Advertisement
ಪಿ.ಎಚ್.ಡಿ.ಯ ನಂತರ ಮುಂದೇನು?ಮೊದಲಿಗೆ ಪಿ.ಎಚ್.ಡಿ ಪದವಿಯು ಜ್ಞಾನ ಮತ್ತು ಕೌಶಲ್ಯದ ಸಂಕೇತ ಎಂಬುದನ್ನು ಅರಿಯಬೇಕು. ನೀವು ಆಯ್ಕೆ ಮಾಡಿಕೊಂಡ ಕ್ಷೇತ್ರದಲ್ಲಿ ಮುಂಬರಲು ಇವೆರಡೂ ನಿಮ್ಮದಾಗಿರಬೇಕು. ವಿಶ್ವದ್ಯಾಲಯಗಳ ಪ್ರೊಫೆಸರ್ ಹುದ್ದೆ, ಇತರ ಬೋಧನಾವೃತ್ತಿಗೆ ಪಿ.ಎಚ್.ಡಿ. ಪದವೀಧರರು ಮೊದಲು ಆದ್ಯತೆ ನೀಡುತ್ತಾರೆ. ಆ ಬಳಿಕ ಕೈಗಾರಿಕೆ ಆರ್ ಅÂಂಡ್ ಡಿ (ಸಂಶೋಧನಾ ಘಟಕ), ಲ್ಯಾಬ್ ಪೊ›ಫೆಷನಲ್ಸ್, ಸ್ಟಾರ್ಟಪ್‌ಗ್ಳಿಗೆ ಮಾರ್ಗದರ್ಶಕರಾಗಿ- ಹೀಗೆ ಹಲವು ಕ್ಷೇತ್ರಗಳಲ್ಲಿಯೂ ಸೇವೆ ಸಲ್ಲಿಸಬಹುದು. ಉದ್ಯಮ ಕ್ಷೇತ್ರದ ಸಂಶೋಧನಾ ಘಟಕಗಳಲ್ಲಿ ಸಂಶೋಧನೆಗೆಂದೇ ಮೀಸಲಾದ ತಂಡಗಳಿರುತ್ತವೆ. ಸಂಶೋಧನೆ, ಹೊಸ ಉತ್ಪನ್ನಗಳ ವಿನ್ಯಾಸ, ಪ್ರಮುಖ ಚರ್ಚೆಗಳಲ್ಲಿ ಪಾಲ್ಗೊಳ್ಳುವಿಕೆ- ಇವುಗಳಿಗೆಲ್ಲ ನುರಿತ ಬುದ್ಧಿಶಕ್ತಿಯುಳ್ಳವರು ಬೇಕು. ಕೈಗಾರಿಕೋದ್ಯಮಕ್ಕೆ ಸಂಬಂಧಿಸಿದ ಸಂಶೋಧನೆ ಮತ್ತು ಅಭಿವೃದ್ಧಿಯ ವಿಭಾಗದ ಹುದ್ದೆಗಳಲ್ಲಿ ಸಂಬಳ ಸವಲತ್ತು ಹೆಚ್ಚಿರುತ್ತದೆ. ಆದರೆ ಅಷ್ಟೇ ಮಟ್ಟದ ಸಮಯ ಮತ್ತು ಶ್ರಮವನ್ನು ಅದು ಬೇಡುತ್ತದೆ. ಸಾಮಾನ್ಯ ಪದವೀಧರ, ಸ್ನಾತಕೋತ್ತರ ಪದವೀಧರರ 5-6 ವರ್ಷದ ಸೇವಾ ಅನುಭವದ ಸಂಬಳಕ್ಕಿಂತ ಹೊಸದಾಗಿ ಪಿಎಚ್.ಡಿ. ಪಡೆದವರ ಸಂಬಳ ಹೆಚ್ಚಿರುತ್ತದೆ. ಈಗ ಹೇಳಿ, ಪಿ.ಎಚ್.ಡಿಯ ಅನುಕೂಲ ದೊಡ್ಡದೇ ಅಲ್ಲವೆ?
ಬೋಧನಾ ಕ್ಷೇತ್ರವನ್ನು ಒಳಗೊಂಡಂತೆ ಪ್ರತಿಷ್ಠಿತ ಸಂಸ್ಥೆಗಳು ಪಿ.ಎಚ್.ಡಿ. ಪದವೀಧರರಿಗೆ ಸಂಬಳ ಸಾರಿಗೆಯ ಜೊತೆಗೆ ನಿವಾಸದ ಸೌಲಭ್ಯವನ್ನೂ ಕಲ್ಪಿಸಿಕೊಡುತ್ತವೆ. ಜೊತೆಗೆ ಪಿ.ಎಚ್.ಡಿ ಪದವೀಧರರಿಗೆ ಹೊರದೇಶಗಳಲ್ಲಿ ಕೆಲಸ ಮಾಡುವ ಅವಕಾಶವೂ ದೊರೆಯುತ್ತದೆ. ಮುಖ್ಯಾಂಶವೆಂದರೆ, ಸಂಸ್ಥೆಗಳು, ಪಿ.ಎಚ್.ಡಿ ಪದವೀಧರರಲ್ಲಿ ತಾರ್ಕಿಕ ವಿಶ್ಲೇಷಣೆ ಮತ್ತು ದತ್ತಾಂಶಗಳ ನಿಖರ ವಿಶ್ಲೇಷಣೆಯ ಸಾಮರ್ಥ್ಯವನ್ನು ನಿರೀಕ್ಷಿಸಲಾಗುತ್ತದೆ. ಪಿ.ಎಚ್.ಡಿ. ಪಡೆದ ತಕ್ಷಣದಲ್ಲಿ ಮಾಡಬೇಕಾದ್ದೇನು?
