ಸೇಡಂ: ಚಿತ್ತಾಪುರದಲ್ಲಿ ಬಸವೇಶ್ವರ ಪುತ್ಥಳಿಗೆ ಉದ್ದೇಶಪೂರ್ವಕವಾಗಿಯೇ ಅವಮಾನ ಮಾಡಿದ್ದಾರೆ. ಈ ಘಟನೆ ಹಿಂದೆ ಪಿತೂರಿ ಮಾಡಿದ ಕಿಡಿಗೇಡಿಗಳನ್ನು ಶೀಘ್ರವೇ ಬಂಧಿ ಸಿ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಹಾಲಪ್ಪಯ್ಯ ವಿರಕ್ತ ಮಠದ ಶ್ರೀ ಪಂಚಾಕ್ಷರಿ ಸ್ವಾಮೀಜಿ ಒತ್ತಾಯಿಸಿದರು.
ಚಿತ್ತಾಪುರ ಪಟ್ಟಣದಲ್ಲಿ ವಿಶ್ವಗುರು ಬಸವೇಶ್ವರರಿಗೆ ಅವಮಾನ ಮಾಡಿರುವುದನ್ನು ಖಂಡಿಸಿ ಅಖಿಲ ಭಾರತ ವೀರಶೈವ ಮಹಾಸಭಾದಿಂದ ಹಮ್ಮಿಕೊಂಡಿದ್ದ ಬೃಹತ್ ಪ್ರತಿಭಟನೆಯಲ್ಲಿ ಭಾಗಿಯಾಗಿ ಮುಖ್ಯಮಂತ್ರಿಗೆ ಬರೆದ ಮನವಿ ಪತ್ರವನ್ನು ಸಹಾಯಕ ಆಯುಕ್ತರ ಕಚೇರಿಯಲ್ಲಿ ತಹಶೀಲ್ದಾರ್ ಬಸವರಾಜ ಬೆಣ್ಣೆಶಿರೂರ ಅವರಿಗೆ ಸಲ್ಲಿಸಿ ಅವರು ಮಾತನಾಡಿದರು.
ಘಟನೆಗೆ ಸಂಬಂಧಿಸಿದಂತೆ ಕೇವಲ ಒಬ್ಬರನ್ನು ಮಾತ್ರ ಬಂ ಧಿಸಲಾಗಿದೆ. ಈತ ಮಾನಸಿಕ ಅಸ್ವಸ್ಥ ಎಂದು ಹೇಳುತ್ತಿದ್ದಾರೆ. ಮಾನಸಿಕ ಅಸ್ವಸ್ಥನಾಗಿದ್ದರೆ ಬಸವೇಶ್ವರ ಮೂರ್ತಿಗೆ ಕಪ್ಪು ಮತ್ತು ಕೆಂಪು ಬಟ್ಟೆ ಯಾಕೆ ಕಟ್ಟಿದ್ದಾನೆ ಎಂದು ಪ್ರಶ್ನಿಸಿದರು. ಇದರ ಹಿಂದೆ ಷಡ್ಯಂತ್ರ ನಡೆದಿದ್ದು ಆತನನ್ನು ಪೊಲೀಸರು ಸರಿಯಾದ ರೀತಿಯಲ್ಲಿ ವಿಚಾರಣೆ ನಡೆಸಿದರೆ ಸತ್ಯ ಹೊರಗೆ ಬರುತ್ತದೆ ಎಂದರು.
ಕೊತ್ತಲಬಸವೇಶ್ವರ ದೇವಾಲಯದ ಶ್ರೀ ಸದಾಶಿವ ಮಹಾ ಸ್ವಾಮೀಜಿ ಮಾತನಾಡಿ, ಉದ್ದೇಶ ಪೂರ್ವಕವಾಗಿಯೇ ಬಸವಣ್ಣನ ಮೂರ್ತಿಗೆ ಅವಮಾನ ಮಾಡಲಾಗಿದೆ. ಇದರಿಂದ ಅಸಂಖ್ಯಾತ ವೀರಶೈವ ಲಿಂಗಾಯಿತ ಮತ್ತು ಬಸವ ಅನುಯಾಯಿಗಳಿಗೆ ನೋವಾಗಿದೆ. ಸಮಾಜದ ಜನರು ಅತ್ಯಂತ ಶಾಂತ ಸ್ವಭಾವದವರಾಗಿದ್ದಾರೆ.
