Advertisement
ಇದಕ್ಕೆ ಇಪಿಎಫ್ ಆ್ಯಕ್ಟ್ 1952 ಎನ್ನುವ ಪ್ರತ್ಯೇಕ ಶಾಸನವಿದೆ. ಇದರನ್ವಯ ಸರಕಾರವು ಎಂಪ್ಲಾಯೀಸ್ ಪ್ರಾವಿಡೆಂಟ್ ಫಂಡ್ ಎಂಬ ನಿಧಿಯನ್ನು ನೌಕರವರ್ಗದ ಭವಿಷ್ಯ ಕಲ್ಯಾಣಕ್ಕಾಗಿ ಸ್ಥಾಪಿಸಿತು. ಇದು ಸರಕಾರಿ ಹಾಗೂ ಖಾಸಗಿ ಕ್ಷೇತ್ರದ ನೌಕರರಿಗೆ ಸಮಾನವಾಗಿ ಅನ್ವಯಿಸುವ ಸೌಲಭ್ಯ. ಇದು ನಿಮ್ಮ ಕಂಪೆನಿಯೊಳಗೆ ಸಂಬಳದಿಂದ ಕಡಿತಗೊಂಡು ವೃದ್ಧಿಯಾಗುವ ಫಂಡು. ಹೊರಗೆ ಸ್ಟೇಟ್ ಬ್ಯಾಂಕ್/ಪೋಸ್ಟಾಫೀಸಿನಲ್ಲಿ ಸಾರ್ವಜನಿಕರಿಗಾಗಿ ದೊರಕುವ ಪಬ್ಲಿಕ್ ಪ್ರಾವಿಡೆಂಟ್ ಫಂಡ್‌ಗಿಂತ ಭಿನ್ನ.
ಒಂದು ಸಂಸ್ಥೆಯಲ್ಲಿ ಪಿ.ಎಫ್ ಕಡಿತ ಮಾಡಬೇಕಾದರೆ 20ಕ್ಕೂ ಹೆಚ್ಚು ಉದ್ಯೋಗಿಗಳು ಇರಬೇಕಾದದ್ದು ಕಡ್ಡಾಯ. ಅದರಿಂದ ಕಡಿಮೆ ಉದ್ಯೋಗಿಗಳಿರುವ ಸಂಸ್ಥೆಗಳಿಗೆ ಪಿ.ಎಫ್ ನಿಧಿ ಅನುಷ್ಠಾನ ಕಡ್ಡಾಯವಲ್ಲ. ಅಲ್ಲದೆ, ಮಾಸಿಕ ಸಂಬಳ ರೂ 15,000 (ಬೇಸಿಕ್+ಡಿ.ಎ) ಗಿಂತ ಜಾಸ್ತಿ ಇರುವ ಉದ್ಯೋಗಿಗಳ ಮೇಲೆ ಕೂಡಾ ಈ ಸ್ಕೀಮು ಕಡ್ಡಾಯವಲ್ಲ. ಈ ಮಿತಿಯ ಒಳಗೆ ವೇತನ ಪಡೆಯುವ ವರ್ಗಕ್ಕೆ ಮಾತ್ರ ಈ ಸ್ಕೀಮು ಕಡ್ಡಾಯ. ಸರಕಾರದ ಕಾನೂನುಗಳು ದುರ್ಬಲ ವರ್ಗದವರನ್ನು ರಕ್ಷಿಸುವ ದೃಷ್ಟಿಯಿಂದ ಮಾಡಿದ್ದಾಗಿರುತ್ತದೆ. ಆದರೂ ಬಹುತೇಕ ಉತ್ತಮ ಕಂಪೆನಿಗಳು ತಮ್ಮ ಎಲ್ಲಾ ಉದ್ಯೋಗಿಗಳಿಗೂ ಪಿ.ಎಫ್ ಕಡಿತವನ್ನು ಐಚ್ಛಿಕವಾಗಿಯಾದರೂ ಮಾಡುತ್ತಿವೆ. ಇದು ಏಕೆಂದರೆ, ಪ್ರಾವಿಡೆಂಟ್ ಫಂಡ್ ಎಂಬುದು ಭವಿಷ್ಯಕ್ಕಾಗಿ ಮಾಡುವಂತಹ ಒಂದು ಉತ್ತಮವಾದ ಉಳಿತಾಯ ಯೋಜನೆ. ನಿಗದಿತ, ಕರಮುಕ್ತ ಆದಾಯಕ್ಕೆ ಪಿ.ಎಫ್ನಷ್ಟು ಪ್ರಶಸ್ತವಾದ ಹೂಡಿಕೆ ಇನ್ನೊಂದಿಲ್ಲ. ಸಂಘಟಿತ ಉದ್ಯಮಗಳಿಗೆ ಈ ಕಾನೂನು ಕಟ್ಟುನಿಟ್ಟಾಗಿ ಅನ್ವಯಿಸುವುದಾದರೂ ಅಸಂಘಟಿತ ಕ್ಷೇತ್ರದ ಬಹುಪಾಲು ಕಾರ್ಮಿಕರಿಗೆ ಈ ಸೌಲಭ್ಯ ಇನ್ನೂ ದೊರಕುತ್ತಿಲ್ಲ ಎನ್ನುವುದು ದುಃಖದ ವಿಚಾರ. ಅಂತವರಿಗೆ ಬ್ಯಾಂಕ್/ಪೋಸ್ಟಾಫೀಸಿನ ಪಿಪಿಎಫ್ ಒಂದು ಪರ್ಯಾಯ.
