ನೀನೊಬ್ಬ ಒಲಿದು ನನ್ನ ಕೈ ಹಿಡಿಯೋದಾದ್ರೆ ತಿಂಗಳೇನು, ವರ್ಷ ಪೂರ್ತಿ ಕಾಯ್ತಿನಿ. ಆಮೇಲೆ ಚಂದಿರನಾಣೆಗೂ ನಿನ್ನನ್ನು ನೋಯಿಸಲ್ಲ. ಕೋಪ ಮಾಡ್ಕೊಂಡು ಅಳಲ್ಲ. ಮೊದಲು ನೀನು ಬೆಳೆಯಬೇಕು. ಡಿಗ್ರಿ ಮುಗಿಸಿ ಕೆಲಸಕ್ಕೆ ಸೇರ್ಕೋಬೇಕು. ಆಗ, ನಮ್ಮಪ್ಪನ ಕಣ್ಣಲ್ಲಿ ನಿನ್ನ ಬಗ್ಗೆ ಕಂಡೂ ಕಾಣದಂತೆ ಮೆಚ್ಚುಗೆ ಇಣುಕಬೇಕು.
ಮುದ್ದು ಹುಡುಗಾ,
ನಿನ್ನ ಪತ್ರ ಸಿಕ್ತು. ಸಾರಿ ಕಣೋ, ತಪ್ಪು ನಂದೇ; ನಿಂದಲ್ಲ. ನಿನ್ನನ್ನು ತುಂಬಾ ನೋಯಿಸಿದೆ. ನನ್ನನ್ನ ಇದೊಂದು ಬಾರಿ ಕ್ಷಮಿಸಿಬಿಡೋ ಪ್ಲೀಸ್. ಏನೋ ಪ್ರಾಬ್ಲಿಂ ಆಗಿರುತ್ತೆ, ಅದಕ್ಕೇ ನೀನು ಬರ್ಲಿಲ್ಲ ಅಂತ ನಂಗೆ ಅನ್ನಿಸಿತ್ತು. ಆದರೂ ನಿಂಗೇ ಗೊತ್ತಲ್ವ? ನಾನು ಕೆಟ್ಟ ಹಠಮಾರಿ. ಅದೇ ನೆಪದಲ್ಲಿ ಈ ಬಾರಿ ಕೂಡ ಸತಾಯಿಸಿದೆ. ಈಗಿನ ನನ್ನ ಮಾತು ಕೇಳಿಸ್ಕೋ ರಾಜಾ… ನೀನೊಬ್ಬ ಒಲಿದು ನನ್ನ ಕೈ ಹಿಡಿಯೋದಾದ್ರೆ ತಿಂಗಳೇನು, ವರ್ಷ ಪೂರ್ತಿ ಕಾಯ್ತಿನಿ. ಆಮೇಲೆ ಚಂದಿರನಾಣೆಗೂ ನಿನ್ನನ್ನು ನೋಯಿಸಲ್ಲ. ಕೋಪ ಮಾಡ್ಕೊಂಡು ಅಳಲ್ಲ. ಮೊದಲು ನೀನು ಬೆಳೆಯಬೇಕು. ಡಿಗ್ರಿ ಮುಗಿಸಿ ಕೆಲಸಕ್ಕೆ ಸೇರ್ಕೋಬೇಕು. ಆಗ, ನಮ್ಮಪ್ಪನ ಕಣ್ಣಲ್ಲಿ ನಿನ್ನ ಬಗ್ಗೆ ಕಂಡೂ ಕಾಣದಂತೆ ಮೆಚ್ಚುಗೆ ಇಣುಕಬೇಕು. ಅಮ್ಮನ ಬಿಂಕದಲ್ಲೂ ಪುಟ್ಟ ಹೆಮ್ಮೆ ಕಾಣಬೇಕು. ಅಷ್ಟಾದ ದಿನವೇ ನಾನು ಗರಿಗೆದರಿದ ನವಿಲು.
ಆವಾಗ ನೀನು ಹೆಣ್ಣು ಕೇಳಲು ಬರ್ತೀಯ, ನಿನ್ನ ಹಳೆಯ ಪೋಲಿತನವೆಲ್ಲ ಆಗಿನ ಯಶಸ್ಸಿನ ಎದುರು ಕಾಣೋದೇ ಇಲ್ಲ. ಆಗ ನಿನ್ನನ್ನು ನಿರಾಕರಿಸಲಿಕ್ಕೆ ನಮ್ಮನೇಲಿ ಯಾರಿಗೂ ಕಾರಣವೇ ಸಿಗಲ್ಲ. ಹಾಂ! ನಿಂಗೊತ್ತಾ? ಅಣ್ಣಂಗೆ, ಈಗಾಗ್ಲೆà ನಿನ್ನ ಟ್ಯಾಲೆಂಟ್ ಬಗ್ಗೆ ತಿಳಿದು ಖುಷಿ ಆಗಿದೆ, ನಿನ್ನ ಬೆಳವಣಿಗೆಯ ಬಗ್ಗೆ, ಬದಲಾದ ಆಸಕ್ತಿಗಳ ಬಗ್ಗೆ ಬೆರಗಿದೆ. ಅಪ್ಪಂಗೂ ಆ ಬಗ್ಗೆ ಹೇಳಿ¨ªಾನೆ ಅನ್ಸುತ್ತೆ. ನೀನು ಸಭ್ಯನಾಗಿದ್ದೀಯ ಅಂತ ನಿಧಾನವಾಗಿ ಎಲ್ಲರಿಗೂ ಮನವರಿಕೆ ಆಗ್ತಿದೆ. ಅದಕ್ಕೇ ಇರಬೇಕು ನಂಗೆ ಕಣ್ಗಾವಲು ಸ್ವಲ್ಪ ಕಮ್ಮಿಯಾಗಿದೆ!
