Advertisement

ಸಾಗರ: ಗಣಪತಿ ಕೆರೆಗೆ ಹಾರಿ ವೈದ್ಯೆ ಆತ್ಮಹತ್ಯೆ

03:15 PM Mar 29, 2022 | Team Udayavani |

ಸಾಗರ: ಇಲ್ಲಿನ ತಾಲ್ಲೂಕು ಆರೋಗ್ಯಾಧಿಕಾರಿಗಳ ಕಚೇರಿ ಬಾಲ ಸ್ವಾಸ್ಥ್ಯ ಯೋಜನೆಯಡಿ ಕರ್ತವ್ಯ ನಿರ್ವಹಿಸುತ್ತಿದ್ದ ವೈದ್ಯೆಯೊಬ್ಬರು ಗಣಪತಿ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಸೋಮವಾರ ತಡರಾತ್ರಿ ನಡೆದಿದೆ.

Advertisement

ಡಾ. ಶರ್ಮದಾ (36) ಮೃತ ವೈದ್ಯೆ.

ಸೋಮವಾರ ರಾತ್ರಿ ಮನೆಯಿಂದ ತಮ್ಮ ಸ್ಕೂಟಿಯಲ್ಲಿ ಗಣಪತಿ ಕೆರೆ ಹತ್ತಿರ ಬಂದು ಬೈಕನ್ನು ಒಂದು ಬದಿ ನಿಲ್ಲಿಸಿ, ಚಪ್ಪಲಿಯನ್ನು ದಂಡೆಯ ಮೇಲೆ ಬಿಚ್ಚಿಟ್ಟು ನೀರಿಗೆ ಹಾರಿದ್ದಾರೆ.

ರಸ್ತೆಯಲ್ಲಿ ಹೋಗುತ್ತಿದ್ದವರು ಶರ್ಮದಾ ನೀರಿಗೆ ಬಿದ್ದಿದ್ದನ್ನು ಗಮನಿಸಿ ಮೇಲಕ್ಕೆತ್ತಿದ್ದಾರೆ. ಈ ವೇಳೇ ಆಕೆ ಉಸಿರಾಡುತ್ತಿದ್ದರು. ತಕ್ಷಣ ಕಾರಿನಲ್ಲಿ ಉಪವಿಭಾಗೀಯ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಫಲಕಾರಿಯಾಗದೆ ಶರ್ಮದಾ ಮೃತಪಟ್ಟಿದ್ದಾರೆ.

ಮೃತ ಶರ್ಮದಾ ಅವರ ಪತಿ ಸುನೀಲ್ ಭೀಮನಕೋಣೆ ಗ್ರಾಮ ಪಂಚಾಯತ್‍ನಲ್ಲಿ ಕಾರ್ಯದರ್ಶಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.  ದಂಪತಿಗಳಿಗೆ ಇಬ್ಬರು ಗಂಡು ಮಕ್ಕಳಿದ್ದಾರೆ.

Advertisement

ಇದನ್ನೂ ಓದಿ:ಆಂಧ್ರಕ್ಕೆ ಅಕ್ರಮ ಮದ್ಯ ಸಾಗಾಟ-ಐವರ ಬಂಧನ

ಆರ್ಯುವೇದಿಕ್ ತಜ್ಞರಾಗಿದ್ದ ಡಾ. ಶರ್ಮದಾ ಕೋವಿಡ್ ಸಂದರ್ಭದಲ್ಲಿ ಅತ್ಯುತ್ತಮವಾಗಿ ಕಾರ್ಯನಿರ್ವಹಣೆ ಮಾಡಿ, ಸನ್ಮಾನಕ್ಕೆ ಸಹ ಭಾಜನರಾಗಿದ್ದರು. ಕೋವಿಡ್ ಲಸಿಕೆ ನೀಡುವ ಸಂದರ್ಭದಲ್ಲಿ ಸಹ ಇವರು ಹಗಲಿರುಳು ಶ್ರಮಿಸಿದ್ದರು.

ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ. ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆತ್ಮಹತ್ಯೆ ಪ್ರಕರಣದ ತನಿಖೆ ನಡೆಸುವಂತೆ ಮಾನವಹಕ್ಕು ಹೋರಾಟ ಸಮಿತಿ ಅಧ್ಯಕ್ಷ ಶಶಿಕಾಂತ್ ಎಂ.ಎಸ್. ನೇತೃತ್ವದಲ್ಲಿ ನಗರ ಠಾಣೆಗೆ ಮನವಿ ಸಲ್ಲಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next