Advertisement

ಸಣ್ಣ ಕೈಗಾರಿಕೆಗಳನ್ನು ನಿರ್ಲಕ್ಷಿಸಬೇಡಿ

11:19 PM Mar 03, 2023 | Team Udayavani |

ನರಸಿಂಹಮೂರ್ತಿ, ಅಧ್ಯಕ್ಷರು, ಕಾಸಿಯಾ
ಕೃಷಿ ಹೊರತುಪಡಿಸಿದರೆ, ಅತಿ ಹೆಚ್ಚು ಉದ್ಯೋಗ ಸೃಷ್ಟಿ ಮಾಡುತ್ತಿರುವ ವಲಯ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕೆ. ಆದರೆ, ಉಳಿದೆಲ್ಲ ಕ್ಕಿಂತ ನಿರ್ಲಕ್ಷ್ಯಕ್ಕೊಳಪಟ್ಟ ವಲಯವೂ ಇದೇ ಆಗಿದೆ. ಹಾಗಾಗಿ, ಈ ಸಲ ಯಾರು ನಮಗೆ ಆದ್ಯತೆ ನೀಡುತ್ತಾರೋ, ಅವರನ್ನು ಚುನಾವಣೆಯಲ್ಲಿ ಬೆಂಬಲಿಸುವಂತೆ ಕಾರ್ಮಿಕರಿಗೆ ಸೂಚಿಸಲಾಗು ವುದು. ಈ ಬೆಂಬಲವು ಆಯಾ ರಾಜಕೀಯ ಪಕ್ಷಗಳು ಹೊರ ತರುವ ಪ್ರಣಾಳಿಕೆಯನ್ನು ಅವಲಂಬಿಸಿದೆ.
– ಇದು ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕೆ (ಎಂಎಸ್‌ಎಂಇ)ಗಳ ಸ್ಪಷ್ಟ ನಿಲುವು.

Advertisement

ರಾಜ್ಯದಲ್ಲಿ ಸುಮಾರು 8.5 ಲಕ್ಷ ಎಂಎಸ್‌ಎಂಇಗಳಿದ್ದು, ಸುಮಾರು 25 ಲಕ್ಷ ಕಾರ್ಮಿಕರು ಕಾರ್ಯ ನಿರ್ವಹಿಸುತ್ತಿದ್ದಾರೆ. ಒಂದು ಕುಟುಂಬದಿಂದ 4 ಜನ ಎಂದು ಲೆಕ್ಕಹಾಕಿದರೂ ಎಂಎಸ್‌ಎಂಇ ಹೊಂದಿರುವ ಮತದಾ ರರ ಸಂಖ್ಯೆ ಒಂದು ಕೋಟಿ ಎಂದು ಅಂದಾಜಿಸ ಲಾಗುತ್ತದೆ. ಈ ಪೈಕಿ ಶೇ. 70ರಷ್ಟು ಬೆಂಗಳೂರಿನಲ್ಲೇ ಇವೆ. ರಾಜ್ಯದ ಆಂತರಿಕ ವೃದ್ಧಿ ದರದಲ್ಲಿ ಇವುಗಳ ಪಾಲು ಶೇ. 30ರಷ್ಟಿದೆ. ಈ ಎಲ್ಲ ಅಂಶಗಳಿಂದಾಗಿ ಸಣ್ಣ ಕೈಗಾರಿಕೆಗಳು ಕೆಲವೆಡೆ ನಿರ್ಣಾಯಕ ಪಾತ್ರ ವಹಿಸಲಿವೆ.”ಅತಿ ಹೆಚ್ಚು ಉದ್ಯೋಗ ಸೃಷ್ಟಿ ಮಾಡುತ್ತಿದ್ದರೂ ಈ ಕ್ಷೇತ್ರ ಕಡೆಗಣಿಸಲ್ಪಟ್ಟಿದೆ. ಆದ್ದರಿಂದ ಪ್ರಸಕ್ತ ಚುನಾವಣೆಯಲ್ಲಿ ಸಹಜವಾಗಿ ನಮ್ಮ ವಲಯಕ್ಕೆ ಆದ್ಯತೆ ನೀಡುವವರನ್ನು ಎದುರುನೋಡುತ್ತಿದ್ದೇವೆ. ಪಕ್ಷಗಳಿಂದ ಎಂಎಸ್‌ಎಂಇಗಳು ಮುಖ್ಯವಾಗಿ ಬಯಸುವುದು ಖಾಸಗಿ ಕೈಗಾರಿಕಾ ಪ್ರದೇಶಗಳಿಗೆ ಕನಿಷ್ಠ ಮೂಲಸೌಕರ್ಯ. ನೂತನ ಕೈಗಾರಿಕೆಗಳ ಸ್ಥಾಪನೆಗೆ ಉತ್ತೇಜನ, ವೃತ್ತಿಪರ ತೆರಿಗೆ ತೆರವುಗೊಳಿಸುವುದು ಸೇರಿದಂತೆ ಹಲವು ಭರವಸೆಗಳನ್ನು ನಿರೀಕ್ಷಿಸುತ್ತಿದ್ದೇವೆ’ ಎಂದು ಕಾಸಿಯಾ ಅಧ್ಯಕ್ಷ ನರಸಿಂಹಮೂರ್ತಿ ತಿಳಿಸುತ್ತಾರೆ.