ಡಿಯರ್, ನಿನ್ನನ್ನು ಸುಮ್ಮನೆ ನೆನಪಿಸಿಕೊಂಡರೂ ಸಾಕು, ತುಟಿಯ ಮೇಲೆ ತುಂಟ ಕಿರುನಗೆ, ಕೆನ್ನೆ ತುಂಬಾ ಕೆಂಡಸಂಪಿಗೆ! ರಾತ್ರಿ ನಿದ್ದೇಲಿ ಮಗ್ಗುಲಾದಾಗ ಓಲೆ ಸರಿದಾಡುತ್ತೆ. ನೀನೇ ಕೆನ್ನೆ ಸವರಿದಂತೆ ನಾಚುತ್ತೇನೆ. ಹಳದಿ ಸೀರೆ ಉಡುತ್ತಿದ್ದರಂತೂ ಮೈ-ಮನದ ತುಂಬ ನೀನೇ ನೀನು. ಆಗೆಲ್ಲ ಮೊದಲ ಬಾರಿ ಚುಡಾಯಿಸಿ ಕಣ್ಣು ಹೊಡೆದ್ಯಲ್ಲ; ಅದು ನೆನಪಾಗುತ್ತೆ. ಹಿಂದೇನೇ ದೊಡ್ಡ ಖುಷಿಯಾಗುತ್ತೆ.
ಗೊತ್ತಾ ನಿನಗೆ? ಅಕ್ಕ-ಭಾವ ನಂಗೇ ಸಪೋರ್ಟ್ ಮಾಡ್ತಿದಾರೆ. ಹಾಗಾಗಿ ಹುಡುಗಿ ಕೈ ತಪ್ಪಿ ಹೋಗ್ತಾಳೆ ಅನ್ನುವ ಚಿಂತೆ ಬೇಡ ನಿನಗೆ. ನಾನಿನ್ನೂ ಡಿಗ್ರಿ ಸೆಕೆಂಡ್ ಇಯರ್‌ನಲ್ಲಿ ಇರೋದು. ಡಿಗ್ರಿ ಮುಗಿದ ಮೇಲೇನೆ ಮದುವೆ ಆಗೋದು ಅಂತ ಮನೆಯಲ್ಲಿ ಖಡಕ್ ಆಗಿ ಹೇಳಿಬಿಟ್ಟಿದ್ದೇನೆ. ಇದೇ ಮಾತನ್ನು ನನ್ನ ಮನಸ್ಸಿಗೂ ಹೇಳಿಕೊಂಡಿದ್ದೇನೆ. ಭವಿಷ್ಯದ ಕುರಿತು ನಾನು ಸದ್ಯಕ್ಕೆ ಇಷ್ಟೇ ಯೋಚಿಸಿರೋದು. ಅರ್ಥ ಆಯ್ತಾ?
ನಮ್ಮದೇ ಹೊಸಬದುಕು ಆರಂಭ ಆದಮೇಲೆ ನಿಂಗೆ ನಾನೇ ಬಾಸ್. ಅತ್ತೆ, ಮಾವರಿಗೆ ಮಾತ್ರ ನಾನು ವಿಧೇಯ ಸೊಸೆ. ಬೆಳಗಿನ ತಿಂಡಿಯೆಲ್ಲ ಅವರ ಜತೆ. ಸಾಯಂಕಾಲ ಪಾನಿಪೂರಿಗೆ ನಿನ¤ಂಗಿಗೆ ಕಂಪನಿ. ಎರಡು ದಿನಕ್ಕೊಮ್ಮೆ ನಿನ್ನ ಜೊತೆ ತಪ್ಪದೇ ಜಗಳ ಆಡ್ತೇನೆ ನಿಜ. ಆದ್ರೆ ನಿಂಗೊಂಚೂರೂ ಕಷ್ಟ ಆಗದಂತೆ ನೋಡ್ಕೊತೀನಿ. ಅಷ್ಟೆಲ್ಲ ಆದರೂ ನೀ ಸತಾಯಿಸುತ್ತಿದ್ರೆ ಮಾತ್ರ ನಿನ್ನ ಜೊತೆ ಠೂ ಠೂ ಠೂ. ಇಷ್ಟೆಲ್ಲಾ ಓದಿದ ಮೇಲಾದ್ರೂ ನಿಂಗೆ ಸಮಾಧಾನ ಆಯ್ತಾ? ಕಾಲ್ ಮಾಡಬೇಡ, ಮೆಸೇಜ್ ಮಾಡು ಪ್ಲೀಸ್ …
ಇಂತಿ ನಿನ್ನದೇ ಹುಡುಗಿ