Advertisement

ನಾಯಿಗಳ ಮೂಲ ಯಾವುದು ಎಂಬುದು ಗೊತ್ತಾ?

11:36 AM Jul 06, 2022 | Team Udayavani |

ಲಂಡನ್‌: “ಮಂಗನಿಂದ ಮಾನವ’ ಎಂಬ ಮಾತಿದೆ. ಆದರೆ, ನಾಯಿಗಳ ಮೂಲ ಯಾವುದು ಎಂಬುದು ಗೊತ್ತಾ?

Advertisement

ನಾಯಿಗಳ ಮೂಲ ತೋಳವಂತೆ! ಹೀಗೆಂದು ಲಂಡನ್‌ನ ಫ್ರಾನ್ಸಿಸ್‌ ಕ್ರಿಕ್‌ ಇನ್‌ಸ್ಟಿಟ್ಯೂಟ್‌ನ ಸಂಶೋಧಕರು ತಿಳಿಸಿದ್ದಾರೆ. ಎಷ್ಟೋ ವರ್ಷಗಳ ಹಿಂದೆ ನಾಯಿಗಳೆಲ್ಲವೂ ತೋಳಗಳಾಗಿ ಇದ್ದವಂತೆ. ಕನಿಷ್ಠ 15 ಸಾವಿರ ವರ್ಷಗಳ ಹಿಂದೆ ಅಂದರೆ ಹಿಮ ಯುಗದಲ್ಲಿ ಈ ತೋಳಗಳನ್ನು ಮನುಷ್ಯ ಪಳಗಿಸಲು ಆರಂಭಿಸಿದ್ದು, ನಂತರದಲ್ಲಿ ತೋಳ  ಗಳು ನಾಯಿಗಳಾಗಿ ಬದಲಾದವು ಎನ್ನುತ್ತದೆ ಈ ಸಂಶೋಧಕರ ಅಧ್ಯಯನ ವರದಿ.

ಆದರೆ, ಇಂಥದ್ದೊಂದು ಬದಲಾವಣೆ ಕೇವಲ ಒಂದು ಪ್ರದೇಶದಲ್ಲಿ ನಡೆಯಿತೋ ಅಥವಾ ಹಲವು ಕಡೆ ನಡೆಯಿತೋ ಎಂಬ ಬಗ್ಗೆ ಇನ್ನಷ್ಟೇ ಪುರಾವೆಗಳನ್ನು ಸಂಗ್ರಹಿಸಬೇಕಿದೆ ಎಂದಿದ್ದಾರೆ ಸಂಶೋಧಕರು. ಈ ವರದಿಯು ಜರ್ನಲ್‌ ನೇಚರ್‌ ಎಂಬ ನಿಯತಕಾಲಿಕೆಯಲ್ಲಿ ಪ್ರಕಟವಾಗಿದೆ.

ಸಂಶೋಧನೆ ನಡೆದಿದ್ದು ಹೇಗೆ?: ಯುರೋಪ್‌, ಸೈಬೀರಿಯಾ, ಉತ್ತರ ಅಮೆರಿಕ ಸೇರಿ  16 ದೇಶಗಳ ಒಂದು ಲಕ್ಷ ವರ್ಷಗಳಷ್ಟು ಹಿಂದಿನ 72 ಪ್ರಾಚೀನ ತೋಳಗಳ ಡಿಎನ್‌ಎ ಸಂಗ್ರಹಿಸಿ ಪರೀಕ್ಷಿಸಿದಾಗ, ಅವುಗಳ ಡಿಎನ್‌ಎ ನಾಯಿಗಳಿಗೆ ಹೋಲಿಕೆಯಾಗಿವೆ. ಪ್ರಾಚೀನ ಹಾಗೂ ಆಧುನಿಕ ಶ್ವಾನಗಳ ಡಿಎನ್‌ಎಗಳು ಹಾಗೂ ಏಷ್ಯಾದ ಪ್ರಾಚೀನ ತೋಳಗಳ ಡಿಎನ್‌ಎ ಗಳಲ್ಲಿ ಹೆಚ್ಚು ಸಾಮ್ಯತೆ ಇರುವುದು ಪತ್ತೆಯಾಗಿದೆ ಎಂದು ಸಂಶೋಧಕರು ತಿಳಿಸಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next