ನವದೆಹಲಿ: ದೆಹಲಿಯ ವಾಯುಗುಣಮಟ್ಟ ಕಲುಷಿತಗೊಳ್ಳುವುದಕ್ಕೂ, ಪಾಕಿಸ್ತಾನಕ್ಕೂ ಏನು ಸಂಬಂಧ? ಒಂದು ವೇಳೆ ಪಾಕಿಸ್ತಾನದಲ್ಲಿರುವ ಕೈಗಾರಿಕೆಗಳ ಮೇಲೆ ಕೋರ್ಟ್ ನಿಷೇಧ ಹೇರಬೇಕೆಂದು ಉತ್ತರಪ್ರದೇಶ ಸರ್ಕಾರ ಬಯಸುತ್ತಿದೆಯೇ ಎಂದು ಸುಪ್ರೀಂಕೋರ್ಟ್ ಶುಕ್ರವಾರ (ಡಿಸೆಂಬರ್ 03) ತರಾಟೆಗೆ ತೆಗೆದುಕೊಂಡಿದೆ.
ಇದನ್ನೂ ಓದಿ:7ನೇ ತರಗತಿವರೆಗಿನ ಮಕ್ಕಳಿಗೆ ಆನ್ ಲೈನ್ ಪಾಠ ಮಾಡಿ: ಎಚ್.ವಿಶ್ವನಾಥ್
ದೆಹಲಿಯ ವಾಯುಗುಣಮಟ್ಟ ಕಲುಷಿತಗೊಂಡ ವಿಷಯಕ್ಕೆ ಸಂಬಂಧಿಸಿದಂತೆ ಉತ್ತರಪ್ರದೇಶ ಸರ್ಕಾರದ ಪರವಾಗಿ ಹಾಜರಾಗಿದ್ದ ಹಿರಿಯ ವಕೀಲ ರಂಜಿತ್ ಕುಮಾರ್ ವಾದ ಮಂಡಿಸಿದ ವೇಳೆ, ಪಾಕಿಸ್ತಾನದಿಂದಾಗಿ ದೆಹಲಿಯಲ್ಲಿ ವಾಯುಮಾಲಿನ್ಯ ಉಂಟಾಗಲು ಕಾರಣವಾಗಿದೆ ಎಂದಿದ್ದರು. “ ಅಂದರೆ ಪಾಕಿಸ್ತಾನದಲ್ಲಿರುವ ಕೈಗಾರಿಕೆಗಳನ್ನು ನಿಷೇಧಿಸಬೇಕೆಂದು ಬಯಸುತ್ತಿದ್ದೀರಾ ಎಂದು ಸುಪ್ರೀಂಕೋರ್ಟ್ ಸಿಜೆಐ ಎನ್.ವಿ.ರಮಣ ಅವರು ಪ್ರಶ್ನಿಸಿದ್ದಾರೆ.
ಉತ್ತರಪ್ರದೇಶದಲ್ಲಿರುವ ಎಲ್ಲಾ ಕೈಗಾರಿಕೆಗಳು ನಿಯಂತ್ರಣ ಕ್ರಮ ತೆಗೆದುಕೊಂಡಿದ್ದು, ಉತ್ತರಪ್ರದೇಶದ ಕೈಗಾರಿಕೆಗಳಿಂದ ದೆಹಲಿಯ ವಾಯುಗುಣಮಟ್ಟದ ಮೇಲೆ ಪರಿಣಾಮ ಬೀರಿಲ್ಲ. ರಾಷ್ಟ್ರರಾಜಧಾನಿಯ ವಾಯು ಗುಣಮಟ್ಟ ಕಲುಷಿತಗೊಳ್ಳುವಲ್ಲಿ ರಾಜ್ಯದ ಯಾವುದೇ ಪಾತ್ರ ಇಲ್ಲ ಎಂದು ರಂಜಿತ್ ಕುಮಾರ್ ಅಫಿಡವಿತ್ ಸಲ್ಲಿಸಿದ್ದರು.
ಸುಪ್ರೀಂಕೋರ್ಟ್ ಸಿಜೆಐ ಎನ್ ವಿ ರಮಣ ನೇತೃತ್ವದ ಪೀಠ ದೆಹಲಿ-ಎನ್ ಸಿಆರ್ ಪ್ರದೇಶದಲ್ಲಿನ ವಾಯುಗುಣಮಟ್ಟ ಕುರಿತು ಸಲ್ಲಿಕೆಯಾಗಿದ್ದ ಅರ್ಜಿಯ ವಿಚಾರಣೆಯನ್ನು ನಡೆಸುತ್ತಿದೆ. ಅಲ್ಲದೇ ದೆಹಲಿಯಲ್ಲಿ ಕಟ್ಟಡ ನಿರ್ಮಾಣ ಕಾಮಗಾರಿ ಮೇಲೆ ಸುಪ್ರೀಂಕೋರ್ಟ್ ನಿರ್ಬಂಧ ವಿಧಿಸಿದ್ದರು ಕೂಡಾ, ಆಸ್ಪತ್ರೆಗಳ ಕಟ್ಟಡ ನಿರ್ಮಾಣಕ್ಕೆ ಅನುಮತಿ ನೀಡಿರುವುದಾಗಿ ಶುಕ್ರವಾರ ತಿಳಿಸಿದೆ.