Advertisement

Eye Surgeries: ವೈದ್ಯಕೀಯ ಪದವಿ ಪೂರ್ಣಗೊಳಿಸದೇ 44 ಕಣ್ಣಿನ ಶಸ್ತ್ರಚಿಕಿತ್ಸೆ ನಡೆಸಿದ ವೈದ್ಯ

03:44 PM Nov 23, 2024 | Team Udayavani |

ಹರ್ಯಾಣ: ವೈದ್ಯಕೀಯ ಪದವಿಯನ್ನು ಪೂರ್ಣಗೊಳಿಸದೆಯೇ ವೈದ್ಯನೊಬ್ಬ 44 ನೇತ್ರ ಶಸ್ತ್ರಚಿಕಿತ್ಸೆಗಳನ್ನು ಮಾಡಿರುವ ಆಘಾತಕಾರಿ ಘಟನೆಯೊಂದು ಹಿಸಾರ್ ಸಿವಿಲ್ ಆಸ್ಪತ್ರೆಯಲ್ಲಿ ಬೆಳಕಿಗೆ ಬಂದಿದೆ.

Advertisement

ಡಾ ವಿಜಯ್ ಎಂದು ಗುರುತಿಸಲಾದ ವ್ಯಕ್ತಿಯನ್ನು ಅರೋಗ್ಯ ಇಲಾಖೆ ನೇತ್ರ ಶಸ್ತ್ರಚಿಕಿತ್ಸಕರಾಗಿ ನೇಮಿಸಿತ್ತು, ಆದರೆ ವಿಜಯ್ ಇನ್ನೂ ಅಗತ್ಯವಾದ ಪರೀಕ್ಷೆಗಳಲ್ಲಿ ಉತ್ತೀರ್ಣರಾಗದ ಕಾರಣ ಅವರ ಸ್ನಾತಕೋತ್ತರ ಕೋರ್ಸ್ ಅಪೂರ್ಣವಾಗಿತ್ತು ಈ ವಿಚಾರ ಗೊತ್ತಾಗುತ್ತಿದ್ದಂತೆ ಅಧಿಕಾರಿಗಳು ಶಸ್ತ್ರಚಿಕಿತ್ಸೆ ನಡೆಸದಂತೆ ಹೇಳಿದೆ.  ಆದರೆ ಅಧಿಕಾರಿಗಳು ತಡೆ ತರುವ ಮೊದಲೇ ವಿಜಯ್ 44 ಮಂದಿಗೆ ಕಣ್ಣಿನ ಶಸ್ತ್ರಚಿಕಿತ್ಸೆ ನಡೆಸಿದ್ದ ಎಂಬುದು ಬೆಳಕಿಗೆ ಬಂದಿದೆ.

ಹಿಸಾರ್ ಸಿವಿಲ್ ಆಸ್ಪತ್ರೆ ಕಣ್ಣಿನ ಶಸ್ತ್ರಚಿಕಿತ್ಸೆಗೆ ಹೆಸರುವಾಸಿಯಾಗಿದೆ ಈ ಆಸ್ಪತ್ರೆಯಲ್ಲಿ ವಾರ್ಷಿಕವಾಗಿ 1,000 ಕ್ಕೂ ಹೆಚ್ಚು ಶಸ್ತ್ರಚಿಕಿತ್ಸೆಗಳು ನಡೆಯುತ್ತವೆ ಎನ್ನಲಾಗಿದೆ. ಆದರೆ ವೈದ್ಯರ ಕೊರತೆ ಎದುರಿಸುತ್ತಿರುವ ಆಸ್ಪತ್ರೆಯಲ್ಲಿ ಕಳೆದ 11 ತಿಂಗಳಲ್ಲಿ ಕೇವಲ 71 ಶಸ್ತ್ರಚಿಕಿತ್ಸೆಗಳು ಮಾತ್ರ ನಡೆದಿವೆ ಎನ್ನಲಾಗಿದೆ. ಸತತ ನಾಲ್ಕು ತಿಂಗಳುಗಳ ಕಾಲ ಕಣ್ಣಿನ ಶಸ್ತ್ರ ಚಿಕಿತ್ಸೆ ನಡೆಸದೇ ಇದ್ದಾಗ ಈ ವಿಷಯ ಸಾರ್ವಜನಿಕರ ಗಮನಕ್ಕೆ ಬಂದಿದೆ.

ಮೂಲಗಳ ಪ್ರಕಾರ, ಆರೋಗ್ಯ ಇಲಾಖೆಯು ಡಾ.ವಿಜಯ್ ಅವರ ಅಪೂರ್ಣ ವಿದ್ಯಾರ್ಹತೆಯ ಹೊರತಾಗಿಯೂ ನೇತ್ರ ಶಸ್ತ್ರಚಿಕಿತ್ಸಕರನ್ನಾಗಿ ನೇಮಿಸಿದೆ. ಈ ವಿಚಾರ ಗೊತ್ತಾಗುತ್ತಿದ್ದಂತೆ ಅಂಧತ್ವ ನಿಯಂತ್ರಣದ ರಾಷ್ಟ್ರೀಯ ಕಾರ್ಯಕ್ರಮದ (NPCB) ಉಪ ನಿರ್ದೇಶಕರು ಮಧ್ಯಪ್ರವೇಶಿಸಿ ಶಸ್ತ್ರಚಿಕಿತ್ಸೆ ನಡೆಸದಂತೆ ಆದೇಶ ನೀಡಿದ್ದಾರೆ.

ಹಗರಣ ಬಯಲಾಗಿದ್ದು ಹೇಗೆ:
ಹಿಸಾರ್ ಸಿವಿಲ್ ಆಸ್ಪತ್ರೆಯಲ್ಲಿ ನೇತ್ರ ವಿಭಾಗವು ಅರ್ಹ ಶಸ್ತ್ರಚಿಕಿತ್ಸಕರ ಕೊರತೆಯನ್ನು ಎದುರಿಸುತ್ತಿದೆ. ಒಂದು ಹಂತದಲ್ಲಿ ಮೂವರು ಶಸ್ತ್ರಚಿಕಿತ್ಸಕರನ್ನು ಹೊಂದಿದ್ದ ಆಸ್ಪತ್ರೆ ಬಳಿಕ ಮೂವರು ರಾಜೀನಾಮೆ ನೀಡಿ ಖಾಸಗಿ ಆಸ್ಪತ್ರೆಗಳಿಗೆ ಸೇರಿಕೊಂಡಿದ್ದಾರೆ, ಇತ್ತ ಶಸ್ತ್ರಚಿಕಿತ್ಸಕರ ಕೊರತೆಯನ್ನು ತುಂಬುವ ಧಾವಂತದಲ್ಲಿ, ಇಲಾಖೆಯು ಇನ್ನೂ ಸ್ನಾತಕೋತ್ತರ ಅಧ್ಯಯನ ಮಾಡುತ್ತಿರುವ ಡಾ ವಿಜಯ್ ಅವರನ್ನು ಹಂಸಿ ಸಿವಿಲ್ ಆಸ್ಪತ್ರೆಯ ಅನುಭವಿ ನೇತ್ರ ಶಸ್ತ್ರಚಿಕಿತ್ಸಕ ಡಾ ಜ್ಯೋತಿ ಅವರ ಮೇಲ್ವಿಚಾರಣೆಯಲ್ಲಿ ಶಸ್ತ್ರಚಿಕಿತ್ಸೆ ಮಾಡಲು ನಿಯೋಜಿಸಿತು. ಏಪ್ರಿಲ್ ಮತ್ತು ಜುಲೈ ನಡುವೆ, ಡಾ. ಜ್ಯೋತಿ 27 ಶಸ್ತ್ರಚಿಕಿತ್ಸೆಗಳನ್ನು ನಡೆಸಿದರೆ, ಡಾ. ವಿಜಯ್ 44 ಶಸ್ತ್ರಚಿಕಿತ್ಸೆಗಳನ್ನು ನಡೆಸಿದರು. ಇದಾದ ಬಳಿಕ ಡಾ. ಜ್ಯೋತಿ ಬಡ್ತಿಗೊಂಡು ಬೇರೆಡೆಗೆ ವರ್ಗಾವಣೆಯಾದಾಗ ಡಾ. ವಿಜಯ್ ಅವರನ್ನು ಉಸ್ತುವಾರಿ ವಹಿಸಲಾಯಿತು. ಇದಾದ ಬಳಿಕ (NPCB) ಅಧಿಕಾರಿಗಳು ಡಾ.ವಿಜಯ್ ಅವರ ವಿದ್ಯಾರ್ಹತೆಯ ಪ್ರಮಾಣ ಪತ್ರ ಪರಿಶೀಲನೆ ನಡೆಸಿದ ವೇಳೆ ಸತ್ಯಂಶ ಹೊರಬಿದ್ದಿದೆ.

Advertisement

ಆರೋಗ್ಯ ಇಲಾಖೆಯ ಪ್ರತಿಕ್ರಿಯೆ
ವಿಜಯ್ ಅವರ ಪರೀಕ್ಷೆಗಳು ಇನ್ನೂ ಬಾಕಿ ಉಳಿದಿರುವುದರಿಂದ ಅದನ್ನು ಪೂರ್ಣ ಗೊಳಿಸಿ ಕರ್ತವ್ಯಕ್ಕೆ ಹಾಜರಾಗಲಿದ್ದಾರೆ ಎಂದು ಹಿಸಾರ್‌ನ ಮುಖ್ಯ ವೈದ್ಯಕೀಯ ಅಧಿಕಾರಿ ಡಾ ಸಪ್ನಾ ಗೆಹ್ಲಾವತ್ ಖಚಿತಪಡಿಸಿದ್ದಾರೆ. ಕಣ್ಣಿನ ವಿಭಾಗದಲ್ಲಿ ಹೊರರೋಗಿ ಸೇವೆಗಳನ್ನು ನಿರ್ವಹಿಸಲು ಅಗ್ರೋಹ ವೈದ್ಯಕೀಯ ಕಾಲೇಜಿನ ವೈದ್ಯರನ್ನು ನಿಯೋಜಿಸಲಾಗಿದೆ. ವಿಜಯ್ ಅವರು ತಮ್ಮ ಪರೀಕ್ಷೆಗಳನ್ನು ಪೂರ್ಣಗೊಳಿಸಿದ ನಂತರ, ಅವರು ಅಗತ್ಯ ರಾಜ್ಯ ಅನುಮೋದನೆಯೊಂದಿಗೆ ಶಸ್ತ್ರಚಿಕಿತ್ಸೆಗಳನ್ನು ಮಾಡಲು ಅರ್ಹರಾಗಿರುತ್ತಾರೆ ಎಂದು ಡಾ ಗೆಹ್ಲಾವತ್ ಭರವಸೆ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next