Related Articles
Advertisement
ಹಾಗಾಗಿ ಒಟ್ಟು ಜಮೆ ಶೇ. 24 ನಿಜ ಹೇಳಬೇಕಾದರೆ, ನಾವು ಶೇ.24 ಎಂದು ಹೇಳುತ್ತೇವಾದರೂ ಅಸಲಿಗೆ ನಮ್ಮ ಪಿಎಫ್ ಖಾತೆಗೆ ಈ ಶೇ.24ರಷ್ಟು ಸಂಪೂರ್ಣವಾಗಿ ಜಮೆಯಾಗುವುದಿಲ್ಲ. ನಿಮ್ಮ ಶೇ.12 ಸಂಪೂರ್ಣವಾಗಿ ಪಿಎಫ್ ಖಾತೆಗೇನೇ ಜಮೆಯಾದರೂ ಕೂಡಾ ಉದ್ಯೋಗದಾತರ ಶೇ.12ರಲ್ಲಿ ಎರಡು ಭಾಗಗಳಿವೆ. ಮೊತ್ತಮೊದಲನೆಯ ಭಾಗ- ಸಂಬಳದ ಶೇ.8.33 (ಗರಿಷ್ಠ, ಸಂಬಳ ರೂ 15,000 ಮಿತಿಯೊಳಗೆ ಅಂದರೆ, ಗರಿಷ್ಠ ದೇಣಿಗೆ ರೂ 1250) ಇಪಿಎಫ್ಒ ಅಡಿಯಲ್ಲಿಯೇ ಬರುವ ಒಂದು ಪೆನÒನ್ ಉಪಖಾತೆಗೆ ಹೋಗುತ್ತದೆ. ಎಂಪ್ಲಾಯ್ ಪೆನÒನ್ ಸ್ಕೀಮ್ ಅಥವಾ ‘ಇಪಿಎಸ್’ ಎನ್ನುವ ಈ ಸ್ಕೀಮು ನಿವೃತ್ತಿಯ ಬಳಿಕ ಸಿಗುವ ಪೆನÒನ್‌ಗಾಗಿ ಮೀಸಲಾಗಿದೆ. ಹಾಗಾಗಿ ಇಪಿಎಫ್ನಲ್ಲಿ ಪೆನÒನ್ ದೇಣಿಗೆಯಾದ ಶೇ.8.33 ಅಥವಾ ಗರಿಷ್ಠ ರೂ 1,250 ಕಳೆದು ಉಳಿದ ಮೊತ್ತ ಅಂದರೆ ಶೇ.3.67 (ಗರಿಷ್ಟ ಸಂಬಳ ರೂ 15,000 ಮಿತಿಯೊಳಗೆ ಅಂದರೆ ಗರಿಷ್ಟ ದೇಣಿಗೆ ರೂ 550) ಮಾತ್ರ ಪಿಎಫ್ನ ‘ಎಕೌಂಟ್ ಬಿ’ ಗೆ ಜಮೆಯಾಗುತ್ತದೆ.