Advertisement

40 ಪರ್ಸೆಂಟ್‌ ಸರ್ಕಾರ ಎಂಬುದನ್ನು ಒಪ್ಪಿಕೊಳ್ಳುವಿರಾ ?

09:14 PM Nov 25, 2022 | Team Udayavani |

ಬೆಂಗಳೂರು: ಇಂಧನ ಇಲಾಖೆಯ ಕಮಿಷನ್‌ ವ್ಯವಹಾರದ ಬಗ್ಗೆ ಈಗ ಲೋಕಾಯುಕ್ತದಲ್ಲಿ ದೂರು ದಾಖಲಾಗಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೇ ಈಗಲಾದರೂ ನಿಮ್ಮದು 40 ಪರ್ಸೆಂಟ್‌ ಸರ್ಕಾರ ಎಂಬುವುದನ್ನು ಒಪ್ಪಿಕೊಳ್ಳುವಿರಾ ಎಂದು ಕಾಂಗ್ರೆಸ್‌ ಟ್ವಿಟರ್‌ನಲ್ಲಿ ಕೆಣಕಿದೆ.

Advertisement

ಈ ಬಗ್ಗೆ ಸರಣಿ ಟ್ವಿಟ್‌ ಮಾಡಿರುವ ಕಾಂಗ್ರೆಸ್‌ “ಎಲ್ಲಿದೆ ಕಮಿಷನ್‌, ದಾಖಲೆ ಕೊಡಿ” ಇದು ಕರ್ನಾಟಕ ಬಿಜೆಪಿ ಪಕ್ಷದ ಪಕ್ಷದ ಬಂಡತನದ ಮಾತುಗಳಾಗಿದ್ದವು. ಮಾನ್ಯ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೇ ಎಲ್ಲಾ ಕಮಿಷನ್‌ ಆರೋಪಗಳನ್ನೂ ತನಿಖೆಗೆ ವಹಿಸುವಿರಾ ಎಂದು ಪ್ರಶ್ನಿಸಿದೆ.

ಬಿಜೆಪಿ ರಾಜ್ಯಾಧ್ಯಕ್ಷ ನಳಿಕುಮಾರ್‌ ಕಟೀಲ್‌ ವಿರುದ್ದವೂ ವಾಗ್ಧಾಳಿ ನಡೆಸಿರುವ ಕಾಂಗ್ರೆಸ್‌, ಮಂಗಳೂರಿನ ಸೂರತ್ಕಲ್‌ ಟೋಲ್‌ ಗೇಟ್‌ ಸಂಗ್ರಹ ಕೇಂದ್ರ ರದ್ದಾಗಿದ್ದು ನಮ್ಮ ಮನವಿ ಸ್ಪಂದಿಸಿದ ಕೇಂದ್ರ ಸಚಿವ ಗಡ್ಕರಿ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರಿಗೆ ನಾಗರಿಕರ ಪರವಾಗಿ ಧನ್ಯವಾದ ಹೇಳಿದ್ದೀರಿ. ಮಾನ್ಯ ಕಟೀಲು ಅವರೇ, ಯಾವುದಕ್ಕೆ ಈ ಧನ್ಯವಾದ. ಜನರಿಗೆ ಮಂಕುಬೂದಿ ಎರಚಲು ಸಹಕರಿಸಿದ್ದಕ್ಕಾ? ದ್ರೋಹ ಎಸಗಿದ್ದಕ್ಕಾ? ಟೋಲ್‌ ಸಂಗ್ರಹವನ್ನು ನಾಲ್ಕು ಕಿ.ಮಿ ದೂರಕ್ಕೆ ವರ್ಗಾಯಿಸಿದ್ದಕ್ಕಾ ಎಂದು ವಾಗ್ಧಾಳಿ ನಡೆಸಿದೆ.

ಸುರತ್ಕಲ್ ಟೋಲ್‌ ರದ್ದು ಎನ್ನುವುದು ಬಿಜೆಪಿಯ ಶತಮಾನದ ಜೋಕ್ಸ್‌ ಎಂದು ಲೇವಡಿ ಮಾಡಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next