆ ದೇವರೇ ಆಗಿರುತ್ತಾರೆ. ಸರ್ಕಾರಿ ಆಸ್ಪತ್ರೆ ಕೇವಲ ಬಡವರಿಗಾಗಿ ಮಾತ್ರವಲ್ಲದೆ, ಶ್ರೀಮಂತರು ಸಹ ತಮ್ಮ ಆರೋಗ್ಯವನ್ನು ಪರೀಕ್ಷೆ ಮಾಡಿಸಿಕೊಳ್ಳಬೇಕೆಂಬ ವಾತಾವರಣವನ್ನು ವೈದ್ಯರು ಸೃಷ್ಠಿಸಿದ್ದಾರೆ. ಇಲ್ಲಿನ ವೈದ್ಯರ ಅವಿರತ ನಿಸ್ವಾರ್ಥ ಸೇವೆ ಅನನ್ಯವಾದುದು ಎಂದರು.

ಕೋವಿಡ್‌ ಸಂದರ್ಭದಲ್ಲಿ ನಾವೆಲ್ಲರೂ ಮನೆಯಿಂದ ಹೊರಗೆ ಬರಲು ಭಯ ಪಡುತ್ತಿದ್ದೇವೆ. ಆದರೆ, ಯಾವುದೇ ಭಯ, ಭೀತಿ, ಆತಂಕವಿಲ್ಲದೆ ವೈದ್ಯರು ಕೋವಿಡ್‌ ಸೋಂಕಿತ ರೋಗಿಗಳಿಗೆ ಅಗತ್ಯ ಚಿಕಿತ್ಸೆ ಕೊಟ್ಟು ಅವರನ್ನು ಗುಣಮುಖರಾಗುವಂತೆ ಸೇವೆಯಲ್ಲಿ ನಿರತರಾಗಿದ್ದಾರೆ. ಅವರನ್ನು ಗೌರವಿಸುವುದು ನಾಗರಿಕರಾದ ನಮ್ಮೆಲ್ಲರ ಕರ್ತವ್ಯವಾಗಿದ್ದು, ವೈದ್ಯರ ದಿನದ ಪ್ರಯುಕ್ತ ವೈದ್ಯರೆಲ್ಲರನ್ನು ಸನ್ಮಾನಿಸಲು ಸಹಕರಿಸಿದ ಎಲ್ಲರಿಗೂ ಧನ್ಯವಾದಗಳು ಎಂದು ತಿಳಿಸಿದರು.

ಆಸ್ಪತ್ರೆ ಉನ್ನತೀಕರಣಕ್ಕೆ ಸಹಕಾರ: ಸರ್ಕಾರಿ ಆಸ್ಪತ್ರೆ ಮುಖ್ಯ ವೈದ್ಯಾಧಿಕಾರಿ ಡಾ.ರಾಜೇಶ್‌ ಮಾತನಾಡಿ, ಸರ್ಕಾರ ಸರ್ಕಾರಿ ಆಸ್ಪತ್ರೆಯನ್ನು ಕೇವಲ ಬಡರಿಗೆ ಮಾತ್ರ ತೆರೆದಿಲ್ಲ, ಶ್ರೀಮಂತರೂ ಸಹ ಇಲ್ಲಿನ ಸೇವೆಯನ್ನು ಪಡೆದುಕೊಳ್ಳುವಂತ ವಾತಾವರಣ ಸರ್ಕಾರ ನಿರ್ಮಿಸಿದೆ. ಸರ್ಕಾರ ಆಸ್ಪತ್ರೆಗಳಿಗೆ ಸಾಕಷ್ಟು ಅನುದಾನ ಹಾಗೂ ಸೌಲಭ್ಯಗಳನ್ನು ನೀಡಿದೆ. ಜೊತೆಗೆ ಸಮಾಜ ಸೇವಕರು, ಮುಖಂಡರು ಸಹ ಆಸ್ಪತ್ರೆಯ ಉನ್ನತೀಕರಣಕ್ಕೆ ಸಹಕಾರ ನೀಡಿದ್ದಾರೆ ಎಂದು ತಿಳಿಸಿದರು.

ರೋಟರಿ ಸಂಸ್ಥೆಯ ಕಾರ್ಯದರ್ಶಿ ಮುನಿಯಪ್ಪ, ವೃತ್ತಿಪರ ಸೇವಾ ಅಧ್ಯಕ್ಷ ನರಸಿಂಹಯ್ಯ, ರೋಟರಿಯನ್‌ ಗಳಾದ ವೇಣುಗೋಪಾಲ್‌, ಎಲ್‌.ಪ್ರಭಾಕರ್‌, ಮನು, ದಕ್ಷಿಣಮೂರ್ತಿ, ಗಣೇಶ್‌, ನಾಗೇಶ್‌, ಡಾ, ಮಂಜುನಾಥ್‌, ಆಸ್ಪತ್ರೆಯ ಡಾ. ನಾಗನಾಥ್‌, ಡಾ. ರಾಕೇಶ್‌, ಡಾ.ರಫೀಕ್‌, ಡಾ. ವಿವೇಕಾನಂದ ಡಾ. ಮುದೊಳೆ, ಡಾ. ಚಂದ್ರಲೇಖಾ ಡಾ. ರಶ್ಮಿ,, ಡಾ.ನವೀನ್‌, ನರ್ಸ್‌ ಪದ್ಮಾ, ಗುಣಶೇಖರ್‌ ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿ ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next