Related Articles
ಅವರ ತಾಳ್ಮೆ ಪರೀಕ್ಷೆ ಮಾಡುವುದು ಸರಿಯಲ್ಲ. ಒಂದೊಮ್ಮೆ ಸಿಡಿದು ನಿಂತರೆ ಅದರ ಪರಿಣಾಮ ತುಂಬಾ ಭಯಾನಕವಾಗಿರುತ್ತದೆ. ಅಧಿಕಾರಿಗಳು ಆರೋಪಿ ಅಸ್ವಸ್ಥನೆಂದು ದಾರಿ ತಪ್ಪಿಸುವ ಕೆಲಸ ಮಾಡಬಾರದು. ಇದರ ಹಿಂದಿರುವವರನ್ನು ಪತ್ತೆ ಹಚ್ಚುವ ಕೆಲಸ ಮಾಡಬೇಕು ಎಂದು ಎಚ್ಚರಿಸಿದರು. ತೋಟ್ನಳ್ಳಿಯ ಶ್ರೀ ಡಾ| ತ್ರಿಮೂರ್ತಿ ಶಿವಾಚಾರ್ಯರು ಮಾತನಾಡಿ, ಬಸವಣ್ಣಸಮಾನತೆ ಮತ್ತು ಸಕಲ ಜೀವಾತ್ಮರ ಕಲ್ಯಾಣ ಬಯಸಿದ್ದಾರೆ. ಇಂತಹ ಮಹಾನ್ ದಾರ್ಶನಿಕನಿಗೆ ಅವಮಾನ ಮಾಡಿದ್ದು ಸರಿಯಲ್ಲ. ಪಿತೂರಿ ಹಿಂದಿರುವವರ ಹೆಡೆಮುರಿ ಕಟ್ಟುವ ಕೆಲಸವನ್ನು ಸರ್ಕಾರ ಮಾಡಬೇಕು ಎಂದರು.
ದಿಗ್ಗಾಂವ ಹಿರೇಮಠ ಸಂಸ್ಥಾನದ ಶ್ರೀ ಸಿದ್ಧವೀರ ಶಿವಾಚಾರ್ಯರು, ಟೆಂಗಳಿಯ ಡಾ| ಶಾಂತಸೋಮನಾಥ ಶಿವಾಚಾರ್ಯರು, ಮಳಖೇಡದ ಕೊಟ್ಟುರೇಶ್ವರ ಮಹಾಸ್ವಾಮೀಜಿ, ಅಖಿಲ ಭಾರತ ವೀರಶೈವ ಮಹಾಸಭಾದ ತಾಲೂಕಾಧ್ಯಕ್ಷ ಚಂದ್ರಶೆಟ್ಟಿ ಬಂಗಾರ, ಪ್ರಮುಖರಾದ ಶಿವಕುಮಾರ ಪಾಟೀಲ (ಜಿಕೆ) ತೇಲ್ಕೂರ, ಮುರಿಗೆಪ್ಪ ಕೋಳಕೂರ, ರಾಜಶೇಖರ ನಿಲಂಗಿ, ಬಸವರಾಜ ಪಾಟೀಲ ಊಡಗಿ, ನಾಗಯ್ಯಸ್ವಾಮಿ ಬೊಮ್ನಳ್ಳಿ, ಎಪಿಎಂಸಿ ಅಧ್ಯಕ್ಷ ಹೇಮರೆಡ್ಡಿ ಪಾಟೀಲ, ರವಿ ಸಾಹು ತಂಬಾಕೆ, ಶಿವಕುಮಾರ ಬೊಳಶೆಟ್ಟಿ, ಶಿವಾನಂದ ಸ್ವಾಮಿ, ಬಸವಪ್ರಭು ಪಾಗಾ, ವಿರೇಂದ್ರ ರುದೂರ, ಶಂಕ್ರಪ್ಪ ಸಜ್ಜನಶೆಟ್ಟಿ, ಸಂಗಮೇಶ್ವರ ಇಂಜಳ್ಳಿ, ಮಲ್ಲಮ್ಮ ಪತ್ರಿ, ಶಾಂತವೀರ ಗೋಣಿ, ಆಕಾಶ ಬಿರಾದಾರ, ಶರಣು ತವದಿ, ಅನೀಲಕುಮಾರ ಊಡಗಿ, ಶಿವಲಿಂಗಪ್ಪ, ಸಿದ್ಧು ಶೆಟ್ಟಿ, ಶಿವರುದ್ರಪ್ಪ, ಶ್ರೀಮಂತ ಆವಂಟಿ, ಸುನೀಲಕುಮಾರ ನಿರ್ಣಿ, ಉಮೇಶ ಪಾಟೀಲ ಯಾಕಾಪುರ, ಶಿವರಾಜ ಕೇರಿ, ವಿರೇಶ ನಿಲಂಗಿ, ಸಂಪತ ಬಾಂಜಿ, ವೆಂಕಟೇಶ ಪಾಟೀಲ, ಬಸವರಾಜ ರಾಯಕೋಡ, ಬಸವರಾಜ ಕೋಸಗಿ, ರಾಜು ಕೋಸಗಿ, ಆನಂದ ಪತ್ರಿ, ಜಗದೀಶ ಯಾಲಕ್ಕಿ, ಲಕ್ಷ್ಮೀಕಾಂತ ತೊಟ್ನಳ್ಳಿ, ಬಾಲರಾಜ ಕೊಡಸಾ, ವಿರೇಶ
ನೀಲಂಗಿ, ಸಿದ್ಧುಗೌಡ ಯಡ್ಡಳ್ಳಿ ಹಾಗೂ ಇನ್ನಿತರರು ಇದ್ದರು.