Advertisement
ಮನೆಯಲ್ಲಿ ಕಸಬರಿಗೆಗಳಿರದೆ, ನೆಲ ಒರೆಸುವ ಮೇಜು, ಟೇಬಲ್, ಊಟದ ಟೇಬಲ್ ಒರೆಸುವ ಬಟ್ಟೆ ತುಂಡುಗಳೇ ಇರದೆ ಯಾರ ಮನೆಯೂ ಇರದು. ಆದರೆ ಈ ಕಸಬರಿಗೆ ಇತ್ಯಾದಿಗಳನ್ನು ಅವುಗಳ ಉಪಯೋಗ ಮುಗಿಯುತ್ತಿದ್ದಂತೆ ಒಂದೆಡೆ ಪೂರ್ತಿಯಾಗಿ ಯಾರಿಗೂ ಕಾಣಿಸದಂತೆ ಮುಚ್ಚಿಡುವುದು ಅವಶ್ಯವಾಗಿದೆ. ಈ ಕಸಬರಿಗೆ ಇತ್ಯಾದಿಗಳು ಮನೆಯೊಳಗೆಡೇ ಇರಲಿ, ಹೊರಗಡೆಯೇ ಇರಲಿ, ಬೇಕಾಬಿಟ್ಟಿಯಾಗಿ ಕಾಣುವಂತೆ ಇರಕೂಡದು.
Related Articles
ವಿಧವಿಧವಾದ ಭಾವನೆಗಳನ್ನು ಹೊಮ್ಮಿಸದು. ಕೇವಲ ಜಿಗುಪ್ಸೆ ಅಷ್ಟೇ, ಇದು ಎಲ್ಲರಿಗೂ ಸ್ವಾಭಾವಿಕ. ಎಲ್ಲರಲ್ಲೂ
ಸ್ವಾಭಾವಿಕ.
Advertisement
ಅಡುಗೆ ಮನೆಯಲ್ಲಿ, ಹೊರ ಜಗುಲಿಯಲ್ಲಿ, ಊಟದ ಕೋಣೆಯಲ್ಲಿ ಕಸಬರಿಗೆಗಳು ಕಾಣುವಂತೆ ಇರಲೇಕೂಡದು. ತಿನ್ನುವ ಅನ್ನ, ತಿನಿಸುಗಳ ವಿಷಯದಲ್ಲಿ ಇವು ಒಂದು ರೀತಿಯ ಅಭಾವವನ್ನು ನಿರ್ಮಿಸುವಲ್ಲಿ ಪ್ರಧಾನ ಪಾತ್ರ ವಹಿಸಿಬಿಡಬಲ್ಲವು. ಒಟ್ಟಿನಲ್ಲಿ ಇಂಥ ಅಭಾವಗಳ ಸೃಷ್ಟಿಗೆ ನಮಗೆ ನಾವೇ ಅವಕಾಶ ಒದಗಿಸಬಾರದು. ಒಂದರ್ಥದಲ್ಲಿ ಮನೆ ಬಾಗಿಲ ಎದುರುಗಡೆ ಕಸಬರಿಗೆ ಇತ್ಯಾದಿಗಳನ್ನು ಮೇಲ್ಮುಖವಾಗಿ ಇಡಿಸುವುದು ದುಷ್ಟ ಹಾಗೂ ಅನಪೇಕ್ಷಿತ ಸ್ಪಂದನಗಳನ್ನು ಮನೆಯೊಳಗಡೆ ಬಂದು ಸೇರುವ ಕ್ರಿಯೆಗೆ ಪೂರಕವಾಗಿ ಒಳಿತಾಗಬಲ್ಲದು. ಆದರೆ ರಾತ್ರಿಯ ಹೊತ್ತು ಮಾತ್ರ ಇದು ಸ್ವಾಗತಾರ್ಹ. ಹಗಲ ಹೆಗಲಿಗೆ ಮಾತ್ರ ಈ ಅನುಬಂಧ ಸಾಹಸ ಬೇಡ.
ಮನೆಯೊಳಗಿನ ಕಸ ಹಾಗೂ ಕೊಳೆಗಳನ್ನು, ಧೂಳು ಹಾಗೂ ಮಣ್ಣನ್ನ ವಿಶೇಷವಾಗಿ ರಾತ್ರಿ ಹೊತ್ತು ಕಸಬರಿಗೆಗಳಿಂದಒತ್ತಿ, ಜಾಡಿಸಿ ಹೊರದೂಡುವಂತೆ ಮಾಡಲೇ ಕೂಡದು. ರಾತ್ರಿಯ ಹೊತ್ತು ಕಸ, ಧೂಳು ಹಾಗೂ ಕೊಳೆಗಳೊಂದಿಗೆ ಕಣ್ತಪ್ಪಿ ಬಿದ್ದ ಅಥವಾ ಬೆಲೆ ಬಾಳುವ ವಸ್ತುಗಳೂ ಹೊರತಳ್ಳಲ್ಪಡುವ ಸಾಧ್ಯತೆ ಇರುವುದರಿಂದ, ರಾತ್ರಿ ಹೊತ್ತು
ಕಸಬರಿಗೆಗಳ ಉಪಯೋಗ ಮಾಡಿದರೆ, ಮನೆಯಲ್ಲಿ ಲಕ್ಷಿ$¾àದೇವಿ ನೆಲೆ ಊರಲಾರಳು ಎಂಬ ನಂಬಿಕೆ ಇದೆ. ಕೆಲವು ವಿಚಾರಗಳು ಆಧುನಿಕತೆಯನ್ನು ಅಣಕಿಸುವಂತಿದ್ದರೂ, ಲಾಗಾಯ್ತಿನಿಂದ ರೂಢಿಯಾಗಿ ಬಂದ ವಿಚಾರಗಳ ಕುರಿತು ಅಲಕ್ಷ್ಯ ಬೇಡ. ವರ್ತಮಾನದ ಆಧುನಿಕ ಬೆಳವಣಿಗೆಗಳು ಮಾನವನ ಎಲ್ಲ ನೋವು ಹಾಗೂ ಕಷ್ಟಗಳನ್ನು
ನೀಗಿಸುವಷ್ಟು ಆಧುನಿಕವಲ್ಲ. ಹೀಗಾಗಿ ಯಾವುದೂ ಹಳೆಯ ವಿಚಾರವಲ್ಲ. ಆಧುನಿಕತೆಗೆ ಪೂರಕವಾಗೇ ಇರುತ್ತವೆ. ಮಾಹಿತಿಗೆ: 8147824707 – ಅನಂತಶಾಸ್ತ್ರಿ