Advertisement

ಒಂದೇ ಪರೀಕ್ಷೆಯ ಅಗತ್ಯವೇನು?

03:45 AM Feb 05, 2017 | Team Udayavani |

ನವದೆಹಲಿ:  ಮೆಡಿಕಲ್‌, ಎಂಜಿನಿಯರಿಂಗ್‌ ಪ್ರವೇಶ ಪರೀಕ್ಷೆಗೆ ಒಂದೇ ಪ್ರವೇಶ ಪರೀಕ್ಷೆ ಸಾಕು ಎಂಬ ಕೇಂದ್ರದ ನಿರ್ಧಾರವನ್ನು ಸುಪ್ರೀಂಕೋರ್ಟ್‌ ಪ್ರಶ್ನಿಸಿದೆ. ಇದರಿಂದ ವಿದ್ಯಾರ್ಥಿಗಳಿಗೆ ಒತ್ತಡ ಉಂಟಾಗುವುದಿಲ್ಲವೇ ಎಂದು ನ್ಯಾ.ಎ.ಕೆ.ಗೋಯಲ್‌ ಮತ್ತು  ನ್ಯಾ.ಯು.ಯು. ಲಲಿತ್‌ ಅವರನ್ನೊಳಗೊಂಡ ಪೀಠ ಸರ್ಕಾರವನ್ನು ಕೇಳಿದೆ. ಇದರ ಜತೆಗೆ ಏಕೀಕೃತ ಪ್ರವೇಶ ಪರೀಕ್ಷೆ ಎಂಬ ಪ್ರಸ್ತಾಪದ ಬದಲಿ ವ್ಯವಸ್ಥೆ ಬಗ್ಗೆ ಪರಿಶೀಲನೆ ನಡೆಸಿ ಎಂದು ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ವೇಳೆ ಕೇಂದ್ರಕ್ಕೆ ಸಲಹೆ ನೀಡಿದೆ.

Advertisement

ಈಗ ಚಾಲ್ತಿಯಲ್ಲಿರುವ ನಿಯಮ ವಿದ್ಯಾರ್ಥಿಗಳ ಭವಿಷ್ಯಕ್ಕೆ ಮಾರಕವಾಗಿದೆ. ಪ್ರವೇಶಕ್ಕೆ ಬೇಕಾಗುವ ಮಾನದಂಡವನ್ನು ಅಳೆಯಲು ಪದವಿ ಪೂರ್ವ ಪರೀಕ್ಷೆಯಲ್ಲಿ ಶೇ.40 ಮತ್ತು ಆಯಾ ಕೋರ್ಸ್‌ಗಳ ಪ್ರವೇಶ ಪರೀಕ್ಷೆಯಲ್ಲಿ ಶೇ.60 ಅಂಕಗಳನ್ನು ಪರಿಗಣಿಸಿ ಅಂಥ ಕೋರ್ಸ್‌ಗಳಿಗೆ ಪ್ರವೇಶ ನೀಡಬೇಕು ಎಂದು ನ್ಯಾಯಪೀಠ ಅಭಿಪ್ರಾಯಟ್ಟಿತು. ಕೇವಲ ಪ್ರವೇಶ ಪರೀಕ್ಷೆಯಿಂದಲೇ ವಿದ್ಯಾರ್ಥಿ ಅಥವಾ ವಿದ್ಯಾರ್ಥಿನಿ ಮೆಡಿಕಲ್‌, ಎಂಜಿನಿಯರಿಂಗ್‌ ಕೋರ್ಸ್‌ಗೆ ಅರ್ಹರು ಎಂದು ತೀರ್ಮಾನಿಸುವ ಕ್ರಮ ಸರಿಯಾದುದಲ್ಲ. ಹೀಗೆಂದು ಆ ರೀತಿ ಆದೇಶ ನೀಡಲೂ ಸಾಧ್ಯವಿಲ್ಲ ಎಂದಿತು ನ್ಯಾಯಪೀಠ.

ಪ್ರವೇಶ ಪರೀಕ್ಷೆಗೆ ತರಬೇತಿ ಎಂದು ಕೋಚಿಂಗ್‌ ಕ್ಲಾಸ್‌ ನೀಡುವ ಸಂಸ್ಥೆಗಳು ವ್ಯಾಪಕವಾಗಿವೆ. ಅವುಗಳನ್ನು ನಿಯಂತ್ರಿಸಲು ಸಾಧ್ಯವಿಲ್ಲವೇ ಎಂದು ಕೋರ್ಟ್‌ ಕೇಂದ್ರವನ್ನು ಪ್ರಶ್ನೆ ಮಾಡಿತು. ಹಾಗೆಂದು ಅವುಗಳನ್ನು ಸಂಪೂರ್ಣವಾಗಿ ನಿಯಂತ್ರಿಸಬೇಕೆಂದೂ ಅಲ್ಲ ಎಂದೂ ಸ್ಪಷ್ಟನೆ ನೀಡಿತು.

Advertisement

Udayavani is now on Telegram. Click here to join our channel and stay updated with the latest news.

Next