Advertisement
ಸೋಮವಾರ ತಾಲೂಕು ಕ್ರೀಡಾಂಗಣದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಅವರು, ಸರ್ವಪಕ್ಷ ನಿಯೋಗದಲ್ಲಿ ತೆರಳಿದಾಗ ಕುಡಿಯಲು ನೀರು ಕೊಡಿ ಎಂದು ಪ್ರಧಾನಿಗೆ ಕೈಮುಗಿದು ಪ್ರಾರ್ಥಿಸಿದೆ. ಆಗ ನಾಡಿನ ಬಿಜೆಪಿ ನಾಯಕರು ತುಟಿ ಪಿಟಕ್ ಎನ್ನಲಿಲ್ಲ. ಕುಡಿವ ನೀರು ಕೇಳಿದರೆ ಅಲ್ಲಿನ ಪ್ರತಿಪಕ್ಷದವರನ್ನು ಒಪ್ಪಿಸಿಕೊಂಡು ಬನ್ನಿ ಎಂದು ಒಕ್ಕೂಟ ವ್ಯವಸ್ಥೆ ಮುಖ್ಯಸ್ಥರಾದ ಪ್ರಧಾನಿಯೊಬ್ಬರು ಹೇಳುವುದು ದೇಶದ ಇತಿಹಾಸದಲ್ಲೇ ಮೊದಲು.ಈಗಾಗಲೇ ನ್ಯಾಯಾಧಿಕರಣದ ಅವ ಧಿ ವಿಸ್ತರಿಸಿ 2018ರ ಆಗಸ್ಟ್‌ನಲ್ಲಿ ಅಂತಿಮತೀರ್ಪು ಕೊಡಬೇಕು ಎಂಬ ತೀರ್ಮಾನ ವಾಗಿದೆ. ಅಲ್ಲಿ ನಮಗೆ ನ್ಯಾಯ ಸಿಗುವ ವಿಶ್ವಾಸವಿದೆ ಎಂದರು.
ನರಗುಂದ: ಕೇಂದ್ರ ಸರ್ಕಾರ ಮತ್ತು ಗೋವಾ, ಮಹಾರಾಷ್ಟ್ರ ಸರ್ಕಾರಗಳಿಗೆ ಹಲವಾರು ಬಾರಿ ಪತ್ರ ಬರೆದರೂ ಯಾವುದೇ ಸ್ಪಂದನೆ ದೊರಕುತ್ತಿಲ್ಲ. ಪ್ರಧಾನಿ ಮಧ್ಯಸ್ಥಿಕೆಯಿಂದ ಮಾತ್ರ ಮಹದಾಯಿ ವಿವಾದ ಬಗೆಹರಿಸಲು ಸಾಧ್ಯ ಎಂದು ಸಿಎಂ ಸಿದ್ದರಾಮಯ್ಯ ಮಹದಾಯಿ ಹೋರಾಟಗಾರರಿಗೆ ಸ್ಪಷ್ಟಪಡಿಸಿದ್ದಾರೆ. ಮನವಿ ಅರ್ಪಣೆ ವೇಳೆ ರೈತರೊಂದಿಗೆ ಮಾತನಾಡಿದ ಅವರು, ಈಗ ಯಡಿಯೂರಪ್ಪನವರು ಒಂದು ತಿಂಗಳೊಳಗೆ ವಿವಾದ ಬಗೆಹರಿಸುವ ಭರವಸೆ ನೀಡಿದ್ದಾರೆ. ಕಾದು ನೋಡೋಣ. ಅವರು ಎಲ್ಲಿ ಕರೆದರೂ ಹೋಗಲು ನಾನು ಸಿದಟಛಿನಿದ್ದೇನೆ. ಪ್ರಧಾನಿ ಮೇಲೆ ಒತ್ತಡ ಹಾಕುವ ಕೆಲಸವನ್ನು ಬಿಜೆಪಿ ನಾಯಕರು ಮಾಡಲಿ ಎಂದರು. ಸಚಿವ ವಿನಯ ಕುಲಕರ್ಣಿ ಬಗ್ಗೆ ಪ್ರತಿಕ್ರಿಯಿಸಿದ ಸಿಎಂ, ಲಿಂಗಾಯತ ಧರ್ಮ ಹೋರಾಟದಲ್ಲಿ ಮುಂಚೂಣಿಯಲ್ಲಿರುವ ವಿನಯ ಕುಲಕರ್ಣಿ ಅವರ ಹೆಸರು ಕೆಡಿಸುವ ಕೆಲಸವನ್ನು ಬಿಜೆಪಿ ಮಾಡುತ್ತಿದೆ ಎಂದು ದೂರಿದರು.
Related Articles
– ಎಂ.ಬಿ. ಪಾಟೀಲ, ಜಲ ಸಂಪನ್ಮೂಲ ಸಚಿವ
Advertisement