Advertisement
ಒಬ್ಬ ಮನುಷ್ಯ ಮತ್ತೂಬ್ಬ ಮನು ಷ್ಯನ ಮೇಲೆ ಪ್ರೀತಿ ಹರಿಸಿದರೆ, ಅಲ್ಲೊಂದು ಮಾನವೀಯ ದೀಪ ಬೆಳಗುತ್ತದಂತೆ. ಜೀವ ಇರುವಾಗ ರಕ್ತದಾನ. ಜೀವ ಹೋಗುವಾಗ ಅಂಗಾಂಗ ದಾನ. ಜೀವ ಹೋದಾಗ ದೇಹದಾನಗಳೂ ಅಂಥ ಉಪಕಾರದ ನಾನಾ ಪಾತ್ರಗಳು. ಒಂದಲ್ಲಾ ಒಂದು ದಿನ ಮನುಷ್ಯ, ಈ ಭೂಮಿಯಿಂದ ಹೊರಡಬೇಕು. ಹಾಗೆ ಸತ್ತ ಮೇಲೆ ದೇಹ, ಮಣ್ಣು ಸೇರಿದರೆ, ಬಂತೇನು ಪ್ರಯೋ ಜ ನ?- ಹೀಗೆ ಯೋಚಿಸಿದವರೆಲ್ಲರೂ ದೇಹದಾನದ ಭಕ್ತರು! ಹಿಂದೆ ದೇಹದಾನವೆಂದರೆ, ಜನರಿಗೇನೋ ಅಳುಕು, ಧಾರ್ಮಿಕ ಕಟ್ಟಳೆಯ ಭಯ, ಮೋಕ್ಷ ಸಿಗದ ಕಲ್ಪನೆ. ದೇಹದಾನದ ಬಗ್ಗೆ ಯೋಚಿಸುವುದೇ ತಪ್ಪೆ ನ್ನುವಂಥ ಕಾಲ ಅದು.
Related Articles
Advertisement
ತಂದೆಯ ಶವ ಚ್ಛೇದಿಸಿದ ಮೇಲೆ…ಶವ ಎಂದರೆ ಬೆಚ್ಚಿ ಬೀಳುವವರೇ ಹೆಚ್ಚು. ಅಂಥದ್ದರಲ್ಲಿ ವೈದ್ಯ ಲೋಕದ ಇತಿಹಾಸದಲ್ಲೇ ಮೊಟ್ಟ ಮೊದಲ ಬಾರಿಗೆ, ಸ್ವತಃ ತಂದೆಯ ಶವವನ್ನೇ ಛೇದಿಸಿ ವೈದ್ಯ ವಿದ್ಯಾರ್ಥಿಗಳಿಗೆ ಪಾಠ ಮಾಡಿದ ವೈದ್ಯ ಮಹಾಂತೇಶ ರಾಮಣ್ಣವರ ಈ ಪ್ರತಿಷ್ಠಾನದ ರೂವಾರಿ. ಕೆ.ಎಲ್.ಇ. ವಿಶ್ವವಿದ್ಯಾಲಯದ ಬಿ.ಎಂ.ಕೆ. ಆಯುರ್ವೇದ ಮೆಡಿಕಲ್ ಕಾಲೇಜಿನ ಶರೀರ ರಚನಾ ವಿಭಾಗದ ಮುಖ್ಯಸ್ಥ ಇವರು. ಇವರ ಸಾಹ ಸ, ಉತ್ತರ ಕರ್ನಾಟಕ ಭಾಗ ದ ಲ್ಲಿ ದೇಹದಾನದ ಬಗ್ಗೆ ಹೊಸ ವ್ಯಾಖ್ಯಾನ ಬರೆದಿರುವುದಂತೂ ಸುಳ್ಳಲ್ಲ. 2000 ದಾಟಿದ ದೇಹದಾನ ವಾಗ್ಧಾನ
ದೇಹದಾನಕ್ಕೆ ಬೆಳಗಾವಿ ಜಿಲ್ಲೆಯಲ್ಲಿ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿದೆ. ದೇಹದಾನಿಗಳ ಸಂಖ್ಯೆ 2000 ದಾಟಿದೆ. ಕೆ.ಎಲ್.ಇ. ವಿಶ್ವವಿದ್ಯಾಲಯದ ಜೆ.ಎನ್.ಎಂ.ಸಿ.ಯ ಅಂಗ ರಚನೆ ವಿಭಾಗದಲ್ಲಿ 1300ಕ್ಕೂ ಹೆಚ್ಚು ಜನ ದೇಹದಾನಕ್ಕೆ ಉಯಿಲು ಬರೆದುಕೊಟ್ಟಿದ್ದಾರೆ. ಕೆ.ಎಲ್.