Advertisement

ಅರ್ಜಿ ವಿಲೇವಾರಿಗೆ ನಿರ್ಲಕ್ಷ್ಯ ಬೇಡ

02:21 PM Jun 21, 2019 | Team Udayavani |

ಚನ್ನಪಟ್ಟಣ: ಸಿಎಂ ಜನತಾದರ್ಶನದಲ್ಲಿ ಬಂದಿರುವ ಅರ್ಜಿಗಳನ್ನು 1 ತಿಂಗಳಲ್ಲಿ ವಿಲೇವಾರಿ ಮಾಡಬೇಕೆಂದು ಸೂಚನೆ ನೀಡಿದ್ದು, ಗ್ರಾಪಂ ಅಧಿಕಾರಿಗಳು ನಿರ್ಲಕ್ಷ್ಯ ವಹಿಸದೇ ಕಾಲಮಿತಿಯಲ್ಲಿ ಸಾರ್ವಜನಿಕರ ಕೆಲಸ ಮಾಡಿಕೊಡಬೇಕು ಎಂದು ತಾಪಂ ಇಒ ರಾಮಕೃಷ್ಣ ಸೂಚಿಸಿದರು.

Advertisement

ಪಟ್ಟಣದ ತಾಪಂ ಸಭಾಂಗಣದಲ್ಲಿ ನಡೆದ ತಾಪಂ ಸಾಮಾನ್ಯ ಸಭೆಯಲ್ಲಿ ಮಾತನಾಡಿ, ಕಳೆದ ಬಾರಿ ಸಿಎಂ ರಾಮನಗರದಲ್ಲಿ ಜನಸಂಪರ್ಕ ಸಭೆ ಮಾಡಿದ್ದ ವೇಳೆ ತಾಲೂಕಿನಿಂದ ಕೇವಲ 300 ಅರ್ಜಿಗಳು ಹೋಗಿದ್ದವು. ಆದರೆ, ಈ ಎರಡು ದಿನಗಳಲ್ಲಿ ಸಿಎಂಗೆ ತಾಲೂಕಿನಿಂದ 8 ಸಾವಿರಕ್ಕೂ ಹೆಚ್ಚು ಅರ್ಜಿಗಳು ಸಲ್ಲಿಕೆಯಾಗಿವೆ. ಇವುಗಳಲ್ಲಿ ಪಂಚಾಯ್ತಿಗೆ ಸಂಬಂಧಿಸಿದ ದೂರುಗಳು ಎರಡನೇ ಸ್ಥಾನದಲ್ಲಿವೆ, ಪಂಚಾಯ್ತಿ ಅಧಿಕಾರಿಗಳು ಪ್ರಾಮಾಣಿಕವಾಗಿ ಕೆಲಸ ಮಾಡುವುದಾದರೆ ಮಾಡಿ, ಇಲ್ಲವಾದರೆ ತಾಲೂಕಿನಿಂದ ವರ್ಗ ಮಾಡಿಸಿಕೊಂಡು ಹೋಗಿ ಎಂದು ಕಿಡಿಕಾರಿದರು.

ಪಿಡಿಒಗಳ ಕರ್ತವ್ಯ ಲೋಪ: ಹಲವು ಪಿಡಿಒಗಳು ತಮ್ಮ ಕರ್ತವ್ಯ ಲೋಪದಿಂದ ವರ್ಷಗಟ್ಟಲೇ ಸಾರ್ವಜನಿಕರ ಕೆಲಸ ಮಾಡಿಕೊಡದೆ ಅಲೆಸಿದ್ದಾರೆ. ಇದೀಗ ಸಿಎಂ ಮುಂದೆ ಎಲ್ಲಾ ದಾಖಲೆ ಇಒ ಬಳಿ ಇದೆ ಎಂದು ಸಬೂಬು ಹೇಳಿದ್ದಾರೆ. ನನ್ನ ಬಳಿ ಯಾರು ಏನು ಕೊಟ್ಟಿದ್ದೀರಿ? ಇಲ್ಲಿ ಹೇಳಿ ನೋಡೋಣ ಎಂದು ಕಿಡಿಕಾರಿದರು.

