ಭಾರತದಲ್ಲಿ ವಾರ್ಷಿಕ ತೆರಿಗೆ ವಂಚನೆ ಪ್ರಮಾಣ ಎಷ್ಟು ಇದೆ ಗೊತ್ತಾ?
Team Udayavani, Nov 21, 2020, 11:10 PM IST
ನವದೆಹಲಿ: ಭಾರತದಲ್ಲಿ ವಾರ್ಷಿಕ ತೆರಿಗೆ ವಂಚನೆ ಪ್ರಮಾಣ ಎಷ್ಟು ಗೊತ್ತಾ? 76.38 ಸಾವಿರ ಕೋಟಿ ರೂ. ಅಂತಾರಾಷ್ಟ್ರೀಯ ವಾಣಿಜ್ಯ ತೆರಿಗೆ ವಂಚನೆ, ಖಾಸಗಿ ತೆರಿಗೆ ತಪ್ಪಿಸಿಕೊಳ್ಳುವವರಿಂದ ಇಂತಹ ಪರಿಸ್ಥಿತಿ ಉದ್ಭವಿಸಿದೆ ಎಂದು ಟ್ಯಾಕ್ಸ್ ಜಸ್ಟೀಸ್ ನೆಟ್‌ವರ್ಕ್‌ನ ತೆರಿಗೆ ನ್ಯಾಯದ ಸ್ಥಿತಿಗತಿ ವರದಿಯಲ್ಲಿ ತಿಳಿಸಲಾಗಿದೆ.
ಭಾರತದ 100 ಲಕ್ಷ ಕೋಟಿ ರೂ. ವಾರ್ಷಿಕ ಜಿಡಿಪಿಯಲ್ಲಿ ಶೇ.0.41ರಷ್ಟು ಹಣ ತೆರಿಗೆ ವಂಚನೆಯಲ್ಲೇ ಕಳೆದುಹೋಗುತ್ತದೆ. ಜಾಗತಿಕವಾಗಿ ಈ ರೀತಿಯ ತೆರಿಗೆ ವಂಚನೆ ಪ್ರಮಾಣ 31.66 ಲಕ್ಷ ಕೋಟಿ ರೂ. ಇದೆ.
ಭಾರತದಲ್ಲಾಗುತ್ತಿರುವ ವಂಚನೆಯಲ್ಲಿ ಬಹುರಾಷ್ಟ್ರೀಯ ಕಂಪನಿಗಳ ಪಾಲು 74.16 ಸಾವಿರ ಕೋಟಿ ರೂ. ಇನ್ನು 1483 ಕೋಟಿ ರೂ. ಮೊತ್ತ ಖಾಸಗಿಯಾಗಿ ವಂಚನೆಯಾಗುತ್ತಿದೆ. ಒಟ್ಟಾರೆ ಈ ವಂಚನೆ ಪ್ರಮಾಣ ದೇಶದ ಆರೋಗ್ಯ ಬಜೆಟ್‌ನ ಶೇ.44.70ಕ್ಕೆ ಸರಿಸಮನಾಗಿದೆ ಅಥವಾ 40.23 ಲಕ್ಷ ದಾದಿಯರಿಗೆ ಕೊಡುವ ವಾರ್ಷಿಕ ವೇತನಕ್ಕೆ ಸಮನಾಗಿದೆ.
ಇದನ್ನೂ ಓದಿ:ಹಾಂಕಾಂಗ್ ಪರ ವಕಾಲತ್ತು ವಹಿಸಿದ್ರೆ ಇಂಗ್ಲೆಂಡನ್ನು ಕುರುಡಾಗಿಸುತ್ತೇವೆ: ಚೀನಾ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ISRO 100ನೇ ರಾಕೆಟ್ ಉಡಾವಣೆ ಯಶಸ್ವಿ
MahaKumbh: ಮಹಾಕುಂಭ ಮೇಳದಲ್ಲಿ ಕಾಲ್ತುಳಿತದಿಂದ 30 ಭಕ್ತರು ಮೃತ್ಯು: ಡಿಐಜಿ ವೈಭವ್
Maha Kumbh;ಕಾಲ್ತುಳಿತದ ನಂತರ ಅಮೃತ ಸ್ನಾನ: ಸಾಧು-ಸಂತರ ಮೇಲೆ ಪುಷ್ಪವೃಷ್ಟಿ
Video: ಕುಂಭಮೇಳದಲ್ಲಿ ಆಶೀರ್ವಾದ ಪಡೆಯಲು ಹೋದ ವ್ಯಕ್ತಿಗೆ ಸಾಧು ಆಶೀರ್ವದಿಸಿದ್ದು ಹೀಗೆ
Delhi polls ‘ವಿಷ’ಯ; ನಾನೂ ಯಮುನೆಯ ನೀರನ್ನೇ ಕುಡಿಯುವುದು: ಕೇಜ್ರಿಗೆ ಪ್ರಧಾನಿ ತಿರುಗೇಟು