ಮುಜಫರನಗರ : ಮಹಿಳೆಯೊಬ್ಬರ ರಕ್ತದ ಮಾದರಿಯನ್ನು ಸಂಗ್ರಹಸುತ್ತಿದ್ದ ವೇಳೆ ಆಕೆಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದರೆಂಬ ವೈದ್ಯರೊಬ್ಬರ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಈ ಘಟನೆ ಉತ್ತರ ಪ್ರದೇಶದ ಶಾಮ್ಲಿ ಜಿಲ್ಲೆಯ ಝಿಂಝಾನಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
24ರ ಹರೆಯದ ಮಹಿಳೆಯು ಆರೋಪಿ ವೈದ್ಯ ಜಸ್‌ವೀರ್ ಎಂಬವರಲ್ಲಿ ರಕ್ತದ ಸ್ಯಾಂಪಲ್ ನೀಡಲು ಹೋಗಿದ್ದರು. ಆಗ ಆರೋಪಿಯು ಆಕೆಯ ಮೇಲೆರಗಿ ಅತ್ಯಾಚಾರಕ್ಕೆ ಯತ್ನಿಸಿದ್ದ ಎಂದು ಪೊಲೀಸರು ಹೇಳಿದ್ದಾರೆ.
ಆರೋಪಿ ವೈದ್ಯನು ತನ್ನ ಮೇಲೆ ಎರಗಿದೊಡನೆಯೇ ಮಹಿಳೆ ಬೊಬ್ಬಿಟ್ಟಳು. ಆಗ ಆರೋಪಿ ವದ್ಯ ಅಲ್ಲಿಂದ ಪರಾರಿಯಾದ ಎಂದು ಪೊಲೀಸರು ಹೇಳಿದ್ದಾರೆ. ಪೊಲೀಸರೀಗ ಪರಾರಿಯಾಗಿರುವ ಆರೋಪಿ ವೈದ್ಯನಿಗಾಗಿ ಹುಡುಕಾಡುತ್ತಿದ್ದಾರೆ.