Advertisement

Doctor! ; ವಾದ ವಿವಾದ ನಡೆದು ನರ್ಸ್ ಮೇಲೆ ಗುಂಡು ಹಾರಿಸಿದ ವೈದ್ಯ

09:43 PM Feb 07, 2024 | Team Udayavani |

ಜಬಲ್‌ಪುರ : ಮತ್ತೊಬ್ಬ ವ್ಯಕ್ತಿಯೊಂದಿಗೆ ಸಂಬಂಧ ಹೊಂದಿರುವ ಬಗ್ಗೆ ಅನುಮಾನಗೊಂಡ ಬಳಿಕ ವಾದ ವಿವಾದ ನಡೆದು ವೈದ್ಯನೊಬ್ಬ ನರ್ಸ್ ಮೇಲೆ ಎರಡು ಸುತ್ತು ಗುಂಡು ಹಾರಿಸಿದ ಘಟನೆ ಮಧ್ಯಪ್ರದೇಶದ ಜಬಲ್‌ಪುರದಲ್ಲಿ ಬುಧವಾರ ನಡೆದಿದೆ.

Advertisement

ಆರೋಪಿಯನ್ನು ಡಾ ಸಂದೀಪ್ ಸೋನಿ (34) ಎಂದು ಗುರುತಿಸಲಾಗಿದೆ ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಪ್ರಿಯಾಂಕಾ ಶುಕ್ಲಾ ತಿಳಿಸಿದ್ದಾರೆ.

27 ವರ್ಷದ ನರ್ಸ್ ವೈದ್ಯನೊಂದಿಗೆ ಸಂಬಂಧ ಹೊಂದಿದ್ದು,  ತನ್ನ ಹಳೆಯ ಸ್ನೇಹಿತ ಇನ್ನೊಬ್ಬ ವ್ಯಕ್ತಿಯೊಂದಿಗೂ ನಿಕಟ ಸಂಬಂಧ ಹೊಂದಿದ್ದಳು. ಈ ವಿಚಾರ ತಿಳಿದು ಕೋಪದ ಭರದಲ್ಲಿ ಗುಂಡುಗಳನ್ನು ಹಾರಿಸಿದ್ದಕ್ಕಾಗಿ ವೈದ್ಯನನ್ನು ಬಂಧಿಸಲಾಗಿದೆ. ನರ್ಸ್ ಪಕ್ಕೆಲುಬುಗಳಿಗೆ ಗಾಯಗಳಾಗಿದ್ದು, ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.ಪೊಲೀಸರು ವೈದ್ಯನ ವಿರುದ್ಧ ಕೊಲೆ ಯತ್ನ ಮತ್ತು ಶಸ್ತ್ರಾಸ್ತ್ರ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next