Advertisement

Ganesh Chaturthi: ಕರೆಂಟ್‌ ಕಂಬಕ್ಕೆ ಗಣೇಶ ಪೆಂಡಾಲ್‌ ಕಟ್ಟಬೇಡಿ

11:57 AM Sep 05, 2024 | Team Udayavani |

ಬೆಂಗಳೂರು: ಗಣೇಶೋತ್ಸವ ಅಂಗವಾಗಿ ತಾತ್ಕಾಲಿಕ ವಿದ್ಯುತ್‌ ಸಂಪರ್ಕ ಪಡೆಯಲು ಆಯಾ ಉಪ ವಿಭಾಗಾಧಿಕಾರಿಗಳ ನಿಯೋಜಿಸಿರುವ ಬೆಸ್ಕಾಂ ಈ ಸಂಬಂಧ ಗಣೇಶ ಮೂರ್ತಿ ಮೆರವಣಿಗೆ ಹಾಗೂ ವಿಸರ್ಜನೆ ವೇಳೆ ಅನು ಸರಿಸಬೇಕಾದ ಮಾರ್ಗಸೂಚಿ ಹಾಗೂ ಸುರಕ್ಷತಾ ಕ್ರಮಗಳನ್ನು ಬಿಡುಗಡೆಗೊಳಿಸಿದೆ.

Advertisement

ಅದರಂತೆ ವಿದ್ಯುತ್‌ ತಂತಿ, ವಿದ್ಯುತ್‌ ಕಂಬ ಅಥವಾ ಪರಿವರ್ತಕ ಕೇಂದ್ರಗಳಿಗೆ ಚಪ್ಪರ, ಶಾಮಿಯಾನ ಕಟ್ಟುವಂತಿಲ್ಲ. ತೋರಣ, ಪೆಂಡಾಲ್ ಸೀರಿ ಯಲ್‌ ದೀಪ ಹಾಕುವ ಮುನ್ನ ವಿದ್ಯುತ್‌ ತಂತಿಗಳ ಬಗ್ಗೆ ಗಮನ ವಿರಬೇಕು. ಗಣೇಶ ಮೂರ್ತಿ ಮೆರವಣಿಗೆ ಯಲ್ಲಿ ರಸ್ತೆ ಬದಿಯ ವಿದ್ಯುತ್‌ ಮಾರ್ಗಗಳಿದ್ದಲ್ಲಿ ಎಚ್ಚರವಹಿಸಬೇಕು. ಮೆರವಣಿಗೆ ಮಾರ್ಗದ ಬಗ್ಗೆ ಮುಂಚಿತವಾಗಿ ಉಪ ವಿಭಾಗಾಧಿಕಾರಿಗಳಿಗೆ ತಿಳಿಸಿ ಅಗತ್ಯ ನೆರವು ಪಡೆದುಕೊಳ್ಳಬೇಕು. ಸೀರಿಯಲ್‌ ಲೈಟ್‌, ದೀಪಗಳನ್ನು ಅಳ ವಡಿಸು ವಾಗ ವಿದ್ಯುತ್‌ ಕಂಬ ದಿಂದ ಸಂಪರ್ಕ ಪಡೆಯ ಬಾರದು. ವಿದ್ಯುತ್‌ ಪರಿ ಕರಗಳು ಇರುವ ಜಾಗ ವನ್ನು “ಡೇಂಜರ್‌ ಜೋನ್‌’ ಎಂದು ಸೂಚಿಸಲಾಗಿದ್ದು ತುಂಡಾದ ತಂತಿ ಗಳು, ವಿದ್ಯುತ್‌ ಕಿಡಿ ಕಂಡಲ್ಲಿ ಸಹಾಯ ವಾಣಿ 1912 ಸಂಪರ್ಕಿಸುವಂತೆ ತಿಳಿಸಿದೆ. ‌

ಗಣೇಶೋತ್ಸವಕ್ಕೆ ಬೆಳಕು, ದೀಪಾಲಂಕಾರಕ್ಕೆ ಬೆಸ್ಕಾಂ ಸಹ ಕಾರ ನೀಡಲಿದೆ. ಸಾರ್ವಜನಿಕ ಗಣೇತ್ಸವದಲ್ಲಿ ಮೂರ್ತಿ ಪ್ರತಿ ಷ್ಠಾಪನೆ ಮತ್ತು ವಿಸರ್ಜನೆ ವೇಳೆ ಯಾವುದೇ ವಿದ್ಯುತ್‌ ಅವಘಡಗಳಾಗದಂತೆ ಎಚ್ಚರವಹಿಸಿ, ಸುರಕ್ಷತಾ ಕ್ರಮಗಳನ್ನು ಪಾಲಿಸುವಂತೆ ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಮಹಾಂತೇಶ್‌ ಬೀಳಗಿ ಕೋರಿದ್ದಾರೆ.

