Advertisement
ಬಾಡಿ ಚೆಕ್ಕಾರಿನ ಬಾಡಿ ಪರೀಕ್ಷೆ ಮುಖ್ಯ. ಇದಕ್ಕಾಗಿ ಇಡೀ ಕಾರನ್ನು ಸೂಕ್ಷ್ಮವಾಗಿ ಪರಿಶೀಲನೆ ಮಾಡಬೇಕು. ಬಂಪರ್ ಮತ್ತು ಬಾಡಿ ಕಲರ್ ಒಂದೇ ಇದೆಯೇ, ಬದಿಗಳು ಒಂದೇ ರೀತಿ ಇವೆಯೇ? ಡೋರ್‌ಗಳು ಚೆನ್ನಾಗಿ ಹಾಕಿ-ತೆಗೆಯಲು ಸಾಧ್ಯವಾಗುತ್ತದೆಯೇ ಪರಿಶೀಲಿಸಿ. ಕಾರಿನ ತಳಭಾಗದ ವೆಲ್ಡಿಂಗ್, ಎಕ್ಸಾಸ್ಟ್ ಪೈಪ್‌ಗ್ಳನ್ನೂ ಪರಿಶೀಲಿಸುವುದು ಉತ್ತಮ. ಎಂಜಿನ್ ಬೇ ತೆರೆದು ನೋಡಬೇಕು. ಈ ಮೂಲಕ ಕಾರು ಯಾವುದೇ ಅಪಘಾತ, ರೀಪೈಂಟ್ ಆಗಿದೆಯೇ ಇಲ್ಲವೇ ಎಂಬುದನ್ನು ಖಚಿತಪಡಿಸಿಕೊಳ್ಳಬಹುದು.
ಕಾರು ಹೆಚ್ಚು ಬಳಕೆಯಾಗಿದ್ದರೆ ರಬ್ಬರ್ ಬಿಡಿಭಾಗಗಳು ಸವೆದಿರುತ್ತವೆ. ಉದಾ: ಡೋರ್‌ನ ಬೀಡಿಂಗ್‌ಗಳು ಕಿರಿದಾಗಿ ಶಬ್ದ ಮತ್ತು ಸಸ್ಪೆನÒನ್ ಬುಶ್‌ಗಳು ಸವೆದು ಟಯರ್ ಹೊಂಡ-ಗುಂಡಿಗೆ ಬಿದ್ದಾಗ ಶಬ್ದ ಬರಬಹುದು. ಹಾಗೆಯೇ ವಿವಿಧ ರಬ್ಬರ್ ಭಾಗಗಳು ಸವೆದಿದ್ದರೆ ಅದರ ಅನುಭವ ಡ್ರೈವಿಂಗ್ ವೇಳೆ ಆಗತ್ತದೆ. ಕಾರಿನ ಟಯರ್ ಕೂಡ ಪರಿಶೀಲನೆ ಉತ್ತಮ. ಟಯರ್‌ಗಳು ಒಂದೇ ರೀತಿ ಸವೆದಿದೆಯೇ? ಸ್ಟೆಪ್ನಿ ಟಯರ್ ಹೇಗಿದೆ? ಒಂದು ವೇಳೆ ಕಾರು ಬಳಕೆಯೇ ಮಾಡುತ್ತಿಲ್ಲ ಎಂದಾದರೆ ಅದರ ಟಯರ್ ಕಾಂಪೌಂಡ್ ಬಿರುಕು ಬಿಟ್ಟಿರುವುದೂ ಕಾಣಿಸುತ್ತದೆ. ಸರ್ವೀಸ್ ಹಿಸ್ಟರಿ
ಕಾರಿನ ಅಧಿಕೃತ ಡೀಲರ್ ಬಳಿ ಸರ್ವೀಸ್ ಮಾಡಿಸುತ್ತಿದ್ದೀರಾ ಎಂದು ಕೇಳಿಕೊಳ್ಳಬೇಕು. ಹೌದು ಎಂದಾಗಿದ್ದರೆ, ಕಾರು ಸರ್ವೀಸ್ ಮಾಡಿಸಿದ ಹಿಂದಿನ ವಿವರಗಳು ಲಭ್ಯ. ಇದರಿಂದ ಕಾರು ಸುಸ್ಥಿತಿಯಲ್ಲಿತ್ತು, ಅಥವಾ ನಿಗದಿತವಾಗಿ ಸರ್ವೀಸ್ ಆಗುತ್ತಿತ್ತು, ಇತ್ತೀಚೆಗೂ ಸರ್ವೀಸ್ ಆಗಿದೆ ಎಂಬ ವಿವರಗಳು ನಿಮಗೆ ಸಿಗುತ್ತದೆ.
Related Articles
ಕಾರಿನ ಪ್ರತಿ ಎಲೆಕ್ಟ್ರಿಕಲ್ ವಸ್ತುಗಳನ್ನೂ ಪರಿಶೀಲಿಸಿ. ಹಾರರ್ನ್, ಲೈಟ್‌ಗಳು, ಪಾರ್ಕಿಂಗ್ ಲೈಟ್, ರಿವರ್ಸ್ ಲೈಟ್, ಬ್ರೇಕ್‌ಲೈಟ್‌ಗಳು ಉರಿಯುತ್ತವೆಯೇ ನೋಡಿ. ಕಾರಿನ ಎಂಜಿನ್ ಬೇ ಒಳಗೆ ವಯರ್‌ಗಳು ಸುಸ್ಥಿತಿಯಲ್ಲಿವೆಯೇ ಪರಿಶೀಲಿಸಿ. ವೈಪರ್, ಪವರ್ ವಿಂಡೋ, ಆಡಿಯೋ ಸಿಸ್ಟಂ, ಸೆನ್ಸರ್‌ಗಳು ಸರಿಯಾಗಿವೆಯೇ ಎಂಬುದನ್ನೂ ನೋಡಿ.
Advertisement
ದಾಖಲೆಗಳ ಬಗ್ಗೆಎಲ್ಲ ದಾಖಲೆಗಳು ಇವೆಯೇ ಎಂಬುದನ್ನೂ ನೋಡಬೇಕು. ಇನ್ಸುರೆನ್ಸ್, ರಿಜಿಸ್ಟ್ರೇಷನ್ ಯಾರ ಹೆಸರಲ್ಲಿದೆ? ನಂಬರ್ (ರಿಜಿಸ್ಟ್ರೇಷನ್ ಪರಿಶೀಲನೆಗೆ ನಂಬರ್ ಹಾಕಿ ಆನ್‌ಲೈನ್‌ನಲ್ಲೂ ನೋಡಬಹುದು) ಅಪಘಾತದ ಬಗ್ಗೆ ಸಂಶಯವಿದ್ದರೆ, ಇನುÏರೆನ್ಸ್ ಕಂಪೆನಿಯವರ ಬಳಿಯೂ ಕೇಳಬಹುದು. ನೋ ಕ್ಲೇಮ್ ಬೋನಸ್ ಸಿಗುತ್ತಿರುವ ಬಗ್ಗೆ ಇನ್ಸೂರೆನ್ಸ್ ನೋಡಿ ಖಚಿತಪಡಿಸಿಕೊಳ್ಳಬಹುದು. - ಈಶ