Advertisement

ವಸತಿ ನಿಲಯಕ್ಕೆ ಸ್ಥಳ ನೀಡದಿರಿ

06:34 PM Dec 14, 2021 | Team Udayavani |

ರಾಯಚೂರು: ನಗರದ ಯಕ್ಲಾಸಪೂರ ಸೀಮಾಂತರದ ಸರ್ವೇ ನಂ.41ರ ವಿಸ್ತೀರ್ಣ 5 ಎಕರೆ 20 ಗುಂಟೆ ಪ್ರದೇಶ ಅಖೀಲ ಭಾರತ ವೀರಶೈವ ಮಹಾಸಭಾ ವಸತಿ ನಿಲಯಕ್ಕೆ ನೀಡಬಾರದು ಎಂದು ಒತ್ತಾಯಿಸಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಸೋಮವಾರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿತು.

Advertisement

ವಸತಿ ನಿಲಯಕ್ಕೆ ಸ್ಥಳ ನೀಡುವಂತೆ ಅಖೀಲ ಭಾರತ ವೀರಶೈವ ಮಹಾಸಭಾ ಕಂದಾಯ ಇಲಾಖೆಗೆ ಅರ್ಜಿ ಸಲ್ಲಿಸಿದ್ದು, ಕೂಡಲೇ ಮನವಿ ತಿರಸ್ಕರಿಸಬೇಕು. ಸರ್ಕಾರ ಈಗಾಗಲೇ ವೀರಶೈವ ರುದ್ರಭೂಮಿಗಾಗಿ ಎರಡು ಎಕರೆ ಜಮೀನು ನೀಡಲಾಗಿದೆ. ಹೀಗಾಗಿ ಸರ್ವೇ ನಂಬರ್‌ 41 ವಿಸ್ತೀರ್ಣ 5 ಎಕರೆ 20 ಗುಂಟೆಯನ್ನು ಸರ್ಕಾರಿ ಕಟ್ಟಡ ಹಾಗೂ ಸರ್ಕಾರಿ ವಸತಿ ನಿಲಯಗಳಿಗೆ ನೀಡಬೇಕು. ಈ ಬಗ್ಗೆ ನಿರ್ಲಕ್ಷé ವಹಿಸಿದರೆ, ಧರಣಿ ನಡೆಸಲಾಗುವುದು ಎಂದು ಎಚ್ಚರಿಸಿದರು.

ಈ ವೇಳೆ ಸಂಘಟನೆ ಸಂಚಾಲಕ ಶರಣಪ್ಪ ದಿನ್ನಿ, ಸದಸ್ಯರಾದ ಈರಪ್ಪ ಗಣಮೂರು, ಚನ್ನಬಸವ ಸೇರಿದಂತೆ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next