Advertisement
ಈ ಪರೀಕ್ಷಾ ನಮೂನೆಯು ಮೂರು ಹಂತಗಳನ್ನು ಒಳಗೊಂಡಿದೆ…* ಹಂತ 1- ಐ.ಎ.ಎಸ್ ಪ್ರಿಲಿಮ್ಸ… (ಪೂರ್ವಭಾವಿ ಪರೀಕ್ಷೆ)
* ಹಂತ 2- ಐ.ಎ.ಎಸ್ ಮೇನ್ಸ್ (ಮುಖ್ಯ ಪರೀಕ್ಷೆ)
* ಹಂತ 3- ಇಂಟರ್‌ವ್ಯೂ/ ವ್ಯಕ್ತಿತ್ವ ಪರೀಕ್ಷೆ
ಪರೀಕ್ಷೆಯ ಮಟ್ಟ: ರಾಷ್ಟ್ರ ಮಟ್ಟ
ನಿರ್ವಹಣಾ ಸಂಸ್ಥೆ: ಯೂನಿಯನ್ ಪಬ್ಲಿಕ್ ಸರ್ವೀಸ್ ಕಮಿಷನ್ (ಯು.ಪಿ.ಎಸ್.ಸಿ)
ಅಧಿಕೃತ ಜಾಲತಾಣ: www.upsconline.nic.in
ಪರೀಕ್ಷಾ ಆವೃತ್ತಿ: ವಾರ್ಷಿಕ
ಪರೀಕ್ಷಾ ವಿಧಾನ: ಆಫ್ಲೈನ್ (ಬರವಣಿಗೆ)
ನಿರೀಕ್ಷಿತ ನೋಂದಣಿ: ಸುಮಾರು 3 ಲಕ್ಷ
Related Articles
ಪರೀಕ್ಷಾ ಅಧಿಕಾರಿಗಳು ನಿಗದಿಪಡಿಸಿದ ಕೆಲವು ನಿರ್ಣಾಯಕ ಅಂಶಗಳನ್ನು ಹೊಂದಿದ ಅಭ್ಯರ್ಥಿಗಳು ಮಾತ್ರ ಪರೀಕ್ಷೆಗೆ ಕೂರಲು ಅರ್ಹರಾಗಿರುತ್ತಾರೆ..
Advertisement
ಅರ್ಹತೆಯ ಮಾನದಂಡಗಳುರಾಷ್ಟ್ರೀಯತೆ, ವಯೋಮಿತಿ, ಶೈಕ್ಷಣಿಕ ಅರ್ಹತೆ, ದೈಹಿಕ ದೃಢತೆ, ಪರೀಕ್ಷೆಯಲ್ಲಿ ತೇರ್ಗಡೆಯಾಗಲು ಪ್ರಯತ್ನಿಸಿದ ಸಂಖ್ಯೆ ಇವೆಲ್ಲವನ್ನೂ ಪರಿಗಣನೆಗೆ ತೆಗೆದುಕೊಳ್ಳಲಾಗುತ್ತದೆ.. ರಾಷ್ಟ್ರೀಯತೆ (ನ್ಯಾಷನಾಲಿಟಿ)
ಐ.ಎ.ಎಸ್ ಹಾಗೂ ಐ.ಪಿ.ಎಸ್ ಪರೀಕ್ಷೆ ಬರೆಯಲಿಚ್ಛಿಸುವ ಅಭ್ಯರ್ಥಿಗಳು ಭಾರತೀಯ ನಾಗರಿಕರಾಗಿರಬೇಕು. ಇನ್ನಿತರ ಹುದ್ದೆಗಳಿಗೆ ಪರೀಕ್ಷೆ ಬರೆಯಲಿಚ್ಛಿಸುವವರು ಕೆಳಗೆ ನೀಡಿರುವ ಯಾವುದಾದರೊಂದು ಕೆಟಗರಿಗೆ ಸೇರಿರಬೇಕು.
-ಭಾರತೀಯ ನಾಗರಿಕರು
-ನೇಪಾಳ ,ಭೂತಾನ್ ನಾಗರಿಕರು
-ಟಿಬೆಟಿಯನ್ ನಿರಾಶ್ರಿತರು (ಜನವರಿ 1, 1962ರ ಮುನ್ನ ಭಾರತಕ್ಕೆ ಬಂದು ನೆಲೆಸಿದವರು)
– ಭಾರತೀಯ ಮೂಲದವರಾಗಿದ್ದು, ಪಾಕಿಸ್ತಾನ, ಬರ್ಮಾ, ಶ್ರೀಲಂಕಾ, ಕೀನ್ಯಾ, ಉಗಾಂಡಾ ಇನ್ನೂ ಕೆಲ ದೇಶಗಳಿಂದ ಭಾರತಕ್ಕೆ ಶಾಶ್ವತವಾಗಿ ನೆಲೆಸಲು ವಲಸೆ ಬಂದವರು ಅರ್ಹರಾಗಿರುತ್ತಾರೆ. ವಯೋಮಿತಿ
ಕನಿಷ್ಠ ವಯೋಮಿತಿ- 21 ವರ್ಷ
ಗರಿಷ್ಠ ವಯೋಮಿತಿ- 32 ವರ್ಷ
ಗರಿಷ್ಠ ವಯೋಮಿತಿಯನ್ನು ಮೀಸಲಾತಿಗೆ ಒಳಪಟ್ಟ ಅಭ್ಯರ್ಥಿಗಳಿಗೆ ಕೆಳಗಿನಂತೆ ವಿಸ್ತರಿಸಲಾಗಿದೆ.
ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡ- 5 ವರ್ಷಗಳು
ಒಬಿಸಿ- 3 ವರ್ಷಗಳು
ಎಕ್ಸ್ ಸರ್ವಿಸ್‌ಮನ್- 5 ವರ್ಷಗಳು ಶೈಕ್ಷಣಿಕ ಅರ್ಹತೆ
ಅಭ್ಯರ್ಥಿಗಳು ಸರ್ಕಾರದಿಂದ ಮಾನ್ಯತೆ ಪಡೆದ ಯಾವುದೇ ವಿದ್ಯಾಸಂಸ್ಥೆಯಿಂದ, ಯಾವುದೇ ವಿಷಯದಲ್ಲಿ ಪದವಿಯನ್ನು ಪಡೆದಿರತಕ್ಕದ್ದು. ಅವಕಾಶಗಳೆಷ್ಟು?
ಜನರಲ್ ಕೆಟಗರಿಗೆ ಸೇರಿದ ಅಭ್ಯರ್ಥಿ 32 ವರ್ಷ ವಯಸ್ಸಿನವರೆಗೆ, ಗರಿಷ್ಠ ಆರು ಬಾರಿ ಐ.ಎ.ಎಸ್ ಪರೀಕ್ಷೆ ಬರೆಯಬಹುದು.
ಒಬಿಸಿ ಅಭ್ಯರ್ಥಿಗಳು 35 ವರ್ಷ ವಯಸ್ಸಿನವರೆಗೆ ಗರಿಷ್ಠ 9 ಬಾರಿ ಪರೀಕ್ಷೆ ಬರೆಯಬಹುದು
ಪರಿಶಿಷ್ಟ ಜಾತಿ ಹಾಗೂ ಪಂಗಡಕ್ಕೆ ಸೇರಿದ ಅಭ್ಯರ್ಥಿಗಳು 37 ವರ್ಷ ವಯಸ್ಸಿನವರೆಗೆ ಎಷ್ಟು ಬಾರಿ ಬೇಕಾದರೂ ಪರೀಕ್ಷೆಗೆ ಹಾಜರಾಗಬಹುದು. ಪರೀಕ್ಷಾ ಕೇಂದ್ರಗಳು
ಐ.ಎ.ಎಸ್ ಪೂರ್ವಭಾವಿ(ಪ್ರಿಲಿಮಿನರಿ) ಪರೀಕ್ಷೆಯನ್ನು ಭಾರತದ 72 ನಗರಗಳಲ್ಲಿ ನಡೆಸಲಾಗುತ್ತದೆ. ಕರ್ನಾಟಕದಲ್ಲಿ ಬೆಂಗಳೂರು ಮತ್ತು ಧಾರವಾಡ ಪೂರ್ವಭಾವಿ ಪರೀಕ್ಷಾ ಕೇಂದ್ರಗಳಾಗಿದ್ದವು. ಮುಖ್ಯ ಪರೀಕ್ಷೆ (ಮೇನ್ಸ್) ಭಾರತದ 24 ವಿವಿಧ ನಗರಗಳಲ್ಲಿ ನಡೆಯುತ್ತದೆ. ಈ ಕೇಂದ್ರಗಳಲ್ಲಿ ಬೆಂಗಳೂರು ಕೂಡಾ ಒಂದು. ಅಭ್ಯರ್ಥಿಗಳು ತಮಗೆ ಅನುಕೂಲವೆನಿಸಿದ ಪರೀಕ್ಷಾ ಕೇಂದ್ರವನ್ನು ಆಯ್ಕೆ ಮಾಡಬಹುದು. ಆದರೆ ಮಂಜೂರು ಮಾಡುವ ಅಥವಾ ಅದಕ್ಕೆ ಸಮ್ಮತಿ ಸೂಚಿಸುವ ಅಧಿಕಾರ ಯು.ಪಿ.ಎಸ್.ಸಿ ಆಯೋಗಕ್ಕಿರುತ್ತದೆ. ಅರ್ಚನಾ ಎಚ್.