ರಾಜಕೀಯ ಪಕ್ಷಗಳ ಪ್ರಣಾಳಿಕೆಯಲ್ಲಿ ಎಂಎಸ್‌ಎಂಇ ನಿರೀಕ್ಷೆ
ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕಾ ಪ್ರದೇಶಗಳಲ್ಲಿ ನೀರು ಸರಬರಾಜು, ಒಳಚರಂಡಿ ವ್ಯವಸ್ಥೆ ಸೇರಿದಂತೆ ಕನಿಷ್ಠ ಮೂಲಸೌಕರ್ಯಗಳು ಆದ್ಯತೆ ಮೇರೆಗೆ ಕಲ್ಪಿಸುವ ಭರವಸೆ.
ಕೈಗಾರಿಕೆಗೆ ನೀಡಿದ ಜಾಗದ ಲೀಸ್‌ ಅವಧಿ ಮುಗಿದ ನಂತರ ಆ ಜಾಗ ಖರೀದಿಸುವಾಗ ಅದನ್ನು ಲೀಸ್‌ ಅವಧಿಯಲ್ಲಿದ್ದ ದರದಲ್ಲೇ ನೋಂದಣಿಗೆ ಅವಕಾಶ.
ವೃತ್ತಿಪರ ತೆರಿಗೆಯಿಂದ ಸಂಪೂರ್ಣ ವಿನಾಯ್ತಿ.
ರೋಗಗ್ರಸ್ತ ಎಂಎಸ್‌ಎಂಇಗಳನ್ನು ಪುನಃಶ್ಚೇತನಗೊಳಿಸಬೇಕು. ಅಂಕಿ-ಅಂಶಗಳ ಪ್ರಕಾರ ಶೇ. 20ರಷ್ಟು ಕೈಗಾರಿಕೆಗಳು ರೋಗಗ್ರಸ್ತವಾಗಿವೆ.
ಎಂಎಸ್‌ಎಂಇಗೆ ಪ್ರತ್ಯೇಕ ಕೈಗಾರಿಕೆ ನೀತಿ ಮತ್ತು ನಿಧಿ.
ಸಮ್ಮತಿ ಶುಲ್ಕವು ಆ ಕೈಗಾರಿಕೆ ಮೌಲ್ಯ ಆಧರಿಸಿರಬೇಕು.
ಎಂಎಸ್‌ಎಂಇಗಳಿಗಾಗಿ ಸಹಾಯವಾಣಿ ಕೇಂದ್ರ ತೆರೆದು, ಓಂಬುಡ್ಸ್‌ಮನ್‌ ನೇಮಿಸಬೇಕು. ಅಲ್ಲಿ ಸಣ್ಣ ಉದ್ಯಮಿಗಳ ಪ್ರಸ್ತಾವನೆಗೆ ಆರ್ಥಿಕ ನೆರವು ಮತ್ತಿತರ ನೆರವಿಗೆ ಧಾವಿಸುವುದು.
ಬೆಂಗಳೂರು ಆಚೆಗೆ ಕೈಗಾರಿಕೆಗಳ ಸ್ಥಾಪನೆ ಹೆಚ್ಚಿಸಲು ವಿಶೇಷ ಸೌಲಭ್ಯಗಳನ್ನು ಆದ್ಯತೆ ಮೇರೆಗೆ ನಿಗದಿತ ಅವಧಿಯಲ್ಲಿ ಒದಗಿಸುವ ಭರವಸೆ

Advertisement

Udayavani is now on Telegram. Click here to join our channel and stay updated with the latest news.

Next