ಪಿಎಚ್.ಡಿ. ಮುಗಿಸಿದ ಕೂಡಲೇ ನಿಮ್ಮ ಸಾಮರ್ಥ್ಯ ಮತ್ತು ಕ್ಷೇತ್ರಕ್ಕೆ ಪೂರಕವಾದ ಸಂಸ್ಥೆಗಳಲ್ಲಿ ಅರ್ಜಿ ಹಾಕಿ. ಸಾಮಾನ್ಯವಾಗಿ ಡಾಕ್ಟರೇಟ್ ಪದವೀಧರರಿಂದ ಈ ಕೆಳಗಿನ ಪರಿಣತಿ, ಕೌಶಲಗಳನ್ನು ನಿರೀಕ್ಷಿಸಲಾಗುತ್ತದೆ.
Related Articles
2) ದತ್ತಾಂಶ ನಿರ್ವಹಣೆ – ಕ್ಷೇತ್ರಕ್ಕೆ ಸಂಬಂಧ ಪಟ್ಟಂತೆ ಸಂಕೀರ್ಣವಾದ ದತ್ತಾಂಶಗಳನ್ನು, ಕೋಷ್ಠಕಗಳನ್ನು, ಅಂಕಿ-ಅಂಶಗಳನ್ನು ವಿಶ್ಲೇಷಿಸುವ ಸಾಮರ್ಥ್ಯ.
3) ಸಂದರ್ಶನ ನಿರ್ವಹಣೆ – ಸಂಶೋಧನಾ ದೃಷ್ಟಿಕೋನದಿಂದ, ಸಂರಚಿತ, ಸೂಕ್ಷ್ಮಮಟ್ಟದ ಮಾಪನದೊಂದಿಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಸಾಮರ್ಥ್ಯ.
4) ಪ್ರಯೋಗ/ ಪರೀಕ್ಷೆಗಳು – ಸಮಸ್ಯೆಯ ಪರಿಹಾರ ಮತ್ತು ಸಕಾರಾತ್ಮಕ ಧೋರಣೆ. ವರದಿ ಮತ್ತು ಪ್ರಸಂಟೇಷನ್ – ಸಂಕೀರ್ಣವಾದ ವರದಿಗಳನ್ನು ಸಾರಸಂಗ್ರಹವಾಗಿ, ಪರಿಣಾಮಕಾರಿಯಾಗಿ ಮಂಡಿಸಬಲ್ಲ ಸಾಮರ್ಥ್ಯ. ಅರ್ಥಾತ್ ಅತ್ಯುತ್ತಮ ಸಂವಹನಾ ಕೌಶಲ್ಯ.
5) ಸಕಾಲದಲ್ಲಿ ಮುಗಿಸಿದ ಪಿಎಚ್.ಡಿ. – ನಿರ್ದಿಷ್ಟ ಯೋಜನೆಗಳನ್ನು ಕ್ಲುಪ್ತ ಸಮಯದಲ್ಲಿ ಮುಗಿಸುವ ಸಾಮರ್ಥ್ಯ.
6) ಸಂಶೋಧನಾ ಕಮ್ಮಟಗಳ ನಿರ್ವಹಣೆ – ಯೋಜನೆ ಮತ್ತು ನಾಯಕತ್ವದ ಸಾಮರ್ಥ್ಯ.
ಜೊತೆಗೆ… ಪಿ.ಎಚ್.ಡಿ ಪದವೀಧರನೊಬ್ಬ ಶಿಕ್ಷಣ ಕ್ಷೇತ್ರದಲ್ಲಿ ಕೆಲಸ ನಿರ್ವಹಿಸಿ ಉದ್ಯಮದ ಕಡೆಗೆ ಉದ್ಯೋಗ ಅರಸಿ ಹೊರಟಿದ್ದರೆ ಆ ಹೊಸ ಪರಿಸರ, ಸಂಬಳ, ಜವಾಬ್ದಾರಿಗಳಿಗೆ ಹೊಂದಿಕೊಳ್ಳಲು ಸಿದ್ಧರಾಗಿರಬೇಕು.
Advertisement
– ರಘು ವಿ.