ಕರ್ತವ್ಯ ನಿರ್ವಹಿಸಿಲ್ಲ: ತಾಪಂ ಅಧ್ಯಕ್ಷ ರಾಜಣ್ಣ ಮಾತನಾಡಿ, ಗ್ರಾಪಂಗಳಲ್ಲಿ ಅಧಿಕಾರಿಗಳು ಕೆಲಸ ಮಾಡುತ್ತಿಲ್ಲ ಎನ್ನುವುದು ಸತ್ಯವಾದ ಮಾತು. ಇದನ್ನು ಸಿಎಂ ಎಚ್‌ಡಿಕೆ ಅವರು ಗಮನಿಸಿದ್ದು, ಇದರ ಜೊತೆಗೆ ಅವರು ಜನತಾ ದರ್ಶನ ಮಾಡಿದ ವೇಳೆ ಗ್ರಾಮದಲ್ಲಿನ ಚರಂಡಿಗಳ ಸ್ವಚ್ಛತೆ ಬಗ್ಗೆ ಸಾರ್ವಜನಿಕರು ಕರೆದು ತೋರಿಸಿದ್ದಾರೆ. ಸಿಎಂ ತಾಲೂಕಿನ ಗ್ರಾಮಗಳಿಗೆ ಅದರಲ್ಲೂ ಗ್ರಾಪಂ ವ್ಯಾಪ್ತಿಗೆ ಜನತಾದರ್ಶನ ಮಾಡಲು ಬರುತ್ತಿದ್ದಾರೆ ಎಂದು ತಿಳಿದಿದ್ದರೂ, ನಿಮ್ಮ ಕರ್ತವ್ಯ ನಿರ್ವಹಿಸಿಲ್ಲ ಎಂದರೆ ಉಳಿದ ದಿನಗಳಲ್ಲಿ ನೀವು ಯಾವ ರೀತಿ ನೀವು ಕೆಲಸ ಮಾಡುತ್ತೀರಿ ಎಂದು ತರಾಟೆಗೆ ತೆಗೆದುಕೊಂಡರು.

ರಸ್ತೆ ಬದಿ ಕೋಳಿ ತ್ಯಾಜ್ಯ: ತಾಲೂಕಿನ ಕೂಡ್ಲೂರು ಗ್ರಾಮದ ರಸ್ತೆ ಬದಿ ಅಲ್ಲಲ್ಲಿ ಕೋಳಿ ತ್ಯಾಜ್ಯವನ್ನು ಹಾಕಲಾಗುತ್ತಿದೆ. ಜೊತೆಗೆ ನಗರಸಭೆ ಸಿಬ್ಬಂದಿ ಕಸವನ್ನು ಮೂಟೆಗಳಲ್ಲಿ ರಸ್ತೆಯ ಬದಿಯಲ್ಲಿ ಎಸೆದು ಹೋಗುತ್ತಿದ್ದು, ಇದರಿಂದ ಗ್ರಾಮೀಣ ಭಾಗದಲ್ಲಿ ಗಬ್ಬುನಾರುತ್ತಿದೆ ಎಂದು ಮಳೂರುಪಟ್ಟಣ ತಾಪಂ ಸದಸ್ಯ ಸಿದ್ದರಾಮು ಆರೋಪ ಮಾಡಿದರು.

Advertisement

ಇದಕ್ಕೆ ತಾಪಂ ಅಧ್ಯಕ್ಷ ರಾಜಣ್ಣ, ತಾಲೂಕಿನ ರಾಮಮ್ಮನ ಕೆರೆ ಏರಿಯ ಮೇಲೆ ಸಾರ್ವಜನಿಕರು ವಾಯು ವಿಹಾರ ಮಾಡಲು ಸಾಧ್ಯವಾಗುತ್ತಿಲ್ಲ. ಆ ರೀತಿಯಲ್ಲಿ ಪಟ್ಟಣದ ಕೋಳಿ ಅಂಗಡಿಗಳ ತ್ಯಾಜ್ಯ ಬಂದು ಬೀಳುತ್ತಿದೆ. ಸಿಎಂ ಆ ಮಾರ್ಗದಲ್ಲಿ ಹೋಗುತ್ತಾರೆ ಎಂದು ನಗರಸಭೆಯವರು ಜೆಸಿಬಿಯಿಂದ ಮಣ್ಣನ್ನು ಉಲಾrಪಲ್ಟ ಮಾಡಿದ್ದರು. ಒಂದು ವೇಳೆ ಎಂದಿನಂತೆ ಇದ್ದಿದ್ದರೆ ಸಿಎಂ ಕೇಳುತ್ತಿದ್ದರು. ಈ ಬಗ್ಗೆ ನಗರಸಭೆ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿ ಎಂದು ಹೇಳಿದರು.

ಇದಕ್ಕೆ ಪ್ರತಿಕ್ರಿಯಿಸಿದ ತಾಪಂ ಇಒ ರಾಮಕೃಷ್ಣ, ಈ ಬಗ್ಗೆ ನಗರಸಭೆ ಆಯುಕ್ತರೊಂದಿಗೆ ಮಾತನಾಡುತ್ತೇನೆ ಎಂದರು. ತಾಪಂ ಉಪಾಧ್ಯಕ್ಷೆ ಸಾಕಮಾದಮ್ಮ, ಗ್ರಾಪಂ ಅಧ್ಯಕ್ಷರು, ತಾಲೂಕು ಮಟ್ಟದ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next