Advertisement

ಮತದಾನದ ಬಳಿಕ ಕೇರಳದ ನಾಯಕರು ಮಾಡಿದ್ದೇನು ಗೊತ್ತಾ?

05:05 AM Apr 26, 2019 | mahesh |

ಚುನಾವಣೆ ಎಂದರೆ ಸಾಕು, ಕಣ್ಣು ಹಾಯಿಸಿದಲ್ಲೆಲ್ಲಾ ಪೋಸ್ಟರ್‌ಗಳು, ಬ್ಯಾನರ್‌ಗಳು, ಪ್ಯಾಂಪ್ಲೆಟ್‌ಗಳದ್ದೇ ಹವಾ. ಅದರಲ್ಲೂ ರೋಡ್‌ಶೋಗಳು, ಚುನಾವಣ ಪ್ರಚಾರ ರ್ಯಾಲಿಗಳು ನಡೆದಲ್ಲಂತೂ ಆಹಾರದ ಪ್ಯಾಕೆಟ್‌ಗಳು, ಖಾಲಿ ಬಾಟಲಿಗಳು, ಪಕ್ಷದ ಧ್ವಜಗಳು… ಹೀಗೆ ಕಸದ ರಾಶಿಯೇ ಬಿದ್ದಿರುತ್ತವೆ. ಆದರೆ, ಇತ್ತೀಚೆಗೆ ಲೋಕಸಭಾ ಚುನಾವಣೆ ಮುಗಿದ ಕೇರಳದಲ್ಲಿನ ಸ್ಥಿತಿ ಮಾತ್ರ ವಿಭಿನ್ನ. ಇಲ್ಲಿ ಚುನಾವಣೆಯ ಮಾರನೇ ದಿನ ಅಲ್ಲಿ ಮತದಾನ ನಡೆದಿತ್ತೆಂಬುದೇ ಮರೆತುಹೋಗುವಷ್ಟು ಎಲ್ಲ ಸ್ಥಳಗಳೂ ಸ್ವಚ್ಛವಾಗಿತ್ತಂತೆ. ಯಾರೋ ಸ್ವಚ್ಛತಾ ಕಾರ್ಮಿಕರು ಇದನ್ನೆಲ್ಲ ಕ್ಲೀನ್‌ ಮಾಡಿರಬಹುದು ಎಂದು ನೀವು ಯೋಚಿಸಿದರೆ ಅದು ತಪ್ಪು.

Advertisement

ಇಲ್ಲಿ ಸ್ವಚ್ಛತಾ ಕೆಲಸವನ್ನು ಕೈಗೆತ್ತಿಕೊಂಡಿದ್ದು ಬೇರ್ಯಾರೂ ಅಲ್ಲ, ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಅಭ್ಯರ್ಥಿಗಳು! ಅಚ್ಚರಿಯಾದರೂ ಇದು ಸತ್ಯ. ಕರ್ನಾಟಕ ಸೇರಿದಂತೆ ಎಲ್ಲ ರಾಜ್ಯಗಳೂ ಮತದಾನದ ಮಾರನೇ ದಿನ ರಾಜಕೀಯ ನಾಯಕರು ವಿಶ್ರಾಂತಿಯ ಮೊರೆ ಹೋದರೆ, ಕೇರಳದಲ್ಲಿ ಅಭ್ಯರ್ಥಿ ಗಳೆಲ್ಲರೂ ಕಸ ಹೆಕ್ಕುವ ಕೆಲಸ ಮಾಡುತ್ತಿದ್ದರು.

ಎರ್ನಾಕುಳಂನ ಎಲ್ಡಿಎಫ್ ಅಭ್ಯರ್ಥಿ ಪಿ. ರಾಜೀವ್‌ ಅವರು ಲೆಟ್ಸ್‌ ಕ್ಲೀನ್‌ ಎರ್ನಾಕುಳಂ ಎಂಬ ಹ್ಯಾಷ್‌ಟ್ಯಾಗ್‌ನಲ್ಲಿ ಆರಂಭಿಸಿದ ಅಭಿಯಾನಕ್ಕೆ ಸಖತ್‌ ರೆಸ್ಪಾನ್ಸ್‌ ಸಿಕ್ಕಿದ್ದು, ವಿವಿಧ ರಾಜಕೀಯ ನೇತಾರರೂ ಇದಕ್ಕೆ ಕೈಜೋಡಿಸಿದ್ದಾರೆ. ಬಿಜೆಪಿ ಅಭ್ಯರ್ಥಿ ಅಲ್ಫೋನ್ಸ್‌ ಕನ್ನಂಥಾನಂ, ಕುಮ್ಮನಂ ರಾಜಶೇಖರನ್‌ ಕೂಡ ಅಭಿಯಾನದಲ್ಲಿ ಪಾಲ್ಗೊಂಡಿದ್ದು, ಎಲ್ಲರಿಗೂ ಮಾದರಿಯಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next