Advertisement

ಚಿಂತೆ ಬಿಡಿ, ಭಗವಂತನ ಚಿಂತನೆ ಮಾಡಿ: ಪರಮಾರೂಢ ಶ್ರೀ

03:02 PM Jun 28, 2017 | |

ಹುಬ್ಬಳ್ಳಿ: ಸುಖ-ದುಃಖ ಚಿಂತಿಸಿದರೆ ಫ‌ಲವೇನು, ಅದರ ಬದಲಾಗಿ ಭಗವಂತನ ಚಿಂತನೆ ಮಾಡಿದರೆ ದೇವರ ಅನುಗ್ರಹವಾದರೂ ಸಿಕ್ಕೀತು ಎಂದು ಬಾಗಲಕೋಟೆ ರಾಮಾರೂಢಮಠದ ಶ್ರೀ ಪರಮಾರೂಢ ಸ್ವಾಮೀಜಿ ಹೇಳಿದರು. ಇಲ್ಲಿನ ಶ್ರೀ ಸಿದ್ಧಾರೂಢಸ್ವಾಮಿ ಮಠದಲ್ಲಿ ಮಂಗಳವಾರದಿಂದ ಆರಂಭಗೊಂಡ 11ನೇ ವರ್ಷದ ಭಗವತ್‌ಚಿಂತನ ಸಾಧನಾ ಶಿಬಿರದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು. 

Advertisement

ಜೀವನದಲ್ಲಿ ಚಿಂತೆ ಮಾಡಿದರೆ ಯಾವುದೇ ಫ‌ಲವಿಲ್ಲ. ಮನಸ್ಸಿಗೆ ಘಾಸಿಯಾಗುವುದು ಬಿಟ್ಟರೆ ಮತ್ತೇನು ಸಿಗುವುದಿಲ್ಲ. ಸಮಯ ವ್ಯರ್ಥ ಮಾಡದೆ ಭಗವಂತನ ಚಿಂತನೆ ಮಾಡಿ ಮನಸ್ಸನ್ನು ಶುದ್ಧೀಕರಿಸಿಕೊಳ್ಳಬೇಕು. ಯಾವುದೇ ಕೆಲಸ ಆರಂಭಿಸುವ ಮುನ್ನ ಅದನ್ನು ಪೂರ್ತಿ ಮಾಡುತ್ತೇವೆ, ಗುರಿ ಮುಟ್ಟುವವರೆಗೂ ನಿಲ್ಲಿಸುವುದಿಲ್ಲ ಎಂಬಂತಿದ್ದರೆ ಮಾತ್ರ ಆ ಕುರಿತು ಚಿಂತನೆ ಮಾಡಿ ಮುನ್ನುಗ್ಗಬೇಕು ಎಂದರು. 

ಹುಬ್ಬಳ್ಳಿ ನಾಶಿಕಶರಣಪ್ಪ ಮಠದ ಶ್ರೀ ವಾಸುದೇವಾನಂದ ಸ್ವಾಮೀಜಿ ಮಾತನಾಡಿ, ಇಂದು ಭಗವಂತನ ಚಿಂತನೆ ಮಾಡುವವರ ಸಂಖ್ಯೆ ತುಂಬಾ ವಿರಳ. ಅನೇಕರಿಗೆ ಸಂಸಾರದ ಚಿಂತೆ, ಸಮಾಜದ ಚಿಂತೆ ಮಾಡಲು ಸಮಯಾವಕಾಶವಿರುವುದಿಲ್ಲ. ಇನ್ನು ಭಗವಂತನ ಚಿಂತನೆ ಮಾಡುವುದೆಲ್ಲಿ. 

