ಹಾಸನ: ಜಿಲ್ಲೆಯ ತಾಲೂಕು ಆಸ್ಪತ್ರೆ, ಸಮುದಾಯಆರೋಗ್ಯ ಕೇಂದ್ರ ಹಾಗೂ ಪ್ರಾಥಮಿಕ ಆರೋಗ್ಯಕೇಂದ್ರಗಳಲ್ಲಿ ಖಾಲಿ ಯಿದ್ದ 63 ವೈದ್ಯರ ಹುದ್ದೆಗಳಿಗೆನೇಮಕಾತಿ ಮಾಡಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವಕೆ.ಗೋಪಾಲಯ್ಯ ತಿಳಿಸಿದರು.
ಜಿಲ್ಲಾಧಿಕಾರಿ ಕಚೇರಿಸಭಾಂಗಣದಲ್ಲಿ ಶನಿವಾರ ನಡೆದ ಮುಖ್ಯಮಂತ್ರಿಯವರವಿಡಿಯೋ ಸಂವಾದದ ನಂತರ ಸುದ್ದಿಗೋಷ್ಠಿಯಲ್ಲಿಮಾತನಾಡಿದರು.ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಅವರು 2 ವಾರಗಳಹಿಂದೆ ಜಿಲ್ಲೆಗೆ ಭೇಟಿ ನೀಡಿದ್ದಾಗ ಖಾಲಿ ವೈದ್ಯ ಹುದ್ದೆ ಭರ್ತಿಗಾಗಿ ಹೇಳಿದ್ದರು. ಅದರಂತೆವೈದ್ಯರ ನೇಮಕಾತಿಆದೇಶವನ್ನು ಶುಕ್ರವಾರ ನೀಡಲಾಗಿದೆ.
ಹಾಸನಜಿಲ್ಲೆಯಲ್ಲಿ ಈಗ ಎಲ್ಲಾವೈದ್ಯ ಹುದ್ದೆಗಳೂಭರ್ತಿಯಾಗಿವೆ ಎಂದರು.ಈಗ ಹೊಳೆನರಸೀಪುರ, ಬೇಲೂರು, ಆಲೂರು ತಾಲೂಕು ಆಸ್ಪತ್ರೆಗಳಲ್ಲಿಯೂಆಮ್ಲಜನಕ ಉತ್ಪಾದನಾ ಘಟಕ ಸ್ಥಾಪಿಸಲುತೀರ್ಮಾನಿಸಲಾಗಿದ್ದು, ಕಾಮಗಾರಿ ತಕ್ಷಣದಿಂದಲೇ ಆರಂಭವಾಗಲಿದೆ. ಜಿಲ್ಲೆಯಲ್ಲಿ ಕೊರೊನಾ ಚಿಕಿತ್ಸಾನಿರ್ವಹಣೆಗೆ ಸರ್ಕಾರ ಕಳೆದ ವಾರ 10 ಕೋಟಿ ರೂ.ಬಿಡುಗಡೆಮಾಡಿದೆ. ಅಗತ್ಯವಿದ್ದರೆ ಇನ್ನಷ್ಟು ಅನುದಾನ ಬಿಡುಗಡೆಮಾಡಲೂ ಸರ್ಕಾರ ಸಿದ್ಧವಿದೆ ಎಂದರು. ಲಸಿಕೆ ಈಗಬೇಡಿಕೆಯಷ್ಟು ಪೂರೈಕೆಯಾಗುತ್ತಿಲ್ಲ.
ಆದರೆ, 2ನೇ ಡೋಸ್‌ಪಡೆಯುವವರಿಗೆ ಲಸಿಕೆ ಕೊರತೆ ಆಗಿಲ್ಲ ಎಂದುಸ್ಪಷ್ಟಪಡಿಸಿದರು. ಸಿಎಂ ವಿಡಿಯೋ ಸಂವಾದದಲ್ಲಿಶಾಸಕರಾದ ಎಚ್.ಡಿ.ರೇವಣ್ಣ, ಕೆ.ಎಂ.ಶಿವಲಿಂಗೇಗೌಡ,ಸಿ.ಎನ್.ಬಾಲಕೃಷ್ಣ, ಕೆ.ಎಸ್.ಲಿಂಗೇಶ್, ಪ್ರೀತಂ ಜೆ.ಗೌಡ,ವಿಧಾನ ಪರಿಷತ್ ಸದಸ್ಯ ಎಂ.ಎ.ಗೋಪಾಲಸ್ವಾಮಿ, ಜಿಲ್ಲಾಉಸ್ತುವಾರಿ ಕಾರ್ಯದರ್ಶಿ ನವೀನ್‌ರಾಜ್‌ಸಿಂಗ್,ಜಿಲ್ಲಾಧಿಕಾರಿ ಆರ್.ಗಿರೀಶ್, ಎಸ್ಪಿ ಶ್ರೀನಿವಾಸಗೌಡ, ಜಿಪಂಸಿಇಒ ಪರಮೇಶ್, ಡಿಎಚ್‌ಒ ಡಾ.ಸತೀಶ್ ಕುಮಾರ್,ಅಪರ ಜಿಲ್ಲಾಧಿಕಾರಿ ಕವಿತಾ ರಾಜಾರಾಂ ಮತ್ತಿತರರಿದ್ದರು