Advertisement

ಕಾರು ಬಾಡಿಗೆಗೆ ಕೊಡ್ತೀರಾ? ಹುಷಾರ್‌…

12:10 PM Jun 22, 2024 | Team Udayavani |

ಬೆಂಗಳೂರು: ಕಾರು ಬಾಡಿಗೆಗೆ ಪಡೆದು ನಂತರ ಅದಕ್ಕೆ ಅಳವಡಿಸಿದ್ದ ಜಿಪಿಎಸ್‌ ತೆಗೆದು ಮಾರಾಟ ಮಾಡುತ್ತಿದ್ದ ವಂಚಕನ ಹುಳಿಮಾವು ಪೊಲೀಸರ ಬಲೆಗೆ ಬಿದ್ದಿದ್ದು ಬರೋಬ್ಬರಿ 90 ಲಕ್ಷ ರೂ. ಮೌಲ್ಯದ 9 ಕಾರು ವಶಪಡಿಸಿಕೊಳ್ಳಲಾಗಿದೆ.

Advertisement

ಲಗ್ಗೆರೆ ನಿವಾಸಿ ಶ್ರೀನಿವಾಸ್‌ (32) ಬಂಧಿತ. ಆರೋ ಪಿಯು ಅಡಮಾನವಿಟ್ಟಿದ್ದ ಮತ್ತು ಮಾರಾಟ ಮಾಡಿ ದ್ದವರ ಕಡೆಯಿಂದ ವಿವಿಧ ಕಂಪನಿಗಳ 9 ಕಾರುಗಳನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಯು ಕಾರು ಮಾಲೀಕರಿಂದ ಕಾರುಗಳನ್ನು ಬಾಡಿಗೆಗೆ ಪಡೆದುಕೊಳ್ಳುತ್ತಿದ್ದ. ನಂತರ ಕಾರಿನಲ್ಲಿರುತ್ತಿದ್ದ ಜಿಪಿಎಸ್‌ನ್ನು ತೆಗೆದು ಹಾಕಿ ನಕಲಿ ದಾಖಲೆಗಳನ್ನು ಸೃಷ್ಟಿಸಿ ಕಾರು ಸಮೇತ ಪರಾರಿಯಾಗುತ್ತಿದ್ದ. ಬಳಿಕ ಮಾಲೀಕರಿಗೆ ಮತ್ತು ಕಾರು ಖರೀದಿದಾರರಿಗೆ ಮೋಸ ಮಾಡುತ್ತಿದ್ದ.

ಹುಳಿಮಾವು ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಮಾ.25ರಂದು ಕಾರು ಬಾಡಿಗೆಗೆ ಕೊಡುವವರಿಂದ ಮಾರುತಿ ಸ್ವಿಫ್ಟ್ ಕಾರನ್ನು ಆರೋಪಿ ಶ್ರೀನಿವಾಸ್‌ ಒಂದು ತಿಂಗಳ ಮಟ್ಟಿಗೆ ಬಾಡಿಗೆಗೆ ಪಡೆದುಕೊಂಡು ಹೋಗಿದ್ದ. ನಂತರ ಅವರ ಕಾರಿಗೆ ಅಳವಡಿಸಿದ್ದ ಜಿಪಿಎಸ್‌ ಅನ್ನು ತೆಗೆದುಹಾಕಿ ಬಾಡಿಗೆಗೆ ಕಾರು ಕೊಟ್ಟವರ ಸಂಪರ್ಕಕ್ಕೆ ಸಿಗದೆ ತೆಲೆಮರೆಸಿಕೊಂಡು ಮೋಸ ಮಾಡಿದ್ದ.

ಬಾಡಿಗೆಗೆ ಕಾರು ಕೊಡುತ್ತಿದ್ದ ಮಳಿಗೆಯ ಮಾಲೀಕರು ಜೂನ್‌8ರಂದು ಈ ಬಗ್ಗೆ ಹುಳಿಮಾವು ಪೊಲೀಸ್‌ ಠಾಣೆಗೆ ದೂರು ನೀಡಿದ್ದರು. ಈ ಕುರಿತು ಹುಳಿಮಾವು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖ ಲಾಗಿತ್ತು. ಪ್ರಕರಣದ ತನಿಖೆಯನ್ನು ಮುಂದು ವರಿಸಿದ ಪೊಲೀಸರು, ವಿವಿಧ ಆಯಾಮ ಗಳಲ್ಲಿ ತನಿಖೆ ಕೈಗೊಂಡು ಬಾತ್ಮೀದಾರರಿಂದ ಮಾಹಿತಿ ಕಲೆ ಹಾಕಿ ಜೂನ್‌ 9ರಂದು ಶಿವಮೊಗ್ಗದಲ್ಲಿ ಆರೋಪಿ ಶ್ರೀನಿವಾಸ್‌ನನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿ ಸಿದ್ದರು. ವಿಚಾರಣೆ ವೇಳೆ ಕಾರುಗಳನ್ನು ಕಳ್ಳತನ ಮಾಡಿರುವುದಾಗಿ ಆರೋಪಿ ತಪ್ಪೊಪ್ಪಿಕೊಂಡಿದ್ದ. ನಂತರ ಆತನನ್ನು ಬೆಂಗಳೂರಿಗೆ ಕರೆತಂದು ನ್ಯಾಯಾಲಯಕ್ಕೆ ಹಾಜರಡಿಸಿ 6 ದಿನಗಳ ಕಾಲ ಪೊಲೀಸ್‌ ಅಭಿರಕ್ಷೆಗೆ ಪಡೆದು, ಆತನನ್ನು ಕೂಲಂಕುಷ ವಾಗಿ ವಿಚಾರಣೆ ಮಾಡಲಾಗಿತ್ತು. ಆ ವೇಳೆ ಕಳ್ಳತನ ಮಾಡಿದ ಕಾರುಗಳಿಗೆ ನಕಲಿ ದಾಖಲೆ ಸೃಷ್ಟಿಸಿ ಅವುಗಳ ಪೈಕಿ ಮೂರು ಕಾರುಗಳನ್ನು ಅಡಮಾನವಿಟ್ಟಿದ್ದ. ಆರು ಕಾರುಗಳನ್ನು ಮಾರಾಟ ಮಾಡಿರುವುದಾಗಿ ತಿಳಿಸಿದ್ದ.

Advertisement

Udayavani is now on Telegram. Click here to join our channel and stay updated with the latest news.

Next