ಬೆಸ್ಕಾಂ ಸಿಬ್ಬಂದಿ ಅಣಿ: ಗಣೇಶೋತ್ಸವ ಮೆರವಣಿಗೆ ವೇಳೆ ಯಾವುದೇ ರೀತಿಯ ಅವಘಡ ಗಳು ಆಗದಂತೆ ಎಚ್ಚರಿಕೆ ವಹಿಸಲಾಗಿದೆ. ಆ ಹಿನ್ನೆಲೆಯಲ್ಲಿ ಮೆರವಣಿಗೆ ಸಾಗು ವ ಪ್ರದೇಶಗಳಲ್ಲಿ ವಿದ್ಯುತ್‌ ದುರಸ್ತಿ ಕಾರ್ಯ ನಡೆಸುವಂತೆ ಪಾಲಿಕೆ ಮುಖ್ಯ ಆಯು ಕ್ತರು ಬೆಸ್ಕಾಂ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಬೆಸ್ಕಾಂ ಅಧಿಕಾರಿಗಳು ಕೂಡ ವಿದ್ಯುತ್‌ ಸಂಪರ್ಕ ದುರಸ್ತಿ ಸಂಪರ್ಕ ವ್ಯವಸ್ಥೆ  ಸರಿಪಡಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ. ವಿಸರ್ಜನೆ ವೇಳೆ ಇಲಾವಾರು ಸಿಬ್ಬಂದಿಗೆ ಡ್ರೇಸ್‌ ಕೋಡ್‌ ಧರಿಸುವಂತೆ ಸೂಚನೆ ನೀಡಲಾಗಿದೆ. ಆಯಾ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿ ಇಲಾಖೆ ಪ್ರತಿನಿಧಿಸುವ ಜರ್ಕಿನ್‌, ಟೀಶರ್ಟ್‌ ಧರಿಸುವಂತೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದ್ದಾರೆ.

Advertisement

ಕಲ್ಯಾಣಿಗಳ ಬಳಿ ಪ್ರಥಮ ಚಿಕಿತ್ಸೆಗಾಗಿ ವ್ಯವಸ್ಥೆ ಗಣೇಶ ವಿಸರ್ಜನೆಗಾಗಿ ವಲಯವಾರು ವ್ಯಾಪ್ತಿಯಲ್ಲಿ ನಿರ್ಮಿಸಿರುವ ಕಲ್ಯಾಣಿಗಳಲ್ಲಿ ಮತ್ತು ತಾತ್ಕಾಲಿಕ ಕೊಳಗಳಲ್ಲಿ ಆರೋಗ್ಯ ಸೇವೆ ನೀಡಲು ಬಿಬಿಎಂಪಿ ಆರೋಗ್ಯವಿಭಾಗವು ತಜ್ಞ ವೈದ್ಯಕೀಯ ಸಿಬ್ಬಂದಿಯೊಂದಿಗೆ ಸಿದ್ಧವಾಗುತ್ತಿದೆ. ಸಣ್ಣ ಪುಟ್ಟ ಗಾಯಗಳು ಸೇರಿದಂತೆ ಇನ್ನಿತರ ವೈದ್ಯಕೀಯ ಆರೈಕೆಗಳನ್ನು ನೀಡಲಾಗುವುದು. ಎಲ್ಲ ಕಲ್ಯಾಣಿಗಳ ಬಳಿಯೂ ಪ್ರಾಥಮಿಕ ಚಿಕಿತ್ಸೆ ನೀಡಲು ಅಗತ್ಯ ಸಿಬ್ಬಂದಿ ಹಾಗೂ ವೈದ್ಯಕೀಯ ಸೇವೆ ವ್ಯವಸ್ಥೆಗೊಳಿಸಲಾಗುತ್ತದೆ. ಆಯಾ ವಲಯದಲ್ಲಿ ವಿಸರ್ಜನೆಯಾಗುವ ಗಣೇಶ ಮೂರ್ತಿ ಹಾಗೂ ಸಾರ್ವಜನಿಕರ ಸಂಖ್ಯೆಯ ಆಧಾರದ ಮೇಲೆ ಅಗತ್ಯಬಿದ್ದರೆ ಹೆಚ್ಚಿನ ಆ್ಯಂಬುಲೆನ್ಸ್‌ ಹಾಗೂ ವೈದ್ಯಕೀಯ ಸಿಬ್ಬಂದಿಯನ್ನು ನಿಯುಕ್ತಿಗೊಳಿಸಲಾಗುತ್ತದೆ ಎಂದು ಬಿಬಿಎಂಪಿ ಮುಖ್ಯ ಆರೋಗ್ಯಾಧಿಕಾರಿ ಡಾ.ಸೈಯದ್‌ ಸಿರಾಜುದ್ದೀನ್‌ ತಿಳಿಸಿದ್ದಾರೆ.

ಗಣೇಶೋತ್ಸವಕ್ಕೆ ಪಾಲಿಕೆ ಎಲ್ಲ ರೀತಿಯಲ್ಲೂ ಸಿದ್ಧವಾಗಿದೆ. ಖರ್ಚು ವೆಚ್ಚಗಳಿಗಾಗಿ ಸುಮಾರು 7 ಕೋಟಿ ರೂ.ಹಣವನ್ನು ಮೀಸಲಿಡಲಾಗಿದೆ. ಯಾವುದೇ ಅಹಿತಕರ ಘಟನೆ ನಡೆಯದ ರೀತಿಯಲ್ಲಿ ಎಚ್ಚರಿಕೆ ವಹಿಸಲಾಗಿದೆ. ವಲಯವಾರು ನೋಡೆಲ್‌ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ. ತುಷಾರ್‌ ಗಿರಿನಾಥ್‌, ಬಿಬಿಎಂಪಿ ಮುಖ್ಯ ಆಯುಕ ಎಕ್ಸ್‌ಪ್ರೆಸ್‌ ವೇನಲ್ಲಿ  ತಗ್ಗಿದ ಸಾವಿನ ಪ್ರಮಾಣ

Advertisement

Udayavani is now on Telegram. Click here to join our channel and stay updated with the latest news.

Next