ಇ. ಸಂಸ್ಥೆಯ ಕಂಕಣವಾಡಿ ಆಯುರ್ವೇದ ಮಹಾವಿದ್ಯಾಲಯದಲ್ಲಿ 266, ಸರಕಾರಿ ವೈದ್ಯಕೀಯ ಸಂಸ್ಥೆಯಲ್ಲಿ (ಬಿಮ್ಸ್) 200ಕ್ಕೂ ಹೆಚ್ಚು ಜನ, ಒಟ್ಟಾ ರೆ 1000ಕ್ಕೂ ಹೆಚ್ಚು ಜನರು ದೇಹದಾನಕ್ಕೆ ನೋಂದಣಿ ಮಾಡಿರುವುದು ವಿಶೇಷ. ರಾಮಣ್ಣವರ ಟ್ರಸ್ಟ್‌ನಿಂದ 1000 ಜನ ದೇಹದಾನಕ್ಕೆ ಅಸ್ತು ಎಂದಿ ದ್ದಾ ರೆ. ಅದರಲ್ಲಿ ಈಗಾಗಲೇ 200 ದೇಹಗಳು, ಅವರ ಕುಟುಂಬಸ್ಥರ ಒಪ್ಪಿಗೆಯ ಮೇರೆಗೆ ಹಸ್ತಾಂತರವಾಗಿ, ವಿವಿಧ ವೈದ್ಯಕೀಯ ಕಾಲೇಜುಗಳ ಅಧ್ಯಯನಕ್ಕೆ ನೆರವಾಗಿವೆ. “ಇದುವರೆಗೆ ಸ್ವೀಕರಿಸಲಾದ ದೇಹಗಳನ್ನು ಬೆಂಗಳೂರು, ಹುಬ್ಬಳ್ಳಿ. ಬಳ್ಳಾರಿ, ಹೊಸಪೇಟೆ, ಕೊಪ್ಪಳ, ತೇರದಾಳ, ಬದಾಮಿ, ಹಾರೂಗೇರಿ, ಸಿದ್ದಾ ಪುರ ಹಾಗೂ ಚೆನ್ನೈನ ವೈದ್ಯಕೀಯ ವಿದ್ಯಾರ್ಥಿಗಳ ಅಧ್ಯಯನಕ್ಕೆ ಕಳಿಸಲಾಗಿದೆ’ ಎನ್ನುತ್ತಾರೆ ಡಾ. ಮಹಾಂತೇಶ ರಾಮಣ್ಣವರ. ದೇಹದಾನದಲ್ಲಿ ಆಸಕ್ತಿ ಇದ್ದವರು ತಮ್ಮನ್ನು ಮೊ. ಸಂಖ್ಯೆ: 9242496497 ಇದಕ್ಕೆ ಸಂಪರ್ಕಿಸಬಹುದು ಎಂಬುದು ಅವರ ಕಳಕಳಿಯ ಮನವಿ. ದೇಹದಾನಿಗಳ ಗ್ರಾಮ, ಶೇಗುಣಸಿ!
ಮಾನವೀಯ ಮೌಲ್ಯಗಳ ಸಾಕಾರಕ್ಕಾಗಿ ಮಿಡಿಯುವ ಒಂದು ಸಂಘಟನೆ, ಅಥಣಿ ತಾಲೂಕಿನ ಶೇಗುಣಸಿಯ ರಾಷ್ಟ್ರೀಯ ಬಸವ ದಳ. ಡಾ. ರಾಮಣ್ಣವರ ಪ್ರತಿಷ್ಠಾನದ ಕಾರ್ಯದಿಂದ ಪ್ರೇರಣೆಗೊಂಡು ಗ್ರಾಮಸ್ಥರಲ್ಲಿ ನೇತ್ರದಾನ ಹಾಗೂ ದೇಹದಾನಕ್ಕೆ ಮುಂದಾಗುವಂತೆ ತಿಳುವಳಿಕೆ ಮೂಡಿಸುತ್ತಿದೆ. ಇದರ ಪರಿಣಾಮವಾಗಿ 5000 ಜನಸಂಖ್ಯೆಯುಳ್ಳ ಗ್ರಾಮದಲ್ಲಿ ಈಗ 130 ಜನರು ನೇತ್ರ ಹಾಗೂ ದೇಹದಾನ ಮಾಡುವ ವಾಗ್ಧಾನ ಮಾಡಿದ್ದಾರೆ. ಈ ಮೂಲಕ ಶೇಗುಣಸಿ ದೇಹದಾನಿಗಳ ಗ್ರಾಮ ಎಂಬ ಹೆಸರು ಮಾಡಿದೆ. ಒಂದು ಗ್ರಾಮದಲ್ಲಿ ಇಷ್ಟೊಂದು ಸಂಖ್ಯೆಯಲ್ಲಿ ದೇಹದಾನ ಮಾಡಲು ವಾಗ್ಧಾನ ಮಾಡಿದ್ದು, ದೇಶ ದ ಇತಿಹಾಸದಲ್ಲಿ ಇದೇ ಮೊದಲು. ಮುಖ್ಯವಾಗಿ, ವಿವಿಧ ಮಠಾಧೀಶರು ದೇಹದಾನಕ್ಕೆ ಮುಂದೆ ಬಂದಿದ್ದು, ದೇಹದಾನದ ಜಾಗೃತಿ ಕಾರ್ಯಕ್ರಮಕ್ಕೆ ಹೊಸ ಪ್ರೇರಣೆ ನೀಡಿದೆ. ಬೆಳಗಾವಿಯ ಕಾರಂಜಿಮಠದ ಗುರುಸಿದ್ಧ ಸ್ವಾಮಿಗಳು, ಬಸವರಾಜ ಪಟ ದ್ದೇವರು ದೇಹದಾನ ಮಾಡಲು ಒಪ್ಪಿಗೆ ಪತ್ರ ನೀಡಿದ್ದಾರೆ. ದೇಹದಾನದ ಸಂದೇಶ
ಡಾ. ರಾಮಣ್ಣವರ ಫೌಂಡೇಶನ್, ಆರೋಗ್ಯ ಶಿಬಿರ, ದೇಹ ಮತ್ತು ದೇಹದ ಇತರ ಅಂಗಾಂಗಗಳ ದಾನದ ಕುರಿತು ಅರಿವು ಮೂಡಿಸುವ ಕಾರ್ಯಗಳ ಲ್ಲದೇ, ಎಲ್ಲ ಧರ್ಮಗಳ ಪ್ರಮುಖರು ಹಾಗೂ ಮಠಾಧೀಶರನ್ನು ಭೇಟಿ ಯಾ ಗಿ, ಜನರಲ್ಲಿರುವ ಮೂ ಢನಂಬಿಕೆ ತೊಲಗಿಸಲು ಪ್ರಯತ್ನಿಸುತ್ತಿದ್ದಾರೆ. ಮಠಾಧೀಶರ ಪ್ರವಚನದಲ್ಲೂ ದೇಹದಾನದ ಕುರಿತು ಸಂದೇಶಗಳು ಬಿತ್ತರಗೊಳ್ಳುತ್ತಿರುವುದು ಇನ್ನೊಂದು ವಿಶೇಷ. ದೇಹ ದಾ ನಕ್ಕೆ ಕರು ನಾಡಿನ ಉದ್ದ ಗಲ ಜನರ ಸ್ಪಂದನೆ ನನಗೆ ಬೆರಗು ಮೂಡಿ ಸಿತು. ಅದ ರ ಲ್ಲೂ ಬೆಳಗಾವಿ ಜಿಲ್ಲೆಯಲ್ಲಿ ನಿರೀಕ್ಷೆಗಿಂತ ಹೆಚ್ಚು ಸ್ಪಂದನೆ ಸಿಗುತ್ತಿದೆ. ಧಾರ್ಮಿಕ ಕಟ್ಟಳೆ, ಕೆಲವರನ್ನು ದೇಹದಾನ ಮಾಡದಂತೆ ಕಟ್ಟಿಹಾಕುತ್ತಿದೆ. ಧರ್ಮ ಬಿಟ್ಟು ದೇಹದಾನ ಇಲ್ಲ. ಈ ಬಗ್ಗೆ ಅರಿವು ಮೂಡಿಸುವ ಕೆಲಸ ಈಗ ನಡೆದಿದೆ.
– ಡಾ. ಮಹಾಂತೇಶ ರಾಮಣ್ಣ ದೇಹದಾನದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿರುವುದರಿಂದ ಈಗ ದೊಡ್ಡ ದೊಡ್ಡ ಆಸ್ಪತ್ರೆಗಳು ಹಾಗೂ ವೈದ್ಯಕೀಯ ಮಹಾವಿದ್ಯಾಲಯಗಳು, ಶವ ಗಳ ಕಾಯುವಿಕೆಯಿಂದ ಹೊರಬಂದಿವೆ. ದೇಹದಾನವು ವೈದ್ಯ ಕೀಯ ಸಂಶೋಧನೆಗಳಿಗೆ ಪ್ರೇರಣೆ ನೀಡುತ್ತದೆ.
– ಡಾ.ಎಸ್.ಟಿ. ಕಳಸದ, ಬಿಮ್ಸ್ ನಿರ್ದೇಶಕ ದೇಹವು ಮಣ್ಣಲ್ಲಿ ಸೇರುವ ಬದಲು ಇನ್ನೊಬ್ಬರಿಗೆ ಸಹಾಯವಾಗಲಿ ಎಂಬ ಉದ್ದೇಶದಿಂದ, ದೇಹದಾನ ಮಾಡುವ ವಾಗ್ಧಾನ ಮಾಡಿದ್ದೇವೆ.
– ಮಹಾಂತೇಶ ಸಿದ್ನಾಳ, ರಾಷ್ಟಿÅàಯ ಬಸವದಳ ಸದಸ್ಯ ಕೇಶವ ಆದಿ