ಆದ್ದರಿಂದ ಎಲ್ಲರೂ ಆ ಭಗವಂತನ ಚಿಂತನೆ ಮಾಡುವ ಮೂಲಕ ಮನಸ್ಸು ಹಾಗೂ ಬುದ್ಧಿ ಶುದ್ಧೀಕರಿಸಿಕೊಳ್ಳಬೇಕು ಎಂದು ಹೇಳಿದರು. ಶ್ರೀ ಸಚ್ಚಿದಾನಂದ ಸ್ವಾಮೀಜಿ ಮಾತನಾಡಿ, ಸದ್ಗುರು ಶ್ರೀ ಸಿದ್ಧಾರೂಢರಂತಹ ಮಹಾತ್ಮರು ಮತ್ಯಾರು ಇಲ್ಲ. ಸಿದ್ಧಾರೂಢಸ್ವಾಮಿ ಮಠದಲ್ಲಿ ನಿರಂತರ ಜ್ಞಾನ ದಾಸೋಹ, ಅನ್ನದಾಸೋಹ ನಡೆಯುತ್ತಿರುವುದು ಶ್ಲಾಘನೀಯ ಎಂದರು. 

ರಾಜವಿದ್ಯಾಶ್ರಮದ ಶ್ರೀ ಷಡಕ್ಷರಿ ಸ್ವಾಮೀಜಿ ಮಾತನಾಡಿ, ಶ್ರೀಮಠದಲ್ಲಿ ಈ ಹಿಂದೆ ನಡೆದುಕೊಂಡು ಬಂದ ಸಂಗೀತ, ಜ್ಞಾನಾರ್ಜನೆಯಂತಹ ಕಾರ್ಯಕ್ರಮಗಳು ಯಾವುದೇ ಬದಲಾವಣೆಗೆ ಆಸ್ಪದ ನೀಡದೆ ನಿರಂತರವಾಗಿ ನಡೆಯಬೇಕು ಎಂದು ಹೇಳಿದರು. ಕಾಡರಕೊಪ್ಪದ ಶ್ರೀ ದಯಾನಂದ ಸರಸ್ವತಿ ಸ್ವಾಮೀಜಿ, ಇಂಚಲ ಸಾಧುಸಂಸ್ಥಾನಮಠದ ಶ್ರೀ ಶಿವಾನಂದ ಭಾರತಿ ಸ್ವಾಮೀಜಿ ಇನ್ನಿತರರು ಮಾತನಾಡಿದರು. 

Advertisement

ಶ್ರೀಮಠದ ಟ್ರಸ್ಟ್‌ ಚೇರನ್‌ ಧರಣೇಂದ್ರ ಜವಳಿ ಅಧ್ಯಕ್ಷತೆ ವಹಿಸಿದ್ದರು. ಯೋಗಿರಾಜ ಶ್ರೀ ಸದಾಶಿವ ಗುರೂಜಿ, ಶ್ರೀ ಅತ್ಯಾನಂದ ಸ್ವಾಮೀಜಿ, ಶ್ರೀ ರಾಮಾನಂದ ಶ್ರೀಗಳು, ಪ್ರಭುದೇವ ಪಾಟೀಲ, ಶ್ರೀ ಶಶಿಕಲಾ ಮಾತಾಜೀ, ಶ್ರೀ ಸ್ವರೂಪಾನಂದ ಸ್ವಾಮೀಜಿ, ಧರ್ಮದರ್ಶಿಗಳಾದ ಗೀತಾ ಎಸ್‌.ಜಿ. ಜ್ಯೋತಿ ಸಾಲಿಮಠ, ನಾರಾಯಣಪ್ರಸಾದ ಪಾಠಕ, ಬಸವರಾಜ ಕಲ್ಯಾಣಶೆಟ್ಟರ, ನಾರಾಯಣ ನಿರಂಜನ ಇತರರಿದ್ದರು. ಧರ್ಮದರ್ಶಿ ಶಾಮಾನಂದ ಪೂಜೇರಿ ಸ್ವಾಗತಿಸಿದರು. ಶಿವಪುತ್ರಪ್ಪ ಪೂಜಾರ ಪ್ರಾರ್ಥಿಸಿದರು. ಎಸ್‌.ಐ. ಕೋಳಕೋರ ನಿರೂಪಿಸಿದರು.  

Advertisement

Udayavani is now on Telegram. Click here to join our channel and stay updated with the latest news.

Next